ತಿರುಪತಿ ಲಡ್ಡುವಿನಲ್ಲಿ ಕಲಬೆರಕೆ ತುಪ್ಪ ವಿವಾದ ಭುಗಿಲೇಳುತ್ತಿದ್ದಂತೆ, ಪ್ರಯಾಗ್ರಾಜ್ನ ಹಲವು ದೇವಾಲಯಗಳು ಭಕ್ತರಿಗೆ ಶುದ್ಧತೆ ಕಾಪಾಡುವಂತೆ ಸಲಹೆ ನೀಡಿದ್ದಾರೆ. ಇಷ್ಟುದಿನ ಭಕ್ತರು ಹೊರಗಡೆಯಿಂದ ನೈವೇದ್ಯ, ಸಿಹಿತಿನಿಸುಗಳನ್ನು ಖರೀದಿಸಿ ದೇವರಿಗೆ ಒಪ್ಪಿಸುತ್ತಿದ್ದರು. ಆದರೆ ಇನ್ನುಮುಂದೆ ಯಾವುದೇ ಕಾರಣಕ್ಕೆ ಹೊರಗಡೆ ತಿನಿಸುಗಳನ್ನು ದೇವರಿಗೆ ನೀಡುವುದು ಬೇಡ, ಬದಲಾಗಿ ತೆಂಗಿನಕಾಯಿ, ಡ್ರೈಫ್ರೂಟ್ಸ್ ಅಥವಾ ಹಣ್ಣುಗಳನ್ನು ನೀಡುವಂತೆ ದೇವಾಲಯದ ಆಡಳಿತ ಮಂಡಳಿ ಮನವಿ ಮಾಡಿವೆ.
ತಿರುಪತಿ ದೇವಸ್ಥಾನದಲ್ಲಿ ಲಡ್ಡುಗಳನ್ನು ತಯಾರಿಸಲು ಪ್ರಾಣಿಗಳ ಕೊಬ್ಬಿನೊಂದಿಗೆ ಕಲಬೆರಕೆ ತುಪ್ಪವನ್ನು ಬಳಸಲಾಗಿದೆ ಎಂಬ ಆರೋಪದ ನಂತರ ನೈವೇದ್ಯಗಳ ಶುದ್ಧತೆ ಕುರಿತು ಕಳವಳದ ಮಧ್ಯೆ ಈ ಕ್ರಮವು ಕೇಳಿಬಂದಿದೆ.
ಮಂಕಮೇಶ್ವರ ದೇವಸ್ಥಾನವು ಭಕ್ತರು ಹೊರಗಿನಿಂದ ಖರೀದಿಸುವ ಪ್ರಸಾದ ನೈವೇದ್ಯಗಳನ್ನು ನಿಷೇಧಿಸಿದೆ ಮತ್ತು ಅವರು ಮನೆಯಲ್ಲಿ ತಯಾರಿಸಿದ ಪ್ರಸಾದ ಅಥವಾ ಹಣ್ಣುಗಳನ್ನು ನೀಡಬಹುದು ಎಂದು ಹೇಳಿದರು.
ಅಲೋಪ್ ಶಂಕರಿ ದೇವಿ, ಬಡೇ ಹನುಮಾನ್ ದೇವಸ್ಥಾನ, ಮಂಕಮೇಶ್ವರ ದೇವಸ್ಥಾನ ಮತ್ತು ಲಲಿತಾ ದೇವಿ ದೇವಸ್ಥಾನದಲ್ಲಿ ಕೆಲವು ನಿರ್ಬಂಧಗಳನ್ನು ಹೇರಲಾಗಿದೆ. ಲಲಿತಾ ದೇವಿ ದೇವಸ್ಥಾನದ ಪ್ರಧಾನ ಅರ್ಚಕ ಶಿವ ಮುರತ್ ಮಿಶ್ರಾ ಮಾತನಾಡಿ, ಮಂಗಳವಾರ ನಡೆದ ದೇವಸ್ಥಾನದ ಆಡಳಿತ ಮಂಡಳಿ ಸಭೆಯಲ್ಲಿ ದೇವಿಗೆ ಸಿಹಿ ತಿಂಡಿ ಪ್ರಸಾದ ನೀಡುವುದಿಲ್ಲ ಎಂದು ತೀರ್ಮಾನಿಸಲಾಗಿದ್ದು, ಭಕ್ತರು ತೆಂಗಿನಕಾಯಿ, ಹಣ್ಣುಗಳು, ಡ್ರೈಫ್ರೂಟ್ಸ್, ಏಲಕ್ಕಿ ಇತ್ಯಾದಿಗಳನ್ನು ನೀಡಲು ವಿನಂತಿಸಲಾಗಿದೆ.
ಮತ್ತಷ್ಟು ಓದಿ: ತಿರುಪತಿ ಲಡ್ಡು ವಿವಾದ; ಆಂಧ್ರಪ್ರದೇಶ ಸರ್ಕಾರದಿಂದ ಎಸ್‌ಐಟಿ ರಚನೆ
ದೇವಾಲಯದ ಆವರಣದೊಳಗೆ ಅಂಗಡಿಗಳನ್ನು ತೆರೆಯಲು ಯೋಜಿಸಲಾಗಿದೆ, ಅಲ್ಲಿ ಭಕ್ತರಿಗೆ ಶುದ್ಧ ಸಿಹಿತಿಂಡಿಗಳು ಲಭ್ಯವಾಗುವಂತೆ ಮಾಡಲಾಗುವುದು ಎಂದು ಅವರು ಹೇಳಿದರು. ದೇವಸ್ಥಾನದ ಹೊರಗೆ ಮಾರಾಟವಾಗುತ್ತಿರುವ ಲಡ್ಡು-ಪೇಡಾವನ್ನು ಪರೀಕ್ಷಿಸಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೇವೆ ಎಂದು ಮಂಕಮೇಶ್ವರ ದೇವಸ್ಥಾನದ ಮಹಂತ್ ಶ್ರೀಧರಾನಂದ ಬ್ರಹ್ಮಚಾರಿ ಜಿ ಮಹಾರಾಜ್ ಹೇಳಿದ್ದಾರೆ.
ಬಡೇ ಹನುಮಾನ್ ದೇವಾಲಯವು ದೇವಾಲಯದ ಆವರಣದಲ್ಲಿ ಪವಿತ್ರ ನೈವೇದ್ಯಗಳನ್ನು ಮಾಡಲು ಯೋಜಿಸಿದೆ. ದೇವಾಲಯದ ಕಾರಿಡಾರ್ ನಿರ್ಮಾಣ ಪೂರ್ಣಗೊಂಡ ನಂತರ, ದೇವಾಲಯದ ಆಡಳಿತ ಮಂಡಳಿಯು ಶ್ರೀ ಬಡೇ ಹನುಮಾನ್ ದೇವಾಲಯಕ್ಕೆ ಲಡ್ಡು-ಪೇಡಾ ಪ್ರಸಾದವನ್ನು ಸಿದ್ಧಪಡಿಸುತ್ತದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ