ರಾಮಮಂದಿರ ಭೇಟಿಯನ್ನು ಮಾರ್ಚ್‌ಗೆ ಮುಂದೂಡುವಂತೆ ಕೇಂದ್ರ ಸಚಿವರಿಗೆ ಮೋದಿ ಮನವಿ

|

Updated on: Jan 24, 2024 | 8:14 PM

ಶ್ರೀರಾಮ ಲಲ್ಲಾನ 'ಪ್ರಾಣ ಪ್ರತಿಷ್ಠಾ' ಮತ್ತು ಸೋಮವಾರದ ಉದ್ಘಾಟನೆ ನಂತರ ದೇವಾಲಯಕ್ಕೆ ಭಕ್ತರ ದಂಡು ಹರಿದುಬರುತ್ತಿದೆ. ಸಾರ್ವಜನಿಕರಿಗಾಗಿ ದೇವಾಲಯದ ಬಾಗಿಲು ತೆರೆದ  ಮೊದಲ ದಿನವಾದ ಮಂಗಳವಾರ ಸುಮಾರು 5 ಲಕ್ಷ ಭಕ್ತರು ಆಗಮಿಸಿದ ಹಿನ್ನೆಲೆಯಲ್ಲಿ ಪವಿತ್ರ ನಗರದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

ರಾಮಮಂದಿರ ಭೇಟಿಯನ್ನು ಮಾರ್ಚ್‌ಗೆ ಮುಂದೂಡುವಂತೆ ಕೇಂದ್ರ ಸಚಿವರಿಗೆ ಮೋದಿ ಮನವಿ
ರಾಮಮಂದಿರ
Follow us on

ದೆಹಲಿ ಜನವರಿ 24: ರಾಮಲಲ್ಲಾನ (Ram Lalla) ದರ್ಶನಕ್ಕಾಗಿ ಅಯೋಧ್ಯೆ ರಾಮಮಂದಿರದಲ್ಲಿ (Ram mandir)  ಭಕ್ತರ ನೂಕುನುಗ್ಗಲು ಮತ್ತು ಉದ್ದನೆಯ ಸರತಿ ಸಾಲುಗಳು ಕಂಡುಬರುತ್ತಿವೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬುಧವಾರ ಕೇಂದ್ರ ಸಚಿವ ಸಂಪುಟ ಸಭೆಯ ಅಧ್ಯಕ್ಷತೆ ವಹಿಸಿದ್ದು, ರಾಮ ಮಂದಿರ ಭೇಟಿಯನ್ನು ಮಾರ್ಚ್‌ಗೆ ಮುಂದೂಡುವಂತೆ ಕೇಂದ್ರ ಸಚಿವರಿಗೆ ಹೇಳಿದ್ದಾರೆ. ಸರ್ಕಾರದ ಮೂಲಗಳ ಪ್ರಕಾರ, ಭಕ್ತ ಭಾರೀ ನೂಕುನುಗ್ಗಲು ಮತ್ತು ದೇವಾಲಯದ ಪಟ್ಟಣಕ್ಕೆ ವಿವಿಐಪಿ ಮತ್ತು ವಿಐಪಿ ಭೇಟಿಗಳಿಂದ ಸಾರ್ವಜನಿಕರಿಗೆ ಉಂಟಾದ ಅನಾನುಕೂಲತೆಗಳ ಜೊತೆಗೆ ಭದ್ರತೆ ಬಗ್ಗೆ ಪ್ರಧಾನಿ ಮೋದಿ ಕಳವಳ ವ್ಯಕ್ತಪಡಿಸಿದರು.

ಪ್ರತಿಯೊಬ್ಬರಿಗೂ ಸುಗಮ ಮತ್ತು ಹೆಚ್ಚು ಸಂಘಟಿತ ಅನುಭವವನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸಚಿವರು ಮಾರ್ಚ್‌ನಲ್ಲಿ ತಮ್ಮ ಅಯೋಧ್ಯೆ ಭೇಟಿಗಳನ್ನು ಯೋಜಿಸಬೇಕು ಇಲ್ಲವೇ ಭೇಟಿ ಮುಂದೂಡಬೇಕು ಎಂದು ಮೋದಿ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಬುಧವಾರ ಭೇಟಿ ನೀಡಿದ ಭಕ್ತರು ದೇವಾಲಯವನ್ನು ದರ್ಶನಕ್ಕಾಗಿ ತೆರೆದಾಗ  ಮುಂಚಿತವಾಗಿಯೇ ಕಾದು ಕುಳಿತಿದ್ದರು. ಶ್ರೀರಾಮ ಲಲ್ಲಾನ ‘ಪ್ರಾಣ ಪ್ರತಿಷ್ಠಾ’ ಮತ್ತು ಸೋಮವಾರದ ಉದ್ಘಾಟನೆ ನಂತರ ದೇವಾಲಯಕ್ಕೆ ಭಕ್ತರ ದಂಡು ಹರಿದುಬರುತ್ತಿದೆ. ಸಾರ್ವಜನಿಕರಿಗಾಗಿ ದೇವಾಲಯದ ಬಾಗಿಲು ತೆರೆದ  ಮೊದಲ ದಿನವಾದ ಮಂಗಳವಾರ ಸುಮಾರು 5 ಲಕ್ಷ ಭಕ್ತರು ಆಗಮಿಸಿದ ಹಿನ್ನೆಲೆಯಲ್ಲಿ ಪವಿತ್ರ ನಗರದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

ಬುಧವಾರ ಎಎನ್‌ಐ ಜೊತೆ ಮಾತನಾಡಿದ ರ್ಯಾಪಿಡ್ ಆಕ್ಷನ್ ಫೋರ್ಸ್ (ಆರ್‌ಎಎಫ್) ಡೆಪ್ಯುಟಿ ಕಮಾಂಡೆಂಟ್ ಅರುಣ್ ಕುಮಾರ್ ತಿವಾರಿ, “ಭಕ್ತರಿಗೆ ಅನಾನುಕೂಲವಾಗದಂತೆ ನಾವು ನೋಡಿಕೊಳ್ಳುತ್ತೇವೆ. ಸುಮಾರು 1,000 ಯೋಧರನ್ನು ದೇವಾಲಯದ ಒಳಗೆ ಮತ್ತು ಹೊರಗೆ ನಿಯೋಜಿಸಲಾಗಿದೆ. ಮುಂದಿನ ಕೆಲವು ದಿನಗಳವರೆಗೆ ನಿಯೋಜನೆ ಮುಂದುವರಿಯುತ್ತದೆ ಎಂದಿದ್ದಾರೆ.

ಕೇವಲ ರಾಮ ಮಂದಿರದಲ್ಲಷ್ಟೇ ಅಲ್ಲ ಪಕ್ಕದ ಹನುಮಾನ್ ಗಢಿ ದೇವಸ್ಥಾನದಲ್ಲೂ ಭಕ್ತರ ದಂಡು ಹರಿದು ಬಂದಿತ್ತು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಹನುಮಂತ ದೇವರಿಗೆ ಲಡ್ಡು ಸಮರ್ಪಿಸಿ ಪ್ರಸಾದ ವಿನಿಯೋಗ ಮಾಡಿಕೊಳ್ಳುತ್ತಿರುವುದು ಕಂಡು ಬಂತು.

ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್, ನವದೆಹಲಿ, ಇಂಟರ್ನ್ಯಾಷನಲ್ ರಾಮಾಯಣ ಮತ್ತು ವೈದಿಕ್ ರಿಸರ್ಚ್ ಇನ್ಸ್ಟಿಟ್ಯೂಟ್ ಡಿಪಾರ್ಟ್ಮೆಂಟ್ ಆಫ್ ಕಲ್ಚರ್, ಉತ್ತರ ಪ್ರದೇಶದ ಸಹಯೋಗದೊಂದಿಗೆ ಮುಂದಿನ ಕೆಲವು ದಿನಗಳಲ್ಲಿ ದೇವಾಲಯದ ಪಟ್ಟಣದಲ್ಲಿ ಆಚರಣೆಯ ವಾತಾವರಣ ಮತ್ತು ಉತ್ಸವವನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆಯಿದೆ. ಅಯೋಧ್ಯೆಯ ರಾಮ್ ಕಥಾ ಪಾರ್ಕ್ ಮತ್ತು ತುಳಸಿ ಉದ್ಯಾನದಲ್ಲಿ ಜನವರಿ 24-28 ರವರೆಗೆ ಭಗವಾನ್ ರಾಮನ ಜನ್ಮಸ್ಥಳದಲ್ಲಿ ಅಂತರರಾಷ್ಟ್ರೀಯ ರಾಮಾಯಣ ಉತ್ಸವ ನಡೆಯಲಿದೆ.

ಇದನ್ನೂ ಓದಿ:ಪ್ರಾಣ ಪ್ರತಿಷ್ಠೆ ವಿಧಿವಿಧಾನ ನೆರವೇರಿದ ಬಳಿಕ ಬಾಲರಾಮನಿಗೆ ಸಾಷ್ಟಾಂಗವೆರಗಿದ ಪ್ರಧಾನಿ ನರೇಂದ್ರ ಮೋದಿ 

ಅಂತರರಾಷ್ಟ್ರೀಯ ರಾಮಾಯಣ ಉತ್ಸವದಲ್ಲಿ ಪ್ರತಿನಿಧಿಸುವ ದೇಶಗಳಲ್ಲಿ ಶ್ರೀಲಂಕಾ, ಸಿಂಗಾಪುರ, ಥೈಲ್ಯಾಂಡ್, ಇಂಡೋನೇಷ್ಯಾ, ಮಾರಿಷಸ್ ಮತ್ತು ಲಾವೋಸ್ ಸೇರಿವೆ. ಅದ್ದೂರಿಯಾದ ‘ಪ್ರಾಣ ಪ್ರತಿಷ್ಠಾ ಸಮಾರಂಭ’ದಲ್ಲಿ ರಾಮ್ ಲಲ್ಲಾ ವಿಗ್ರಹವನ್ನು ಅನಾವರಣಗೊಳಿಸಲಾಯಿತು. ನರೇಂದ್ರ ಮೋದಿ ಈ ಕಾರ್ಯಕ್ಕೆ ನೇತೃತ್ವ ವಹಿಸಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ