ಕೃಷಿ ತ್ಯಾಜ್ಯ ಸುಡುವಿಕೆ, ಕಡಿಮೆ ತಾಪಮಾನ; ದೆಹಲಿಯ ಗಾಳಿಯ ಗುಣಮಟ್ಟ ಮತ್ತಷ್ಟು ಕಳಪೆ

|

Updated on: Oct 07, 2023 | 1:12 PM

ಕಳಪೆ ಗಾಳಿಯ ಗುಣಮಟ್ಟದ ಮಧ್ಯೆ ಕೇಂದ್ರದ ವಾಯು ಗುಣಮಟ್ಟದ ಸಮಿತಿಯು ಎಚ್ಚೆತ್ತುಕೊಂಡಿದ್ದು, ರಾಷ್ಟ್ರೀಯ ರಾಜಧಾನಿ ಪ್ರದೇಶದ ಸ್ಥಳೀಯ ಅಧಿಕಾರಿಗಳಿಗೆ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಕಲ್ಲಿದ್ದಲು ಬಳಕೆಯನ್ನು ನಿಷೇಧಿಸಲು ಮತ್ತು ಮಾಲಿನ್ಯಕಾರಕ ಕೈಗಾರಿಕೆಗಳಿಗೆ ಕಡಿವಾಣ ಹಾಕಲು ಆದೇಶಿಸಿದೆ. ಈ ಕ್ರಮಗಳು 'ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್' ಎಂಬ ಮಾಲಿನ್ಯ ನಿಯಂತ್ರಣ ಯೋಜನೆಯ ಭಾಗವಾಗಿದೆ.

ಕೃಷಿ ತ್ಯಾಜ್ಯ ಸುಡುವಿಕೆ, ಕಡಿಮೆ ತಾಪಮಾನ; ದೆಹಲಿಯ ಗಾಳಿಯ ಗುಣಮಟ್ಟ ಮತ್ತಷ್ಟು ಕಳಪೆ
ದೆಹಲಿ ವಾಯುಮಾಲಿನ್ಯ
Follow us on

ದೆಹಲಿ ಅಕ್ಟೋಬರ್ 07: ರಾಷ್ಟ್ರ ರಾಜಧಾನಿಯ ಕನಿಷ್ಠ ತಾಪಮಾನವು (temperature) 20.9 ಡಿಗ್ರಿ ಸೆಲ್ಸಿಯಸ್‌ನಲ್ಲಿ ನೆಲೆಸಿದ್ದರಿಂದ ದೆಹಲಿಯ (Delhi) ವಾಯು ಗುಣಮಟ್ಟ ಸೂಚ್ಯಂಕವು (Air quality index) ಕಳಪೆ ವರ್ಗಕ್ಕೆ ಇಳಿಯಿತು. ಶನಿವಾರ ಬೆಳಿಗ್ಗೆ 9 ಗಂಟೆಗೆ AQI 231 ರಷ್ಟಿತ್ತು. ಸೊನ್ನೆ ಮತ್ತು 50 ರ ನಡುವಿನ AQI ಅನ್ನು ‘ಉತ್ತಮ’, 51 ಮತ್ತು 100 ‘ತೃಪ್ತಿದಾಯಕ’, 101 ಮತ್ತು 200 ‘ಮಧ್ಯಮ’, 201 ಮತ್ತು 300 ‘ಕಳಪೆ’, 301 ಮತ್ತು 400 ‘ತುಂಬಾ ಕಳಪೆ’, ಮತ್ತು 401 ಮತ್ತು 500 ‘ತೀವ್ರ’ ಎಂದು ಪರಿಗಣಿಸಲಾಗಿದೆ.

ಶುಕ್ರವಾರ, ಕಳಪೆ ಗಾಳಿಯ ಗುಣಮಟ್ಟದ ಮಧ್ಯೆ ಕೇಂದ್ರದ ವಾಯು ಗುಣಮಟ್ಟದ ಸಮಿತಿಯು ಎಚ್ಚೆತ್ತುಕೊಂಡಿದ್ದು, ರಾಷ್ಟ್ರೀಯ ರಾಜಧಾನಿ ಪ್ರದೇಶದ ಸ್ಥಳೀಯ ಅಧಿಕಾರಿಗಳಿಗೆ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಕಲ್ಲಿದ್ದಲು ಬಳಕೆಯನ್ನು ನಿಷೇಧಿಸಲು ಮತ್ತು ಮಾಲಿನ್ಯಕಾರಕ ಕೈಗಾರಿಕೆಗಳಿಗೆ ಕಡಿವಾಣ ಹಾಕಲು ಆದೇಶಿಸಿದೆ. ಈ ಕ್ರಮಗಳು ‘ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್’ ಎಂಬ ಮಾಲಿನ್ಯ ನಿಯಂತ್ರಣ ಯೋಜನೆಯ ಭಾಗವಾಗಿದೆ.

ಏರ್ ಕ್ವಾಲಿಟಿ ಮ್ಯಾನೇಜ್‌ಮೆಂಟ್ ಆಯೋಗ (CAQM) ಈ ಪ್ರದೇಶದಲ್ಲಿ ಗಾಳಿಯ ಗುಣಮಟ್ಟ ಹದಗೆಡುವುದನ್ನು ತಡೆಯಲು ಕ್ರಮಗಳನ್ನು ಆದೇಶಿಸಲಾಗಿದೆ ಎಂದು ಹೇಳಿದೆ. ಈ ಪ್ರದೇಶದಲ್ಲಿ ಗಾಳಿಯ ಗುಣಮಟ್ಟ ಮತ್ತಷ್ಟು ಕ್ಷೀಣಿಸುವುದನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳಲು ಸಂಪೂರ್ಣ ಎನ್‌ಸಿಆರ್‌ನಾದ್ಯಂತ GRAP ಹಂತ-1 ಅನ್ನು ತಕ್ಷಣವೇ ಜಾರಿಗೆ ತರುವುದು ಅತ್ಯಗತ್ಯ ಎಂದು ಆಯೋಗವು ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.

GRAP ಕ್ರಮಗಳನ್ನು ನಾಲ್ಕು ಹಂತಗಳಾಗಿ ವರ್ಗೀಕರಿಸುತ್ತದೆ: ಹಂತ I – ‘ಕಳಪೆ’ (AQI 201-300), ಹಂತ II – ‘ಬಹಳ ಕಳಪೆ’ (AQI 301-400), ಹಂತ III – ‘ತೀವ್ರ’ (AQI 401-450), ಮತ್ತು ಹಂತ IV – ಅತೀ ತೀವ್ರ (AQI > 450).

ರಾಜಧಾನಿಯ ಗರಿಷ್ಠ ತಾಪಮಾನವು ಸುಮಾರು 37 ಡಿಗ್ರಿ ಸೆಲ್ಸಿಯಸ್‌ನಲ್ಲಿ ನೆಲೆಗೊಳ್ಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪಂಜಾಬ್ ಫಾರ್ಮ್ ಬೆಂಕಿಯ ಸಂಖ್ಯೆಯಲ್ಲಿ ಉಲ್ಬಣಗೊಳ್ಳಲು ಪ್ರಾರಂಭಿಸಿದ ನಂತರ ಗಾಳಿಯ ಗುಣಮಟ್ಟದಲ್ಲಿ ಹಠಾತ್ ಕುಸಿತ ಉಂಟಾಗುತ್ತದೆ. ಶುಕ್ರವಾರ ಪಂಜಾಬ್‌ನ ಹಲವು ಭಾಗಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ ಸಾಧಾರಣ ಮಟ್ಟಕ್ಕೆ ಕುಸಿದಿದೆ.

AQI ಮಟ್ಟವನ್ನು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಆರು ಸ್ಥಳಗಳಲ್ಲಿ ಅಳೆದಿದ್ದು ಇದರಲ್ಲಿ ಬಟಿಂಡಾ 191 ನಲ್ಲಿ ಅತ್ಯಂತ ಕೆಟ್ಟದಾಗಿದೆ. ಅಕ್ಟೋಬರ್ 6 ರಂದು, ಪಂಜಾಬ್ ರಿಮೋಟ್ ಸೆನ್ಸಿಂಗ್ ಸೆಂಟರ್ (PRSC) ಯಿಂದ ಒಟ್ಟು 91 ಕೃಷಿ ತ್ಯಾಜ್ಯ ಪ್ರಕರಣಗಳು ಪತ್ತೆಯಾಗಿವೆ ಈ ಕೊಯ್ಲು ಋತುವಿನಲ್ಲಿ ತ್ಯಾಜ್ಯ ಸುಡುವಿಕೆಯ 845 ಪ್ರಕರಣಗಳು ವರದಿ ಆಗಿವೆ.

ಇದನ್ನೂ ಓದಿ:  ಮಂಗಳಯಾನ-2: ಸಿಬ್ಬಂದಿ ಮಾಡ್ಯೂಲ್ ಸಿದ್ಧಪಡಿಸಿದ ಇಸ್ರೋ

ಕಳೆದ ಆರು ದಿನಗಳಲ್ಲಿ ಅಮೃತಸರ ಜಿಲ್ಲೆಯಲ್ಲಿ 345 ಬೆಂಕಿ ಪ್ರಕರಣ ಕಾಣಿಸಿಕೊಂಡಿದೆ. ಅಕ್ಟೋಬರ್ 6 ರಂದು ಅಮೃತಸರದಲ್ಲಿ 41 ಬೆಂಕಿ ಕಾಣಿಸಿಕೊಂಡಿದ್ದು, ತರನ್ ತಾರನ್ (15), ಪಟಿಯಾಲ (10) ಮತ್ತು ಸಂಗ್ರೂರ್ (6) ಪ್ರಕರಣಗಳು ವರದಿ ಆಗಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ