Delhi Chalo ನಡುವೆ ಪ್ರಧಾನಿ ಮೋದಿ ಇಂದು ಕಚ್ ರೈತರ ಭೇಟಿ, ಸಿಖ್ ಸಮುದಾಯದೊಂದಿಗೆ ಮಾತುಕತೆ

| Updated By: ganapathi bhat

Updated on: Apr 07, 2022 | 10:43 AM

ರಾಷ್ಟ್ರ ರಾಜಧಾನಿಯಲ್ಲಿ ರೈತರ ಪ್ರತಿಭಟನೆಯು 20 ದಿನಗಳಿಂದ ನಡೆಯುತ್ತಿದೆ, ಸರ್ಕಾರದ ಪರವಾಗಿ ಹಲವು ಸಚಿವರು ರೈತರ ಜೊತೆ ಮಾತುಕತೆ ನಡೆಸಿದ್ದಾರೆ. ಪ್ರಧಾನಿ ಮೋದಿ ಇಂದು ಸಿಖ್ ಸಮುದಾಯದ ರೈತರ ಜೊತೆ ಮಾತನಾಡಲಿದ್ದಾರೆ.

Delhi Chalo ನಡುವೆ ಪ್ರಧಾನಿ ಮೋದಿ ಇಂದು ಕಚ್ ರೈತರ ಭೇಟಿ, ಸಿಖ್ ಸಮುದಾಯದೊಂದಿಗೆ ಮಾತುಕತೆ
ಪ್ರಧಾನಿ ನರೇಂದ್ರ ಮೋದಿ (FILE PHOTO)
Follow us on

ದೆಹಲಿ: ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯ ನಡುವೆ ಪ್ರಧಾನಿ ನರೇಂದ್ರ ಮೋದಿ ಕಚ್ ಪ್ರದೇಶದ ರೈತರನ್ನು ಇಂದು ಭೇಟಿಯಾಗಲಿದ್ದಾರೆ. ಮೋದಿ ತಮ್ಮ ಗುಜರಾತ್ ಭೇಟಿಯ ನಡುವೆ ಈ ಸಭೆ ನಡೆಸಲಿದ್ದು, ಸಿಖ್ ಸಮುದಾಯದ ರೈತರ ಜೊತೆ ಮಾತನಾಡಲಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ರೈತರ ಪ್ರತಿಭಟನೆಯು 20 ದಿನಗಳಿಂದ ನಡೆಯುತ್ತಿದ್ದು, ಸರ್ಕಾರದ ಪರವಾಗಿ ಹಲವು ಸಚಿವರು ರೈತರ ಜೊತೆ ಮಾತುಕತೆ ನಡೆಸಿದ್ದರು. ಅವರ ಹೋರಾಟದ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. ಆದರೆ, ಈ ಬಗ್ಗೆ ಪರೋಕ್ಷ ಪ್ರತಿಕ್ರಿಯೆಗಳನ್ನು ನೀಡಿದ್ದ ಮೋದಿ, ರೈತರೊಂದಿಗೆ ನೇರ ಸಂವಾದದಲ್ಲಿ ಭಾಗವಹಿಸಿರಲಿಲ್ಲ. ಮೋದಿಯ ಈ ನಡೆ ಹಲವು ಟೀಕೆಗಳಿಗೆ ಕಾರಣವಾಗಿತ್ತು. ಇಂದು ನಡೆಯುವ ರೈತರ ಜೊತೆಗಿನ ಪ್ರಧಾನಿ ಮಾತುಕತೆಯಲ್ಲಿ ಈ ಎಲ್ಲಾ ಆಕ್ಷೇಪಗಳಿಗೆ ಉತ್ತರ ಸಿಗುವ ಸಾಧ್ಯತೆ ಇದೆ ಎಂದು ಊಹಿಸಲಾಗುತ್ತಿದೆ.

ಕಚ್​ನ ಧೊರ್ಡೊ ಪ್ರದೇಶದಲ್ಲಿ ಪ್ರಧಾನಿ ಮೋದಿ ಹಲವು ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ವಿಶ್ವದ ಅತಿದೊಡ್ಡ ಹೈಬ್ರಿಡ್ ನವೀಕರಿಸಬಹುದಾದ ಶಕ್ತಿಕೇಂದ್ರ, ಶುದ್ಧ ಕುಡಿಯುವ ನೀರಿಗಾಗಿ ಡಿಸಾಲಿನೇಷನ್ ಕಾರ್ಖಾನೆ ಮತ್ತು ಹಾಲು ಶೀತಲೀಕರಣ ಕಾರ್ಖಾನೆ ಕಾಮಗಾರಿಗೆ ಅವರು ಅಡಿಗಲ್ಲು ಹಾಕಲಿದ್ದಾರೆ.

ಈ ಮುಖ್ಯ ಕಾರ್ಯಕ್ರಮಗಳಿಗೂ ಮೊದಲು ಮೋದಿ ರೈತರನ್ನು ಭೇಟಿಯಾಗಲಿದ್ದಾರೆ. ಭಾರತ-ಪಾಕ್ ಗಡಿಭಾಗದ ಕಚ್​ನ ರೈತರು ಪ್ರಧಾನಿಯನ್ನು ಸಂವಾದಕ್ಕೆ ಆಹ್ವಾನಿಸಿದ್ದಾರೆ. ಸುಮಾರು 5 ಸಾವಿರದಷ್ಟು ಸಿಖ್ ಕುಟುಂಬಗಳು ಈ ಪ್ರದೇಶದಲ್ಲಿವೆ ಎಂದು ಅಂದಾಜಿಸಲಾಗಿದೆ.

Published On - 1:34 pm, Tue, 15 December 20