Amarnath Yatra: ಅಮರನಾಥ ಯಾತ್ರೆಗೆ ಹೆಸರು ನೋಂದಾಯಿಸುವುದು ಹೇಗೆ? ಏನೇನು ನಿರ್ಬಂಧಗಳಿವೆ?

| Updated By: ಸುಷ್ಮಾ ಚಕ್ರೆ

Updated on: Jun 16, 2022 | 2:44 PM

Amarnath Yatra Registration: jksasb.nic.in ವೆಬ್​ಸೈಟ್​​ನಲ್ಲಿ ಅಮರನಾಥ ಯಾತ್ರೆಗೆ ಬುಕಿಂಗ್ ಈಗಾಗಲೇ ಆರಂಭವಾಗಿದೆ. ಈ ವರ್ಷ ಇದೇ ಮೊದಲ ಬಾರಿಗೆ ಪ್ರಯಾಣಿಕರ ಅನುಕೂಲಕ್ಕಾಗಿ ಶ್ರೀನಗರದಿಂದ ಪಂಚತರ್ಣಿಯವರೆಗೆ ಹೆಲಿಕಾಪ್ಟರ್ ಸೇವೆ ಆರಂಭಿಸಲಾಗಿದೆ.

Amarnath Yatra: ಅಮರನಾಥ ಯಾತ್ರೆಗೆ ಹೆಸರು ನೋಂದಾಯಿಸುವುದು ಹೇಗೆ? ಏನೇನು ನಿರ್ಬಂಧಗಳಿವೆ?
ಅಮರನಾಥ ಯಾತ್ರೆ
Image Credit source: Zee News
Follow us on

ಅಮರನಾಥ: ಭಾರತದ ಹಿಂದೂಗಳ ಪ್ರಮುಖ ಯಾತ್ರೆಯಾದ ಅಮರನಾಥ ಯಾತ್ರೆ (Amarnath Yatra) ಜೂನ್ 30ರಿಂದ ಪ್ರಾರಂಭವಾಗಲಿದೆ. ಕೊವಿಡ್ (Covid-19 Pandemic) ಸಾಂಕ್ರಾಮಿಕ ರೋಗದಿಂದಾಗಿ ಎರಡು ವರ್ಷಗಳ ಕಾಲ ಅಮರನಾಥ ಯಾತ್ರೆಗೆ ನಿರ್ಬಂಧ ಹೇರಲಾಗಿತ್ತು. ಈ ವರ್ಷ ಮತ್ತೆ ಈ ಯಾತ್ರೆಗೆ ಅನುಮತಿ ನೀಡಲಾಗಿದ್ದರೂ ಕಟ್ಟುನಿಟ್ಟಿನ ನಿಯಮಗಳನ್ನು ಕೂಡ ಹೇರಲಾಗಿದೆ. ಹಿಮಾಲಯದ ಮಡಿಲಲ್ಲಿರುವ ಈ ಪವಿತ್ರ ಸ್ಥಳಕ್ಕೆ 43 ದಿನಗಳ ಪ್ರಯಾಣವನ್ನು ಕೈಗೊಳ್ಳಲು ಹೆಚ್ಚಿನ ಸಂಖ್ಯೆಯ ಭಕ್ತರು ವರ್ಷವಿಡೀ ಕಾಯುತ್ತಾರೆ.

ಈ ವರ್ಷ ಆಗಸ್ಟ್ 11ರಂದು ಅಮರನಾಥ ದೇವಾಲಯವನ್ನು ಮುಚ್ಚಲಾಗುವುದು. ಈ ವರ್ಷ ಇದೇ ಮೊದಲ ಬಾರಿಗೆ ಪ್ರಯಾಣಿಕರ ಅನುಕೂಲಕ್ಕಾಗಿ ಶ್ರೀನಗರದಿಂದ ಪಂಚತರ್ಣಿಯವರೆಗೆ ಹೆಲಿಕಾಪ್ಟರ್ ಸೇವೆ ಆರಂಭಿಸಲಾಗಿದೆ. ಅಮರನಾಥ ಯಾತ್ರೆ ಬುಕಿಂಗ್ ಈಗಾಗಲೇ ಆರಂಭವಾಗಿದೆ.

 

ಇದನ್ನೂ ಓದಿ
Big Success: ಅಮರನಾಥ ಯಾತ್ರೆ ಧ್ವಂಸಗೊಳಿಸಲು ಪಾಕಿಸ್ತಾನದಿಂದ ಬಂದಿದ್ದ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಸಿಬ್ಬಂದಿ
Amarnath Yatra 2022 Registration: ಜೂನ್ 30 ರಂದು ಅಮರನಾಥ ಯಾತ್ರೆ ಆರಂಭ; ಟಿಕೆಟ್ ಬುಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
ಅಮರನಾಥ ಯಾತ್ರಾರ್ಥಿಗಳಿಗೆ ಪ್ರಮುಖ ಸೂಚನೆ ನೀಡಿದ ಜಮ್ಮು ಮತ್ತು ಕಾಶ್ಮೀರ ಸರ್ಕಾರ
Amarnath Yatra 2021: ಈ ವರ್ಷ ಅಮರನಾಥ ಯಾತ್ರೆ ರದ್ದು; ಭಕ್ತರಿಗೆ ಆನ್​ಲೈನ್ ಮೂಲಕ ಆರತಿ ನೆರವೇರಿಸಲು ಅವಕಾಶ

ಅಮರನಾಥ ಯಾತ್ರೆಗೆ ನೋಂದಣಿ ಮಾಡಿಕೊಳ್ಳುವುದು ಹೇಗೆ?:
1. ಮೊದಲನೆಯದಾಗಿ, ನೀವು https://jksasb.nic.in/register.aspx ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಅಲ್ಲಿ ಬಳಕೆದಾರರ ಹೆಸರು ಮತ್ತು ಪಾಸ್‌ವರ್ಡ್‌ನೊಂದಿಗೆ ಲಾಗ್ ಇನ್ ಮಾಡಬೇಕು.

2. ಪ್ರಯಾಣಿಕರು ಅರ್ಜಿ ಸಂಖ್ಯೆಯನ್ನು ನೀಡಿದ ನಂತರವೇ ನೋಂದಣಿ ಪೂರ್ಣಗೊಳ್ಳುತ್ತದೆ.

3. ಅಲ್ಲಿ ಅಗ್ರಿ (ಒಪ್ಪುತ್ತೇನೆ) ಎಂದು ಕ್ಲಿಕ್ ಮಾಡುವ ಮೂಲಕ ನೀವು ಅನುಮತಿಯನ್ನು ಪಡೆಯಬಹುದು.

4. ಅಡ್ವಾನ್ಸ್ಡ್​ ಬುಕಿಂಗ್​ ಮಾಡದೆ ನೀವು ಅಮರನಾಥಕ್ಕೆ ಹೋಗಲು ಬಯಸಿದರೆ ಯಾತ್ರಿಕರ ಪುಣ್ಯಕ್ಷೇತ್ರ ಮತ್ತು ಶ್ರೀನಗರಕ್ಕೆ ಹೋಗುವ ಮೂಲಕವೂ ಯಾತ್ರೆಯನ್ನು ಬುಕ್ ಮಾಡಬಹುದು.

5. ಅನುಮತಿಗಳಿಗಾಗಿ ಆನ್‌ಲೈನ್‌ನಲ್ಲಿ ಪೇಮೆಂಟ್ ಮಾಡಬಹುದು.

6. ಇದರ ಹೊರತಾಗಿ, ಯಾತ್ರಾರ್ಥಿಗಳು ಅಮರನಾಥ ಯಾತ್ರಾ ಅಪ್ಲಿಕೇಶನ್ ಅನ್ನು ಪ್ಲೇಸ್ಟೋರ್ ಅಥವಾ iOSನಿಂದ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: Amarnath Yatra Registration 2022: ಜೂನ್​ 30ರಿಂದ ಅಮರನಾಥ ಯಾತ್ರೆ; ಯಾತ್ರಾರ್ಥಿಗಳ ನೋಂದಣಿ ಪ್ರಕ್ರಿಯೆ ಇಂದಿನಿಂದ ಶುರು

ಅಮರನಾಥ ಯಾತ್ರೆಗೆ ಅಗತ್ಯವಿರುವ ದಾಖಲೆಗಳು:
1. 2022ರ ಮಾರ್ಚ್ 28ರ ವೇಳೆ ವೈದ್ಯರು ನೀಡಿದ ವೈದ್ಯಕೀಯ ಪ್ರಮಾಣಪತ್ರ.

2. ನಾಲ್ಕು ಪಾಸ್‌ಪೋರ್ಟ್ ಅಳತೆಯ ಫೋಟೋಗಳು.

3. ಆಧಾರ್ ಕಾರ್ಡ್ ಅಥವಾ ಸರ್ಕಾರ ನೀಡಿದ ಯಾವುದೇ ಗುರುತಿನ ಚೀಟಿ.

 

ಅಮರನಾಥ ಯಾತ್ರೆಯ ಅನುಮತಿ ಹಾಗೂ ವಯಸ್ಸಿನ ಮಿತಿ:
ಅಮರನಾಥ ಯಾತ್ರೆಗೆ ಕೆಲವು ವಯಸ್ಸಿನ ನಿರ್ಬಂಧಗಳೂ ಇವೆ. 13 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಅಥವಾ 75 ವರ್ಷ ಮೇಲ್ಪಟ್ಟವರು ಅಮರನಾಥ ಯಾತ್ರೆಯಲ್ಲಿ ಭಾಗವಹಿಸುವಂತಿಲ್ಲ. 6 ವಾರಗಳಿಗಿಂತ ಹೆಚ್ಚು ಅವಧಿಯ ಗರ್ಭಿಣಿಯರಿಗೆ ಅಮರನಾಥ ಯಾತ್ರೆಗೆ ನಿಷೇಧ ವಿಧಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:42 pm, Thu, 16 June 22