ಮೋದಿಯವರಂಥಾ ನಾಯಕ ಬೇರೆ ಇಲ್ಲ: ಪ್ರಧಾನಿಯನ್ನು ಹೊಗಳಿದ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್

|

Updated on: Jul 04, 2023 | 8:57 PM

ಶಿಂಧೆ-ಫಡ್ನವಿಸ್ ಸರ್ಕಾರಕ್ಕೆ ಏಕೆ ಸೇರಲು ನಿರ್ಧರಿಸಿದ್ದೀರಿ ಎಂದು ಅಜಿತ್ ಪವಾರ್ ಅವರಲ್ಲಿ ಕೇಳಿದಾಗ, ಪ್ರಧಾನಿ ಮೋದಿ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಅವರು ಭಾನುವಾರ ಹೇಳಿದ್ದರು.

ಮೋದಿಯವರಂಥಾ ನಾಯಕ ಬೇರೆ ಇಲ್ಲ: ಪ್ರಧಾನಿಯನ್ನು ಹೊಗಳಿದ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್
ಅಜಿತ್ ಪವಾರ್
Follow us on

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಂತಹ ನಾಯಕ ಬೇರೆ ಇಲ್ಲ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಮಂಗಳವಾರ ಹೇಳಿದ್ದಾರೆ.ಬಿಜೆಪಿ-ಶಿವಸೇನೆ (ಶಿಂಧೆ ಬಣ) ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಲು ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (NCP)ಯಲ್ಲಿ ಬಂಡಾಯವೆದ್ದ 63 ವರ್ಷದ ನಾಯಕ, ದಕ್ಷಿಣ ಮುಂಬೈನಲ್ಲಿ ಎನ್‌ಸಿಪಿ ಬಣದ ಹೊಸ ಕಚೇರಿ ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು. ದೇಶ ಮೋದಿ ನಾಯಕತ್ವದಲ್ಲಿ ಮುನ್ನಡೆಯುತ್ತಿದೆ. ಅವರನ್ನು ಬೆಂಬಲಿಸಲು ನಾವು ಸರ್ಕಾರವನ್ನು ಸೇರಿಕೊಂಡಿದ್ದೇವೆ. ಅವರಿಗೆ ಪರ್ಯಾಯವಿಲ್ಲ ಎಂದು ಅಜಿತ್ ಪವಾರ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ

ಶಿಂಧೆ-ಫಡ್ನವಿಸ್ ಸರ್ಕಾರಕ್ಕೆ ಏಕೆ ಸೇರಲು ನಿರ್ಧರಿಸಿದ್ದೀರಿ ಎಂದು ಅಜಿತ್ ಪವಾರ್ ಅವರಲ್ಲಿ ಕೇಳಿದಾಗ, ಪ್ರಧಾನಿ ಮೋದಿ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಅವರು ಭಾನುವಾರ ಹೇಳಿದ್ದರು.

ಏಳನೇ ಬಾರಿಗೆ ರಾಜ್ಯದ ಉಪ ಮುಖ್ಯಮಂತ್ರಿಯಾದ ಅಜಿತ್ ಪವಾರ್ ಅವರು ಎನ್‌ಸಿಪಿಯನ್ನು ಎಂದಿಗೂ ತೊರೆಯುವುದಿಲ್ಲ ಎಂದು ಹೇಳುವಾಗಲೆಲ್ಲಾ ಹಲವಾರು ಸಂದರ್ಭಗಳಲ್ಲಿ ಮೋದಿಯನ್ನು ಹೊಗಳಿದ್ದರು. ಆದಾಗ್ಯೂ, ಭಾನುವಾರ ಅವರು ಛಗನ್ ಭುಜಬಲ್, ದಿಲೀಪ್ ವಾಲ್ಸೆ ಪಾಟೀಲ್, ಸಂಜಯ್ ಬನ್ಸೋಡೆ ಮತ್ತು ಅದಿತಿ ತಟ್ಕರೆ ಸೇರಿದಂತೆ ಎಂಟು ಎನ್‌ಸಿಪಿ ಶಾಸಕರೊಂದಿಗೆ ಆಡಳಿತ ಸರ್ಕಾರಕ್ಕೆ ಸೇರಲು ಪ್ರಮಾಣ ವಚನ ಸ್ವೀಕರಿಸಿದರು.

ಇದನ್ನೂ ಓದಿ: ರಾಷ್ಟ್ರವಾದಿ ಭವನಕ್ಕೆ ಬೀಗ; ಕೀ ಕಳೆದುಕೊಂಡು ಹೊಸ ಕಚೇರಿಯ ಬಾಗಿಲು ತೆರೆಯಲಾಗದೆ ಒದ್ದಾಡಿದ ಅಜಿತ್ ಪವಾರ್ ಬಣ

ಶಿಂಧೆ ಬಣದ ಸದಸ್ಯರು ಪವಾರ್ ಸೇರ್ಪಡೆಗೊಂಡಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ಸುದ್ದಿಗೆ ಪ್ರತಿಕ್ರಿಯಿಸಿದ ಅವರು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಿದ್ದೇವೆ. ಅಸಮಾಧಾನದ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ