ಏರ್ ಇಂಡಿಯಾ ವಿಮಾನ ಸುರಕ್ಷತಾ ಮುಖ್ಯಸ್ಥರ ವಿರುದ್ಧ ಡಿಜಿಸಿಎ ಕ್ರಮ, ಒಂದು ತಿಂಗಳ ಕಾಲ ಅಮಾನತು
ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ವಿಮಾನ(Air India)ದ ಸುರಕ್ಷತಾ ಮುಖ್ಯಸ್ಥರ ವಿರುದ್ಧ ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಷನ್(DGCA) ಕ್ರಮ ಕೈಗೊಂಡಿದ್ದು, ಒಂದು ತಿಂಗಳುಗಳ ಕಾಲ ಅಮಾನತುಗೊಳಿಸಿದೆ. ಡಿಜಿಸಿಎ ಎರಡು ದಿನಗಳ ಕಾಲ ಆಡಿಟ್, ಅಪಘಾತ ತಡೆ ಕ್ರಮ ಮತ್ತು ಅಗತ್ಯ ತಂತ್ರಜ್ಞಾನಗಳು ಸೇರಿದಂತೆ ಹಲವು ಅಂಶಗಳನ್ನು ಪರಿಶೀಲಿಸುತ್ತಿದೆ. ಭದ್ರತಾ ಪ್ರೋಟೊಕಾಲ್ಗಳಿಗೆ ಏರ್ ಇಂಡಿಯಾದಲ್ಲಿ ಗಮನಾರ್ಹ ಸಮಸ್ಯೆಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಫ್ಲೈಟ್ ಸೇಫ್ಟಿ ಮುಖ್ಯಸ್ಥ ಕ್ಯಾಪ್ಟನ್ ರಾಜೀವ್ ಗುಪ್ತಾ ಅವರನ್ನು ಒಂದು ತಿಂಗಳುಗಳ ಕಾಲ ಅಮಾನತುಗೊಳಿಸಿ ಆದೇಶಿಸಿದೆ.

ಜುಲೈ 25 ಹಾಗೂ 26ರಂದು ಎರಡು ದಿನಗಳ ಕಾಲ ವಿಮಾನಯಾನ ಸಂಸ್ಥೆಯು ಪರಿಶೀಲನೆ ಕೈಗೊಂಡು ಹಲವು ಬಗೆಯ ನ್ಯೂನತೆಗಳನ್ನು ಎತ್ತಿತೋರಿಸಿತ್ತು. ಏರ್ ಇಂಡಿಯಾ ನೀಡಿದ ವರದಿಯನ್ನು ಮತ್ತೊಮ್ಮೆ ಡಿಜಿಸಿಎ ಪರಿಶೀಲಿಸಿತು ಮತ್ತು ನಂತರ ಅದಕ್ಕೆ ಕಾರಣರಾದವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಅಲ್ಲದೆ ಯಾವುದೇ ಲೆಕ್ಕ ಪರಿಶೋಧಕರಿಗೆ ಆಡಿಟ್, ಮಾನಿಟರಿಂಗ್ ಅಥವಾ ಸ್ಪಾಟ್ ಚೆಕ್ ತಪಾಸಣೆ ವರದಿಗಳನ್ನು ಸಲ್ಲಿಸದಂತೆ ಡಿಜಿಸಿಎ ಏರ್ ಇಂಡಿಯಾಗೆ ನಿರ್ದೇಶನ ನೀಡಿದೆ.
ಮತ್ತಷ್ಟು ಓದಿ: Air India: ದುಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೆಲವೇ ಗಂಟೆಗಳಲ್ಲಿ ಕೇರಳಕ್ಕೆ ವಾಪಸ್
ಡಿಜಿಸಿಎಗೆ ಸಲ್ಲಿಸಿರುವ ತನಿಖಾ ವರದಿಯಲ್ಲಿ 13 ಭದ್ರತಾ ಅಂಶಗಳ ಬಗ್ಗೆ ತನಿಖೆ ನಡೆಸುವಂತೆ ವಿಮಾನಯಾನ ಸಂಸ್ಥೆಗೆ ತಿಳಿಸಲಾಗಿದೆ. ಆದರೆ ವಿಮಾನಯಾನ ಸಂಸ್ಥೆಯು ಎಲ್ಲಾ 13 ವಿಷಯಗಳಲ್ಲಿ ಸುಳ್ಳು ವರದಿಗಳನ್ನು ಸಿದ್ಧಪಡಿಸಿತ್ತು ಎಂದು ಡಿಜಿಸಿಎ ಹೇಳಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ