AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mann Ki Baat: ‘ಮನ್ ಕೀ ಬಾತ್’ಗೆ ಶತಕದ ಸಂಭ್ರಮ; ನರೇಂದ್ರ ಮೋದಿಗೆ ನ್ಯೂಜಿಲೆಂಡ್​ನ ಶತಾಯುಷಿ ಅಜ್ಜಿ ಮಾಡಿದ ಆಶೀರ್ವಾದ ಇದು

100 Year Old Woman In NZ Blesses Narnedra Modi: ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್​ನ100ನೇ ಕಾರ್ಯಕ್ರಮವನ್ನು ನ್ಯೂಜಿಲೆಂಡ್​ನ ಅಕ್ಲೆಂಡ್​ನಲ್ಲಿ ಭಾರತೀಯ ಸಮುದಾಯದ 100 ಮಹಿಳೆಯರು ಕೇಳಿ ಸಂಭ್ರಮಿಸಿದ್ದಾರೆ. ಇದರಲ್ಲಿ ಶತಾಯುಷಿ ಅಜ್ಜಿಯೊಬ್ಬರು ಪ್ರಧಾನಿ ನರೇಂದ್ರ ಮೋದಿಗೆ ಆಶೀರ್ವಾದ ಮಾಡಿದ್ದಾರೆ.

Mann Ki Baat: ‘ಮನ್ ಕೀ ಬಾತ್’ಗೆ ಶತಕದ ಸಂಭ್ರಮ; ನರೇಂದ್ರ ಮೋದಿಗೆ ನ್ಯೂಜಿಲೆಂಡ್​ನ ಶತಾಯುಷಿ ಅಜ್ಜಿ ಮಾಡಿದ ಆಶೀರ್ವಾದ ಇದು
ಮನ್ ಕೀ ಬಾತ್ ಕಾರ್ಯಕ್ರಮ ಪ್ರಸಾರದ ಸ್ಥಳದಲ್ಲಿ ಭಾರತೀಯ ಸಮುದಾಯದವರ ಪೈಕಿ ಶತಾಯುಷಿ ಅಜ್ಜಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 30, 2023 | 5:43 PM

Share

ಆಕ್ಲೆಂಡ್: ಚುನಾವಣಾ ಪ್ರಚಾರ ಆರ್ಭಟಗಳ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 30ರಂದು 100ನೇ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ (100th Episode of Mann Ki Baat) ದೇಶ ವಿದೇಶಗಳಲ್ಲಿನ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದರು. ಮನ್ ಕೀ ಬಾತ್​ನ 100ನೇ ಎಪಿಸೋಡ್​ನ ಬಾನುಲಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್​ನಲ್ಲಿ ಭಾರತೀಯ ಸಮುದಾಯದ 100ಕ್ಕೂ ಹೆಚ್ಚು ಮಹಿಳೆಯರು ಸಂಭ್ರಮಾಚರಣೆ ಮಾಡಿದ ಘಟನೆ ವರದಿಯಾಗಿದೆ. 100 ಮಹಿಳೆಯರಲ್ಲಿ ಶತಾಯುಷಿ ಅಜ್ಜಿಯೊಬ್ಬರೂ ಇದ್ದದ್ದು ವಿಶೇಷ. 100 ವರ್ಷಗಳಿಗೂ ಹೆಚ್ಚು ವಯಸ್ಸಾಗಿರುವ ರಾಮಿ ಬೆನ್ ಕಿರಿಯರೂ ನಾಚುವ ರೀತಿಯಲ್ಲಿ ಉತ್ಸಾಹದಿಂದ ಈ ಸಂಭ್ರಮಿಸಿದ್ದು ಎಲ್ಲರ ಗಮನ ಸೆಳೆಯಿತು. ಈ ಸಂದರ್ಭದಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಶೀರ್ವಾದ ಕೂಡ ಮಾಡಿದರು.

ಕಿವೀಸ್ ನಾಡಿನ ಶತಾಯುಷಿ ಅಜ್ಜಿ ಭಾರತ ಪ್ರಧಾನಿ ನರೇಂದ್ರ ಮೋದಿಗೆ ಮಾಡಿದ ಆಶೀರ್ವಾದ ಏನು?

‘ತನು ಮನ ಧನಗಳಿಂದ ನಿಮಗೆ ಖುಷಿ ಸಿಗಲಿ. ಒಳ್ಳೆಯ ಆಯುರಾರೋಗ್ಯ, ಸಂಪತ್ತು ಮತ್ತು ಮನಸು ನಿಮಗೆ ಒಲಿಯಲಿ’ ಎಂದು ರಾಮಿ ಬೆನ್ ಅವರು ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯ ಉಜ್ವಲ ಭವಿಷ್ಯ ಸಿಗಲೆಂದು ಹಾರೈಸಿದರು.

ಇದನ್ನೂ ಓದಿMann Ki Baat 100th Episode: ಜನರೇ ದೇವರು, ಮನ್​ ಕೀ ಬಾತ್​ ನನಗೊಂದು ವ್ರತವಿದ್ದಂತೆ, ಪ್ರಧಾನಿ ಮೋದಿ ಮನದಾಳದ ಮಾತುಗಳು

100ನೇ ಮನ್ ಕೀ ಬಾತ್ ಎಪಿಸೋಡ್ ಆಲಿಸಿದ ನ್ಯೂಜಿಲೆಂಡ್ ಉಪಪ್ರಧಾನಿ ವಿನ್​ಸ್ಟನ್ ಪೀಟರ್ಸ್

ಆಕ್ಲೆಂಡ್​ನಲ್ಲಿ ಆಯೋಜಿಸಲಾಗಿದ್ದ ಮನ್ ಕೀ ಬಾತ್ ಎಪಿಸೋಡ್ ಕಾರ್ಯಕ್ರಮ ಪ್ರಸಾರದ ಸ್ಥಳದಲ್ಲಿ ನ್ಯೂಜಿಲೆಂಡ್​ನ ಉಪಪ್ರಧಾನಿ ವಿನ್ಸ್​ಟನ್ ಪೀಟರ್ಸ್ ಹಾಜರಿದ್ದರು. ಮನ್ ಕೀ ಬಾತ್ ಕಾರ್ಯಕ್ರಮದ ಬಗ್ಗೆ ಅವರು ಈ ಸಂದರ್ಭದಲ್ಲಿ ಹೆಮ್ಮೆ ವ್ಯಕ್ತಪಡಿಸಿದರು.

‘ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಖುಷಿಯಾತ್ತದೆ. ಪಿಎಂ ಮೋದಿ ಅವರನ್ನು ಹಲವಾರು ಸಂದರ್ಭದಲ್ಲಿ ಭೇಟಿ ಮಾಡುವ ಭಾಗ್ಯ ನನಗೆ ಸಿಕ್ಕಿದೆ. ಈ ಮನ್ ಕೀ ಬಾತ್ ಕಾರ್ಯಕ್ರಮ ಅವರ ಮನದಾಳದಿಂದ ಬರುವ ಸಂವಾದವಾಗಿದೆ. 100ನೇ ಎಪಿಸೋಡ್ ಬಗ್ಗೆ ನನಗೆ ಹೆಮ್ಮೆ ಎನಿಸುತ್ತಿದೆ’ ಎಂದು ಕಿವೀಸ್ ನಾಡಿನ ಉಪಪ್ರಧಾನಿಗಳು ಹೇಳಿದರು.

ಇದನ್ನೂ ಓದಿMann Ki Baat​: ಮನದ ಮಾತಿಗೆ ಶತ ಸಂಭ್ರಮ, 100 ಕೋಟಿ ಜನರನ್ನು ತಲುಪಿದ ಮನ್ ಕೀ ಬಾತ್

ಹಲವು ವಿದೇಶಗಳಲ್ಲಿ ಭಾರತೀಯರನ್ನು ಬೆಸೆಯುತ್ತಿರುವ ಮನ್ ಕೀ ಬಾತ್

2014 ಅಕ್ಟೋಬರ್ 3ರಂದು ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ ಮನ್ ಕೀ ಬಾತ್ ಕಾರ್ಯಕ್ರಮ ತಿಂಗಳಿಗೊಮ್ಮೆ ಇರುತ್ತದೆ. ರಾಜಕೀಯ ಹೊರತಾಗಿ ಹಲವಾರು ವಿಚಾರಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಈ ಕಾರ್ಯಕ್ರಮದಲ್ಲಿ ಮಾತನಾಡುತ್ತಾರೆ. 500ಕ್ಕೂ ಹೆಚ್ಚು ರೇಡಿಯೋ ಕೇಂದ್ರಗಳಿಂದ ಇದರ ಪ್ರಸಾರ ಆಗುತ್ತದೆ. ಅಲ್ಲದೇ ಸೋಷಿಯಲ್ ಮೀಡಿಯಾಗಳಲ್ಲೂ ಪ್ರಸಾರ ಇರುತ್ತದೆ. ಕನ್ನಡವೂ ಸೇರಿದಂತೆ 22 ಭಾರತೀಯ ಭಾಷೆಗಳಲ್ಲಿ ಇದರ ಮರುಪ್ರಸಾರ ಆಗುತ್ತದೆ. ಫ್ರೆಂಚ್, ಮಂದಾರಿನ್, ಇಂಡೋನೇಷ್ಯನ್, ಟಿಬೆಟನ್, ಬರ್ಮೀಸ್, ಬಲೂಚಿ, ಅರೇಬಿಕ್, ಪಶ್ತೂನ್, ಪರ್ಷಿಯನ್, ದರಿ, ಸ್ವಾಹಿಲಿ ಸೇರಿದಂತೆ 11 ವಿದೇಶೀ ಭಾಷೆಗಳಲ್ಲೂ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮ ಪ್ರಸಾರ ಆಗುತ್ತದೆ.

ವಿದೇಶಗಳಲ್ಲಿ ಭಾರತೀಯ ಸಮುದಾಯದ ಜನರು ಒಟ್ಟಿಗೆ ಸೇರಿ ಕಾರ್ಯಕ್ರಮವನ್ನು ಆಲಿಸುವುದಿದೆ. ಲಂಡನ್​ನ ಭಾರತೀಯ ರಾಯಭಾರ ಕಚೇರಿಯು ಈ ಬಾರಿ ಮನ್ ಕೀ ಬಾತ್ ಕಾರ್ಯಕ್ರಮ ಕೇಳಲು ಸಮುದಾಯದವರನ್ನು ಆಹ್ವಾನಿಸಿತ್ತು. ಅಮೆರಿಕದ ನ್ಯೂಜೆರ್ಸಿ ಇತ್ಯಾದಿ ಹಲವು ಕಡೆ ಕಾರ್ಯಕ್ರಮ ಕೇಳಲು ಸ್ಥಳದ ವ್ಯವಸ್ಥೆ ಮಾಡಲಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:43 pm, Sun, 30 April 23

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!