Air India: ಏರ್​ ಇಂಡಿಯಾ ಪೈಲಟ್ ಕಾಕ್​ಪಿಟ್​ ಒಳಗೆ ಗೆಳತಿಯ ಕರೆದೊಯ್ದ ಪ್ರಕರಣ: ಸಿಇಒ ವಿಲ್ಸನ್​ಗೆ ಶೋಕಾಸ್ ನೋಟಿಸ್

ವಿಮಾನದ ಕಾಕ್​ಪಿಟ್​ನಲ್ಲಿ ಪೈಲಟ್​ ಒಬ್ಬರು ತನ್ನ ಸ್ನೇಹಿತೆಯನ್ನು ಕೂರಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಏರ್​ ಇಂಡಿಯಾ ಸಿಇಒ ವಿಲ್ಸನ್​ ಕ್ಯಾಂಪ್​ಬೆಲ್​ಗೆ ಡಿಜಿಸಿಎ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

Air India: ಏರ್​ ಇಂಡಿಯಾ ಪೈಲಟ್ ಕಾಕ್​ಪಿಟ್​ ಒಳಗೆ ಗೆಳತಿಯ ಕರೆದೊಯ್ದ ಪ್ರಕರಣ: ಸಿಇಒ ವಿಲ್ಸನ್​ಗೆ ಶೋಕಾಸ್ ನೋಟಿಸ್
ಏರ್ ಇಂಡಿಯಾ ವಿಮಾನ
Follow us
|

Updated on: Apr 30, 2023 | 2:42 PM

ವಿಮಾನದ ಕಾಕ್​ಪಿಟ್​ನಲ್ಲಿ ಪೈಲಟ್​ ಒಬ್ಬರು ತನ್ನ ಗೆಳತಿಯನ್ನು ಕೂರಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಏರ್​ ಇಂಡಿಯಾ ಸಿಇಒ ವಿಲ್ಸನ್​ ಕ್ಯಾಂಪ್​ಬೆಲ್​ಗೆ ಡಿಜಿಸಿಎ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಏರ್‌ಲೈನ್‌ನ ಸುರಕ್ಷತೆ, ಭದ್ರತೆ ಮತ್ತು ಗುಣಮಟ್ಟ ಕಾರ್ಯಗಳ ಮುಖ್ಯಸ್ಥ ಹೆನ್ರಿ ಡೊನೊಹೋ ಅವರಿಗೂ ಕೂಡ ಶೋಕಾಸ್ ನೋಟಿಸ್ ನೀಡಲಾಗಿದೆ. ಮಹಿಳಾ ಸ್ನೇಹಿತೆಯನ್ನು ಕಾಕ್‌ಪಿಟ್‌ಗೆ ಪೈಲಟ್ ಅನುಮತಿಸಿದ ಬಗ್ಗೆ ವಿಮಾನದ ಕ್ಯಾಬಿನ್ ಸಿಬ್ಬಂದಿಯೊಬ್ಬರು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ (ಡಿಜಿಸಿಎ) ದೂರು ಸಲ್ಲಿಸಿದ್ದರು. ಫೆಬ್ರವರಿ 27 ರಂದು ಈ ಘಟನೆ ನಡೆದಿದ್ದು, ಈ ಕುರಿತು ವರದಿ ಮಾಡದ ಕಾರಣ ಏರ್​ ಇಂಡಿಯಾ ಸಿಇಒಗೆ ಶೋಖಾಸ್ ನೋಟಿಸ್ ಜಾರಿ ಮಾಡಲಾಗಿದೆ.

ಅಲ್ಲದೆ, ಘಟನೆಯ ತನಿಖೆಯಲ್ಲಿ ವಿಳಂಬವಾಗಿದೆ. ಶೋಕಾಸ್ ನೋಟಿಸ್‌ಗೆ ಉತ್ತರಿಸಲು ಇಬ್ಬರೂ ಕಾರ್ಯನಿರ್ವಾಹಕರಿಗೆ 15 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಏರ್ ಇಂಡಿಯಾದಿಂದ ಯಾವುದೇ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ. ಈ ತಿಂಗಳ ಆರಂಭದಲ್ಲಿ, ತನಿಖೆ ಪೂರ್ಣಗೊಳ್ಳುವವರೆಗೆ ದುಬೈ-ದೆಹಲಿ ವಿಮಾನದ ಸಂಪೂರ್ಣ ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕುವಂತೆ ಡಿಜಿಸಿಎ ಏರ್ ಇಂಡಿಯಾಗೆ ನಿರ್ದೇಶನ ನೀಡಿದೆ.

ಮತ್ತಷ್ಟು ಓದಿ: Australia: ವಿಮಾನದಲ್ಲಿ ಪ್ರಯಾಣಿಕರ ಹೊಡೆದಾಟ ಬೇರೆ ದಾರಿ ತೋಚದೆ ತುರ್ತು ಭೂಸ್ಪರ್ಶ

ಏಪ್ರಿಲ್ 21 ರಂದು, ವರದಿಯಾದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಮತ್ತು ತನಿಖೆಗಳು ನಡೆಯುತ್ತಿವೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ. ಅನಧಿಕೃತ ಜನರನ್ನು ಕಾಕ್‌ಪಿಟ್‌ಗೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ ಮತ್ತು ಅಂತಹ ಯಾವುದೇ ಪ್ರವೇಶವು ನಿಯಮಗಳ ಉಲ್ಲಂಘನೆಯಾಗಬಹುದು ಎಂದು ಹೇಳಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ