Air India: ಮೇ 3ರಿಂದ ಈ ಮಾರ್ಗದಲ್ಲಿ ಏರ್ ಇಂಡಿಯಾ ವಿಮಾನ ಸೇವೆ ಆರಂಭ
ಏರ್ ಇಂಡಿಯಾ(Air India) ವಿಮಾನವು ಮೇ 3 ರಿಂದ ಈ ಮಾರ್ಗದಲ್ಲಿ ಸೇವೆಯನ್ನು ಆರಂಭಿಸಲಿದೆ. ಮುಂಬೈ-ಕೊಯಮತ್ತೂರು ನಡುವೆ ಹಾರಾಟ ಶುರುವಾಗಲಿದೆ.
ಏರ್ ಇಂಡಿಯಾ(Air India) ವಿಮಾನವು ಮೇ 3 ರಿಂದ ಈ ಮಾರ್ಗದಲ್ಲಿ ಸೇವೆಯನ್ನು ಆರಂಭಿಸಲಿದೆ. ಮುಂಬೈ-ಕೊಯಮತ್ತೂರು ನಡುವೆ ಹಾರಾಟ ಶುರುವಾಗಲಿದೆ. A320-Neo ಫ್ಲೀಟ್ ವಿಮಾನವು ಎಲ್ಲಾ ಏಳು ದಿನಗಳಲ್ಲಿ ಪ್ರತಿದಿನ ಕಾರ್ಯನಿರ್ವಹಿಸುತ್ತದೆ. ವಿಮಾನವು AI 609 ಮುಂಬೈನಿಂದ ಬೆಳಿಗ್ಗೆ 6:30 ಕ್ಕೆ ಹೊರಟು 8:20 ಕ್ಕೆ ಕೊಯಮತ್ತೂರು ತಲುಪುತ್ತದೆ. ಹಿಂದಿರುಗುವ AI 608 ವಿಮಾನವು ಕೊಯಮತ್ತೂರಿನಿಂದ 9 ಗಂಟೆಗೆ ಹೊರಟು 11 ಗಂಟೆಗೆ ಮುಂಬೈ ತಲುಪಲಿದೆ.
ಅದೇ ವಿಮಾನವು ಪ್ರಯಾಣಿಕರಿಗೆ ಮುಂಬೈನಿಂದ ಲಂಡನ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋಗೆ ಹಾರಲು ಅನುವು ಮಾಡಿಕೊಡುತ್ತದೆ ಎಂದು ಹೇಳಲಾಗಿದೆ.
ಮತ್ತಷ್ಟು ಓದಿ: Air India: ಏರ್ ಇಂಡಿಯಾ ಪೈಲಟ್ ಕಾಕ್ಪಿಟ್ ಒಳಗೆ ಗೆಳತಿಯ ಕರೆದೊಯ್ದ ಪ್ರಕರಣ: ಸಿಇಒ ವಿಲ್ಸನ್ಗೆ ಶೋಕಾಸ್ ನೋಟಿಸ್
ಮುಂಬೈನಿಂದ ಕೊಯಮತ್ತೂರಿಗೆ ಈಗಾಗಲೇ ಇಂಡಿಗೋದಿಂದ ಎರಡು ವಿಮಾನ, ವಿಸ್ತಾರದಿಂದ ಒಂದು ವಿಮಾನ ಹಾರಾಟ ನಡೆಸುತ್ತಿದೆ.
ಪ್ರಸ್ತುತ, ಕೊಯಮತ್ತೂರು ವಿಮಾನ ನಿಲ್ದಾಣಕ್ಕೆ ಪ್ರತಿದಿನ 23 ದೇಶೀಯ ವಿಮಾನಗಳು ಮತ್ತು ಸಿಂಗಾಪುರ ಮತ್ತು ಶಾರ್ಜಾದಿಂದ ಎರಡು ಅಂತಾರಾರಾಷ್ಟ್ರೀಯ ವಿಮಾನಗಳು ಹಾರಾಟ ನಡೆಸುತ್ತದೆ. ದಿನಕ್ಕೆ ಸರಾಸರಿ 8,750 ಪ್ರಯಾಣಿಕರು ವಿಮಾನ ನಿಲ್ದಾಣವನ್ನು ಬಳಸುತ್ತಾರೆ.
ಏರ್ ಇಂಡಿಯಾ (AI/AIC) ಭಾರತದ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾಗಿದೆ. ಸರ್ಕಾರಿ ಸ್ವಾಮ್ಯದ ಉದ್ಯಮವಾದ ಏರ್ ಇಂಡಿಯಾ ಲಿಮಿಟೆಡ್ ಒಡೆತನದಲ್ಲಿದೆ. ಏರ್ ಇಂಡಿಯಾ ನ್ಯಾಷನಲ್ ಏವಿಯೇಷನ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್ ನ ಭಾಗವಾಗಿದೆ . ನಾಲ್ಕು ಖಂಡಗಳಾದ್ಯಂತ ಏರ್ ಇಂಡಿಯಾವು ಸುಮಾರು 60 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಸ್ಥಳಗಳಿಗೆ ಸೇವೆ ಸಲ್ಲಿಸುತ್ತದೆ.
ಈ ವಿಮಾನಯಾನ ಸಂಸ್ಥೆಯನ್ನು 1932ರಲ್ಲಿ ಜೆ.ಆರ್.ಡಿ. ಟಾಟಾ ರವರು ಟಾಟಾ ಏರ್ಲೈನ್ಸ್ ಎ೦ದು ಸ್ಥಾಪಿಸಿದರು. 1946 ರಲ್ಲಿ ಕಂಪೆನಿಯ ಹೆಸರು ಏರ್ ಇಂಡಿಯಾ ಇಂಟರ್ನ್ಯಾಷನಲ್ ಆಗಿ ಬದಲಾಯಿತು. ಇದರ ಹೆಸರು 1953 ರಲ್ಲಿ ಪ್ರಸಕ್ತ ಹೆಸರು ಏರ್ ಇಂಡಿಯಾ ಎ೦ದು ಬದಲಾಯಿತು .
ಆ ಹೊತ್ತಿಗೆ ಏರ್ ಇಂಡಿಯಾವು ಭಾರತ ಸರಕಾರದ ಒಡೆತನದಲ್ಲಿತ್ತು. 1999 ರಿಂದ ಏರ್ ಇಂಡಿಯಾ ಮತ್ತು ಇಂಡಿಯನ್ ಏರ್ಲೈನ್ಸ್ಗಳನ್ನು ವಿಲೀನಗೊಳಿಸಲು ಬಹಳಷ್ಟು ಪ್ರಯತ್ನಗಳು ನಡೆಯಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ