ಚಂಡೀಗಢ: ತಮ್ಮನ್ನು ಕಾಂಗ್ರೆಸ್ ಪಕ್ಷದಲ್ಲೇ ಉಳಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಪ್ರಯತ್ನಿಸುತ್ತಿದ್ದಾರೆ ಎಂಬ ವದಂತಿಯನ್ನು ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ತಳ್ಳಿ ಹಾಕಿದ್ದಾರೆ. ನಾನು ಇನ್ನೂ ಕಾಂಗ್ರೆಸ್ನೊಂದಿಗೆ ಮಾತುಕತೆ ನಡೆಸುತ್ತಿದ್ದೇನೆ ಎಂಬುದು ಸುಳ್ಳು. ಪಕ್ಷದೊಂದಿಗಿನ ಹೊಂದಾಣಿಕೆಯ ಸಮಯ ಮುಗಿದಿದೆ. ಇಷ್ಟರವರೆಗೆ ಸೋನಿಯಾ ಗಾಂಧಿ ಅವರ ಬೆಂಬಲಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಆದರೆ, ಇನ್ನು ಕಾಂಗ್ರೆಸ್ ಪಕ್ಷದಲ್ಲಿ ಉಳಿಯುವ ಮಾತೇ ಇಲ್ಲ ಎಂದು ಅವರು ಹೇಳಿದ್ದಾರೆ.
ಅಮರೀಂದರ್ ಸಿಂಗ್ ಪಂಜಾಬ್ನಲ್ಲಿ ಹೊಸ ಪಕ್ಷ ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದಾರೆ. ಅಲ್ಲದೆ, ಅಗತ್ಯವಿದ್ದರೆ ಬಿಜೆಪಿಯೊಂದಿಗೆ ಮೃತ್ರಿ ಮಾಡಿಕೊಳ್ಳಲು ಕೂಡ ಸಿದ್ಧವಿರುವುದಾಗಿ ಹೇಳಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಅಮರಿಂದರ್ ಸಿಂಗ್ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು.
‘Reports of backend talks with @INCIndia are incorrect. The time for rapprochement is over. The decision to part ways with party was taken after much thought and is final. I’m grateful to #SoniaGandhi ji for her support but will not stay in Congress now.’: @capt_amarinder 1/2 pic.twitter.com/FbO7Toj28V
— Raveen Thukral (@RT_Media_Capt) October 30, 2021
ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ರಾಜ್ಯದಲ್ಲಿ ಮತಗಳು ವಿಭಜನೆಯಾಗುವ ಭೀತಿಯಿಂದ ಕಾಂಗ್ರೆಸ್ ಪಕ್ಷದ ಒಳಗಿನ ನಾಯಕರು ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಅಮರೀಂದರ್ ಸಿಂಗ್ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಕಾಂಗ್ರೆಸ್ ನಾಯಕರಿಗೆ ಇಷ್ಟವಿಲ್ಲ ಎಂದು ಪತ್ರಿಕೆ ವರದಿ ಮಾಡಿತ್ತು. ಹಾಗೇ, ಕಾಂಗ್ರೆಸ್ನಿಂದ ಟಿಕೆಟ್ ನಿರಾಕರಿಸಲಾದ ಅತೃಪ್ತ ಕಾಂಗ್ರೆಸ್ ನಾಯಕರನ್ನು ಅಮರೀಂದರ್ ಸಿಂಗ್ ತಮ್ಮ ಹೊಸ ಪಕ್ಷದತ್ತ ಸೆಳೆಯುವ ಸಾಧ್ಯತೆಯಿದೆ ಎನ್ನಲಾಗಿತ್ತು.
ಕ್ಯಾಪ್ಟನ್ ಅಮರೀಂದರ್ ಸಿಂಗ್ ಹೊಸ ಪಕ್ಷದ ಯೋಜನೆಗಳನ್ನು ಘೋಷಿಸುವಾಗ, ಅನೇಕ ನಾಯಕರು ಈಗಾಗಲೇ ತನ್ನೊಂದಿಗೆ ಸಂಪರ್ಕದಲ್ಲಿದ್ದಾರೆ, ಸೂಕ್ತ ಸಮಯ ಬಂದಾಗ ಅವರ ಹೆಸರನ್ನು ಬಹಿರಂಗಪಡಿಸುತ್ತೇನೆ ಎಂದು ಹೇಳಿದ್ದರು. ತಮ್ಮ ಹೊಸ ಪಕ್ಷವು ಪಂಜಾಬ್‌ನ ಎಲ್ಲಾ 117 ವಿಧಾನಸಭಾ ಸ್ಥಾನಗಳಲ್ಲಿ ಸ್ಪರ್ಧಿಸಲು ಯೋಚನೆ ಮಾಡಿದೆ. ಹಾಗೇ, ಬಿಜೆಪಿಯೊಂದಿಗೆ ಸೀಟು ಹಂಚಿಕೆ ಒಪ್ಪಂದದ ಬಗ್ಗೆ ಚರ್ಚಿಸುತ್ತಿದೆ ಎಂದು ಕೂಡ ಅವರು ಹೇಳಿದ್ದರು.
ಇದನ್ನೂ ಓದಿ: Amarinder Singh: ಕೃಷಿ ತಜ್ಞರ ಜೊತೆ ನಾಳೆ ಅಮರೀಂದರ್ ಸಿಂಗ್ ಅವರಿಂದ ಅಮಿತ್ ಶಾ ಭೇಟಿ
Amarinder Singh: ಅಮರೀಂದರ್ ಸಿಂಗ್ ಹೊಸ ಪಕ್ಷದ ಹೆಸರು ಪಂಜಾಬ್ ವಿಕಾಸ್ ಪಾರ್ಟಿ?; ಕಾಂಗ್ರೆಸ್ಗೆ ಮತ್ತೊಂದು ಹೊಡೆತ
Published On - 6:47 pm, Sat, 30 October 21