ಹೈದರಾಬಾದ್: ಒಂದೇ ಗೋತ್ರದವರನ್ನು ಮದುವೆಯಾಗಿದ್ದಕ್ಕೆ ಬೆದರಿಕೆ, ಬಹಿಷ್ಕಾರ; ಪೊಲೀಸರ ಮೊರೆ ಹೋದ ದಂಪತಿ

ತನ್ನ ಕುಟುಂಬ ಮತ್ತು ಇತರ ಕುಟುಂಬದ ಸದಸ್ಯರು ಅಶ್ಲೀಲ ಪೋಸ್ಟ್ ಗಳನ್ನು ಹಾಕಿ ನಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ನಮ್ಮನ್ನು ನಮ್ಮ ಕುಟುಂಬವೇ ಕೊಲೆ ಮಾಡುವ...

ಹೈದರಾಬಾದ್: ಒಂದೇ ಗೋತ್ರದವರನ್ನು ಮದುವೆಯಾಗಿದ್ದಕ್ಕೆ ಬೆದರಿಕೆ, ಬಹಿಷ್ಕಾರ; ಪೊಲೀಸರ ಮೊರೆ ಹೋದ ದಂಪತಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jun 16, 2022 | 1:06 PM

ಹೈದರಾಬಾದ್: ಹೈದರಾಬಾದ್‌ನ  (Hyderabad) ಶಾಹಿನ್ಯಾತ್‌ಗುಂಜ್‌ನಲ್ಲಿ ಒಂದೇ ಗೋತ್ರಕ್ಕೆ ಸೇರಿದ ವಧು- ವರ ಮದುವೆಯಾಗಿದ್ದು ಈ ದಂಪತಿಗೆ ಕುಟುಂಬದವರು  ಬೆದರಿಕೆಯೊಡ್ಡುತ್ತಿದ್ದಾರೆ ಎಂದು  ಪೊಲೀಸ್ ರಕ್ಷಣೆ ಕೋರಿದ್ದಾರೆ. ಈ ದಂಪತಿ ತಮ್ಮ ಪೋಷಕರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಕ್ಕಾಗಿ ಬಹಿಷ್ಕಾರ (excommunicated) ಎದುರಿಸುತ್ತಿದ್ದಾರೆ. ಜುಲೈ 2020 ರಲ್ಲಿ ಆರ್ಯ ಸಮಾಜ ದೇವಸ್ಥಾನದಲ್ಲಿ(Arya Samaj temple) ಇವರ ವಿವಾಹ ನಡೆದಿತ್ತು. 20ರ ಹರೆಯದ ಈ ದಂಪತಿ ಒಂದೇ ಜಾತಿ ಮತ್ತು ಒಂದೇ ಗೋತ್ರಕ್ಕೆ ಸೇರಿದವರಾಗಿದ್ದಾರೆ. ಒಂದೇ ಗೋತ್ರಕ್ಕೆ ಸೇರಿದವರಾಗಿರುವ ಕಾರಣ ಹುಡುಗಿಯ ಕುಟುಂಬ ಈ ವಿವಾಹವನ್ನು ಒಪ್ಪಲಿಲ್ಲ. ಇದಾದ ನಂತರ ಅವರ ಸಮುದಾಯವನ್ನು ಬಹಿಷ್ಕರಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ತನ್ನ ಕುಟುಂಬ ಮತ್ತು ಇತರ ಕುಟುಂಬದ ಸದಸ್ಯರು ಅಶ್ಲೀಲ ಪೋಸ್ಟ್ ಗಳನ್ನು ಹಾಕಿ ನಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ನಮ್ಮನ್ನು ನಮ್ಮ ಕುಟುಂಬವೇ ಕೊಲೆ ಮಾಡುವ ಬೆದರಿಕೆಯೊಡ್ಡುತ್ತಿದೆ ಎಂದುತಿಳಿದ ಕೂಡಲೇ ನಾವು ಕಾನೂನಿನ ಮೊರೆ ಹೋಗಲು ಪೊಲೀಸರ ಬಳಿ ಬಂದೆವು ಎಂದು ಮಹಿಳೆ ಹೇಳಿದ್ದಾರೆ. ಮಹಿಳೆ ನೀಡಿದ ದೂರಿನ ಮೇರೆಗೆ ಕ್ರಿಮಿನಲ್ ಬೆದರಿಕೆ ಪ್ರಕರಣ ದಾಖಲಿಸಲಾಗಿದೆ. “ನಾವು ಸಮುದಾಯದ ಸದಸ್ಯರು ಮತ್ತು ಕುಟುಂಬದವರನ್ನು ಕೌನ್ಸೆಲಿಂಗ್‌ಗೆ ಕರೆದಿದ್ದೇವೆ. ನಾವು ಅವರಿಗೆ ಎಚ್ಚರಿಕೆ ನೀಡಿದ್ದೇವೆ” ಎಂದು ಅಫ್ಜಲ್‌ಗುಂಜ್ ಇನ್ಸ್‌ಪೆಕ್ಟರ್ ರವೀಂದರ್ ರೆಡ್ಡಿ ಉಲ್ಲೇಖಿಸಿದ್ದಾರೆ.

ಮೇ ತಿಂಗಳಲ್ಲಿ ಹೈದರಾಬಾದ್‌ನಲ್ಲಿ ನಡೆದ ಮರ್ಯಾದಾ ಹತ್ಯೆಯಲ್ಲಿ 21 ವರ್ಷದ ಯುವಕ ಬೇರೆ ಜಾತಿಯ ಹುಡುಗಿಯನ್ನು ಮದುವೆಯಾಗಿದ್ದಕ್ಕಾಗಿ ಚಾಕುವಿನಿಂದ ಇರಿದು ಕೊಲ್ಲಲಾಯಿತು. ಹೈದರಾಬಾದ್‌ನ ಜನನಿಬಿಡ ಬೇಗಂ ಬಜಾರ್ ಪ್ರದೇಶದಲ್ಲಿ ಈ ಘಟನೆ ನಡೆದಿತ್ತು.

ಇದನ್ನೂ ಓದಿ
Image
ಕುಡಿದ ಮತ್ತಿನಲ್ಲಿ ಪೊಲೀಸ್​ ವಾಹನವೇರಿ ಕುಡುಕನ ಜಾಲಿ ರೈಡ್: ಇಲ್ಲಿದೆ ವೈರಲ್ ವಿಡಿಯೋ ​
Image
Hyderabad Gang Rape ಹೈದರಾಬಾದ್ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಎಐಎಂಐಎಂ ಶಾಸಕನ ಪುತ್ರ ವಶಕ್ಕೆ
Image
ಹೈದರಾಬಾದ್: ಕಾರಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ನಡೆದ ವಿಡಿಯೋ ಕ್ಲಿಪ್ಪಿಂಗ್ ಬಯಲು ಮಾಡಿದ ಬಿಜೆಪಿ ಶಾಸಕನ ವಿರುದ್ಧ ಪ್ರಕರಣ ದಾಖಲು

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 1:04 pm, Thu, 16 June 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ