ರಾಷ್ಟ್ರವಾದಿ ಭವನಕ್ಕೆ ಬೀಗ; ಕೀ ಕಳೆದುಕೊಂಡು ಹೊಸ ಕಚೇರಿಯ ಬಾಗಿಲು ತೆರೆಯಲಾಗದೆ ಒದ್ದಾಡಿದ ಅಜಿತ್ ಪವಾರ್ ಬಣ

 ಬೀಗ ಹಾಕಿದ ಕಚೇರಿ ಹೊರಗೆ ಪಕ್ಷದ ನಾಯಕರು ಕೂತಿದ್ದರು. ಬಾಗಿಲ ತೆರೆಯಲಾಗದೆ ಒದ್ದಾಡುತ್ತಿದ್ದ ಕಾರ್ಯಕರ್ತರು ಒಂದೆಡೆಯಾದರೆ ಕೀಗಳನ್ನು ಹುಡುಕುವವರು ಮತ್ತೊಂದೆದಡೆ. ಅಜಿತ್ ಪವಾರ್ ಉದ್ಘಾಟನೆಗೆ ಮಾಡಲಿರುವ ಕಚೇರಿಯಲ್ಲಿ ಸಿದ್ಧತೆ ನಡೆಸಲು ಪಕ್ಷದ ಸದಸ್ಯರು ಬೀಗ ಒಡೆಯಲು ಪ್ರಯತ್ನಿಸುತ್ತಿದ್ದರು.

ರಾಷ್ಟ್ರವಾದಿ ಭವನಕ್ಕೆ ಬೀಗ; ಕೀ ಕಳೆದುಕೊಂಡು ಹೊಸ ಕಚೇರಿಯ ಬಾಗಿಲು ತೆರೆಯಲಾಗದೆ ಒದ್ದಾಡಿದ ಅಜಿತ್ ಪವಾರ್ ಬಣ
'ರಾಷ್ಟ್ರವಾದಿ ಭವನ'ಕ್ಕೆ ಬೀಗ
Follow us
|

Updated on:Jul 04, 2023 | 6:00 PM

ಮುಂಬೈ: ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (NCP)ಯೊಳಗಿನ ನಾಯಕತ್ವ ಸಮಸ್ಯೆಯನ್ನು ಪರಿಹರಿಸಲು ನಡೆಯುತ್ತಿರುವ ಚರ್ಚೆಗಳು ಮತ್ತು ಕಸರತ್ತಿನ ನಡುವೆ, ಅಜಿತ್ ಪವಾರ್ (Ajit Pawar) ನೇತೃತ್ವದ ಬಣ ಇಂದು ಬೆಳಿಗ್ಗೆ ಕಚೇರಿ ಕೀ ಕಳೆದುಕೊಂಡು ಮುಜುಗರಕ್ಕೊಳಗಾಗಿದೆ. ಈಗ ಮಹಾರಾಷ್ಟ್ರ(Maharashtra)  ಉಪಮುಖ್ಯಮಂತ್ರಿ ಆಗಿರುವ ಅಜಿತ್ ಪವಾರ್ ಅವರು ರಾಜ್ಯ ಸಚಿವಾಲಯದ ಬಳಿ ಪಕ್ಷದ ಹೊಸ ಕಚೇರಿಯನ್ನು ಉದ್ಘಾಟಿಸಬೇಕಿತ್ತು. ಆದರೆ ಇಂದು ಬೆಳಗ್ಗೆ ಅಜಿತ್ ಪವಾರ್ ಅವರ ನಿಷ್ಠಾವಂತ ನಾಯಕರು ಹೊಸ ‘ರಾಷ್ಟ್ರವಾದಿ ಭವನ’ವನ್ನು ತಲುಪಿದಾಗ, ಅದಕ್ಕೆ ಬೀಗ ಹಾಕಿರುವುದು ಮತ್ತು ಕೀಗಳು ನಾಪತ್ತೆಯಾಗಿರುವುದು ಕಂಡುಬಂದಿತು.

ಬೀಗ ಹಾಕಿದ ಕಚೇರಿ ಹೊರಗೆ ಪಕ್ಷದ ನಾಯಕರು ಕೂತಿದ್ದರು. ಬಾಗಿಲ ತೆರೆಯಲಾಗದೆ ಒದ್ದಾಡುತ್ತಿದ್ದ ಕಾರ್ಯಕರ್ತರು ಒಂದೆಡೆಯಾದರೆ ಕೀಗಳನ್ನು ಹುಡುಕುವವರು ಮತ್ತೊಂದೆದಡೆ. ಅಜಿತ್ ಪವಾರ್ ಉದ್ಘಾಟನೆಗೆ ಮಾಡಲಿರುವ ಕಚೇರಿಯಲ್ಲಿ ಸಿದ್ಧತೆ ನಡೆಸಲು ಪಕ್ಷದ ಸದಸ್ಯರು ಬೀಗ ಒಡೆಯಲು ಪ್ರಯತ್ನಿಸುತ್ತಿದ್ದರು. ಹೇಗೋ ಬೀಗ ಒಡೆದು ಒಳಗೆ ಹೋದರೆ ಒಳಗಿನ ಕೋಣೆಗಳ ಬಾಗಿಲುಗಳು ಸಹ ಲಾಕ್ ಆಗಿದ್ದವು.

ಅಜಿತ್ ಪವಾರ್ ಅವರು ಪಕ್ಷದ ಕಚೇರಿಗೆ ಆಯ್ಕೆ ಮಾಡಿದ್ದ ಬಂಗಲೆ ಮಹಾರಾಷ್ಟ್ರ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಮತ್ತು ಉದ್ಧವ್ ಠಾಕ್ರೆ ಅವರ ನಿಷ್ಠಾವಂತ ಅಂಬಾದಾಸ್ ದಾನ್ವೆ ಅವರಿಗೆ ಸೇರಿತ್ತು. ದಾನ್ವೆ ಅವರಿಗೆ ಈಗ ಮತ್ತೊಂದು ಬಂಗಲೆ ಮಂಜೂರು ಮಾಡಲಾಗಿದೆ.

ದಾನ್ವೆ ಅವರ ಆಪ್ತ ಸಹಾಯಕರು ಬಂಗಲೆಯಲ್ಲಿ ಮಲಗಿದ್ದರು ಎಂದು ಎನ್‌ಸಿಪಿ ನಾಯಕ ಅಪ್ಪಾ ಸಾವಂತ್ ಎನ್‌ಡಿಟಿವಿಗೆ ತಿಳಿಸಿದ್ದಾರೆ. ನಾವು ಒಳಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದೇವೆ, ಆದರೆ ಪಿಎ ಬೀಗ ಹಾಕಿಕೊಂಡು ಹೋದರು. ನಾವು ಅವರನ್ನು ಕರೆದಿದ್ದೇವೆ. ಅವರು ಮಂತ್ರಾಲಯಕ್ಕೆ ಹೋಗುತ್ತಿದ್ದಾರೆ. ಕೀಗಳನ್ನು ನಮಗೆ ಹಸ್ತಾಂತರಿಸುವುದಾಗಿ ಹೇಳಿದರ ಎಂದು ಎನ್‌ಸಿಪಿಯ ಮುಂಬೈ ವಿಭಾಗ ಉಪಾಧ್ಯಕ್ಷ ಸಾವಂತ್ ಹೇಳಿದರು. ಅದೇ ವೇಳೆ ಇದರ ಹಿಂದೆ ಷಡ್ಯಂತ್ರವಿದೆ ಎಂದು ಎನ್‌ಸಿಪಿ ನಾಯಕ ಆರೋಪಿಸಿದ್ದಾರೆ.

ಅಜಿತ್ ಪವಾರ್ ಮತ್ತು ಅವರ ಮಾವ ಶರದ್ ಪವಾರ್ ನೇತೃತ್ವದ ಬಣಗಳು ತಮ್ಮ ಮುಂದಿನ ನಡೆಗಳನ್ನು ಯೋಜಿಸಲು ಪ್ರಮುಖ ಸಭೆಗಳನ್ನು ನಡೆಸುತ್ತಿದ್ದಾರೆ. ಎನ್‌ಸಿಪಿಯ ಮಿತ್ರಪಕ್ಷಗಳಾದ ಕಾಂಗ್ರೆಸ್ ಮತ್ತು ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಕೂಡ ಕಳೆದೆರಡು ದಿನಗಳ ಆಘಾತಕಾರಿ ಬೆಳವಣಿಗೆಗಳ ಕುರಿತು ಚರ್ಚಿಸಲು ಇಂದು ಸಭೆ ನಡೆಸುತ್ತಿದ್ದಾರೆ.

ಎರಡೂ ಬಣಗಳು ಕೂಡ ತಾವು ನಿಜವಾದ ಎನ್‌ಸಿಪಿಯನ್ನು ಪ್ರತಿನಿಧಿಸುತ್ತೇವೆ ಎಂದು ಹೇಳಿಕೊಂಡಿವೆ, ಆದರೆ ಅವರನ್ನು ಬೆಂಬಲಿಸುವ ಶಾಸಕರ ಸಂಖ್ಯೆಯನ್ನು ಅವರು ವಿವರಿಸಿಲ್ಲ.

ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಮುನ್ನ 4 ರಾಜ್ಯಗಳ ಅಧ್ಯಕ್ಷರನ್ನು ನೇಮಕ ಮಾಡಿದ ಬಿಜೆಪಿ

ಅಜಿತ್ ಪವಾರ್ ಮತ್ತು ಇತರ ಎಂಟು ಶಾಸಕರು ಏಕನಾಥ್ ಶಿಂಧೆ ನೇತೃತ್ವದ ಸರ್ಕಾರಕ್ಕೆ ಸೇರ್ಪಡೆಗೊಂಡ ಭಾನುವಾರ ಸಮಾರಂಭದಲ್ಲಿ ಭಾಗವಹಿಸಿದ್ದಕ್ಕಾಗಿ ಶರದ್ ಪವಾರ್ ಬಂಡಾಯಗಾರರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಪ್ರಫುಲ್ ಪಟೇಲ್ ಅವರಂತಹ ಹಿರಿಯ ನಾಯಕರನ್ನು ಎನ್​​​ಸಿಪಿ ವಜಾ ಮಾಡಿದೆ ಅಜಿತ್ ಪವಾರ್ ಮತ್ತು ಅವರ ಎಂಟು ನಿಷ್ಠಾವಂತರನ್ನು ಅನರ್ಹಗೊಳಿಸಬೇಕೆಂದು ಪವಾರ್ ನೇತೃತ್ವದ ಬಣ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಅವರಿಗೆ ಮನವಿ ಸಲ್ಲಿಸಿದೆ. ಎನ್‌ಸಿಪಿಯ ಸಂಸ್ಥಾಪಕ ಶರದ್ ಪವಾರ್ ಅವರು ಪಕ್ಷದ ಮುಖ್ಯಸ್ಥರಾಗಿ ಮುಂದುವರಿಯುತ್ತಾರೆ ಎಂದು ಒತ್ತಿಹೇಳಿ ಪಕ್ಷವು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:57 pm, Tue, 4 July 23

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ