ವಿದ್ಯಾರ್ಥಿ ನಾಯಕನಿಂದ ಮುಖ್ಯಮಂತ್ರಿ ಸ್ಥಾನದವರೆಗೆ: ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ರಾಜಕೀಯ ಪಯಣ

Mohan Yadav Political Journey: ಮಾರ್ಚ್ 1965 ರಲ್ಲಿ ಉಜ್ಜಯಿನಿಯಲ್ಲಿ ಜನಿಸಿದ ಮೋಹನ್ ಯಾದವ್ ಅವರು ವಿದ್ಯಾರ್ಥಿಯಾಗಿದ್ದಾಗ ರಾಜಕೀಯ ಪ್ರವೇಶಿಸಿದರು. ತನ್ನ ವ್ಯಾಪಾರ ಮತ್ತು ರಾಜಕೀಯ ವೃತ್ತಿಜೀವನವನ್ನು ಏಕಕಾಲದಲ್ಲಿ ಮುಂದುವರಿಸಿದ ಅವರು ವಿಕ್ರಮ್ ವಿಶ್ವವಿದ್ಯಾಲಯದಿಂದ ತಮ್ಮ ಪಿಎಚ್‌ಡಿ ಪಡೆದಿದ್ದಾರೆ. ಅವರ ರಾಜಕೀಯ ಪಯಣದ ಬಗ್ಗೆ ಮತ್ತಷ್ಟು...

ವಿದ್ಯಾರ್ಥಿ ನಾಯಕನಿಂದ ಮುಖ್ಯಮಂತ್ರಿ ಸ್ಥಾನದವರೆಗೆ: ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ರಾಜಕೀಯ ಪಯಣ
ಮೋಹನ್ ಯಾದವ್
Follow us
|

Updated on: Dec 11, 2023 | 6:33 PM

ದೆಹಲಿ ಡಿಸೆಂಬರ್ 11: ಒಂದು ವಾರದ ಕುತೂಹಲಕ್ಕೆ ತೆರೆ ಎಳೆದು ಬಿಜೆಪಿ (BJP) ಇಂದು(ಸೋಮವಾರ) ಮೋಹನ್ ಯಾದವ್ (Mohan Yadav) ಅವರನ್ನು ಮಧ್ಯಪ್ರದೇಶದ (Madhya Pradesh)ಹೊಸ ಮುಖ್ಯಮಂತ್ರಿ ಎಂದು ಘೋಷಿಸಿತು. ಯಾದವ್ ಅವರು ಉಜ್ಜಯಿನಿ ದಕ್ಷಿಣ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ನವೆಂಬರ್ 17 ರಂದು ನಡೆದ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 163 ಸ್ಥಾನಗಳನ್ನು ಪಡೆದುಕೊಂಡಿದೆ. ಡಿಸೆಂಬರ್ 3 ರಂದು ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ಪ್ರಕಟಿಸಲಾಯಿತು.

ಉಜ್ಜಯಿನಿ ಕ್ಷೇತ್ರದಿಂದ ಮೂರು ಬಾರಿ ಶಾಸಕ

ಮೂವರು ಕೇಂದ್ರ ವೀಕ್ಷಕರು ಭಾಗವಹಿಸಿದ್ದ ರಾಜ್ಯದ ರಾಜಧಾನಿ ಭೋಪಾಲ್‌ನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯ ನಂತರ 58 ವರ್ಷದ ಮೋಹನ್ ಯಾದವ್ ಅವರ ಹೆಸರನ್ನು ಅಂತಿಮಗೊಳಿಸಲಾಯಿತು. ಹೊಸ ಸಿಎಂ ಮುಖ ಈ ಹಿಂದೆ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಮೋಹನ್ ಯಾದವ್ ಉಜ್ಜಯಿನಿ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿದ್ದಾರೆ. ಅವರು ಮೊದಲು 2013 ರಲ್ಲಿ ಶಾಸಕರಾಗಿ ಆಯ್ಕೆಯಾದರ. ಆನಂತರ 2018 ರಲ್ಲಿ ಎರಡನೇ ಬಾರಿಗೆ ಅದೇ ಸ್ಥಾನವನ್ನು ಗೆದ್ದರು. ಹೆಸರಾಂತ ಉದ್ಯಮಿಯೂ ಆಗಿರುವ ಇವರು ಹಲವಾರು ವರ್ಷಗಳಿಂದ ಬಿಜೆಪಿಯಲ್ಲಿದ್ದಾರೆ

ವಿಕ್ರಮ್ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ

ಮಾರ್ಚ್ 1965 ರಲ್ಲಿ ಉಜ್ಜಯಿನಿಯಲ್ಲಿ ಜನಿಸಿದ ಮೋಹನ್ ಯಾದವ್ ಅವರು ವಿದ್ಯಾರ್ಥಿಯಾಗಿದ್ದಾಗ ರಾಜಕೀಯ ಪ್ರವೇಶಿಸಿದರು. ತನ್ನ ವ್ಯಾಪಾರ ಮತ್ತು ರಾಜಕೀಯ ವೃತ್ತಿಜೀವನವನ್ನು ಏಕಕಾಲದಲ್ಲಿ ಮುಂದುವರಿಸಿದ ಅವರು ವಿಕ್ರಮ್ ವಿಶ್ವವಿದ್ಯಾಲಯದಿಂದ ತಮ್ಮ ಪಿಎಚ್‌ಡಿಯನ್ನು ಪೂರ್ಣಗೊಳಿಸಿದರು.

2020 ರಲ್ಲಿ, ಅಗರ್‌ನಲ್ಲಿ ನಡೆದ ಉಪಚುನಾವಣೆಯಲ್ಲಿ ಚುನಾವಣಾ ಆಯೋಗವು ‘ಅನುಚಿತ ಭಾಷೆ’ಯನ್ನು ಬಳಸುವ ಮೂಲಕ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರಚಾರ ಮಾಡದಂತೆ ಚುನಾವಣಾ ಆಯೋಗವು ನಿಷೇಧಿಸಿತು.

ವಿದ್ಯಾರ್ಥಿ ರಾಜಕೀಯ

1982 ರಲ್ಲಿ, ಅವರು ಮಾಧವ್ ವಿಜ್ಞಾನ ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿ ಮತ್ತು 1984 ರಲ್ಲಿ ಅದರ ಅಧ್ಯಕ್ಷರಾಗಿ ಆಯ್ಕೆಯಾದರು. 1997 ರಲ್ಲಿ, ಅವರು BJYM ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೇರಿದರು. 1998 ರಲ್ಲಿ, ಅವರು ಪಶ್ಚಿಮ ರೈಲ್ವೆ ಮಂಡಳಿಯ ಸಲಹಾ ಸಮಿತಿಯ ಸದಸ್ಯರಾದರು.

ಇದನ್ನೂ ಓದಿ: ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಮೋಹನ್​ ಯಾದವ್ ಆಯ್ಕೆ

ಬಿಜೆಪಿಯ ಯುವ ಘಟಕದಲ್ಲಿ ವೃತ್ತಿಜೀವನ

  • 1999 ರಲ್ಲಿ, BJYM ನ ಉಜ್ಜಯಿನಿ ವಿಭಾಗದ ಪ್ರಭಾರಿ
  • 2000-2003 ರಿಂದ, ವಿಕ್ರಮ್ ವಿಶ್ವವಿದ್ಯಾಲಯ ಉಜ್ಜಯಿನಿ ಕಾರ್ಯಕಾರಿ ಮಂಡಳಿಯ ಸದಸ್ಯ.
  • 2000-2003ರವರೆಗೆ ಬಿಜೆಪಿಯ ನಗರ ಜಿಲ್ಲಾ ಮಹಾಮಂತ್ರಿ (ಮಹಾ ಕಾರ್ಯದರ್ಶಿ),
  • 2004ರಲ್ಲಿ ಬಿಜೆಪಿಯ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು.
  • 2004 ರಲ್ಲಿ, ಮಧ್ಯಪ್ರದೇಶದ ಕುಂಭಮೇಳದ ಕೇಂದ್ರ ಸಮಿತಿಯ ಸದಸ್ಯ.
  • 2004-2010 ರಿಂದ, ಉಜ್ಜಯಿನಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು (ರಾಜ್ಯ ಸಚಿವರಿಗೆ ಸಮಾನ).
  • 2008ರಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ನಿರ್ದೇಶಕ.
  • 2011-2013 ರಿಂದ, ಮಧ್ಯಪ್ರದೇಶ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಭೋಪಾಲ್ (ಕ್ಯಾಬಿನೆಟ್ ಮಂತ್ರಿ ಶ್ರೇಣಿ).
  • 2013-2016ರವರೆಗೆ ಬಿಜೆಪಿಯ ಅಖಿಲ ಭಾರತ ಸಾಂಸ್ಕೃತಿಕ ಸೆಲ್ ಜಂಟಿ ಸಂಯೋಜಕ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ