ಮ್ಯಾನ್​ಹೋಲ್ ದುರಂತದಿಂದ ಮುಂಬೈ ಮಹಿಳೆ ಸಾವಿನ ಬಳಿ ಹೆಚ್ಚಾಯ್ತು ಚರ್ಚೆ

ಎರಕಹೊಯ್ದ ಕಬ್ಬಿಣದಿಂದ ಮ್ಯಾನ್ ಹೋಲ್ ಕವರ್​ಗಳನ್ನು ಮಾಡಲಾಗಿದ್ದು, ಕಾಳಸಂತೆಯಲ್ಲಿ ಉತ್ತಮ ಬೆಲೆ ಸಿಗುತ್ತಿವೆ. ಇವುಗಳು ಸಣ್ಣ ಕಳ್ಳರ ಟಾರ್ಗೆಟ್ ಆಗಿದೆ. ಮಹಿಳೆಯೊಬ್ಬರು ಮ್ಯಾನ್​ಹೋಲ್​ಗೆ ಬಿದ್ದು ಸಾವನ್ನಪ್ಪಿದ ಬಳಿಕ ಈ ಬಗ್ಗೆ ಚರ್ಚೆಗಳು ಶುರುವಾಗಿವೆ.

ಮ್ಯಾನ್​ಹೋಲ್ ದುರಂತದಿಂದ ಮುಂಬೈ ಮಹಿಳೆ ಸಾವಿನ ಬಳಿ ಹೆಚ್ಚಾಯ್ತು ಚರ್ಚೆ
ಮ್ಯಾನ್‌ಹೋಲ್‌
Follow us
|

Updated on: Sep 26, 2024 | 9:17 PM

ಮುಂಬೈ: ಕಳೆದ ರಾತ್ರಿ ಜಲಾವೃತ ರಸ್ತೆಯ ಮ್ಯಾನ್‌ಹೋಲ್‌ಗೆ ಬಿದ್ದು 45 ವರ್ಷದ ವಿಮಲ ಅನಿಲ್ ಗಾಯಕ್‌ವಾಡ್ ಸಾವನ್ನಪ್ಪಿದ್ದು, ಮುಂಬೈನ ಮ್ಯಾನ್‌ಹೋಲ್ ದುರಂತಗಳು ಮತ್ತು ಕಳೆದ ಕೆಲವು ವರ್ಷಗಳಿಂದ ಸಾವನ್ನಪ್ಪಿದ ಜನರ ಸಂಖ್ಯೆಯ ಮೇಲೆ ಬೆಳಕು ಚೆಲ್ಲಿದೆ. ಈ ವರ್ಷವೇ ಮುಂಬೈ ಸಿಟಿಯಲ್ಲಿ ಅತ್ಯಧಿಕ ಮ್ಯಾನ್‌ಹೋಲ್ ದುರಂತಗಳು ಸಂಭವಿಸಿ 7 ಜನರು ಸಾವನ್ನಪ್ಪಿದ್ದಾರೆ.

ಕಳೆದ ತಿಂಗಳು, ಸುನಿಲ್ ವಾಕೋಡ್ ಎಂಬ ಕಾರ್ಮಿಕನು ನಾಗರಿಕ ಮಂಡಳಿಯ ಅನುಮತಿಯಿಲ್ಲದೆ ಚರಂಡಿಗಳನ್ನು ಸ್ವಚ್ಛಗೊಳಿಸಲು ಬೋರಿವಲಿ ಪಶ್ಚಿಮದಲ್ಲಿ ಬಿಎಂಸಿ ಮ್ಯಾನ್‌ಹೋಲ್ ಅನ್ನು ತೆರೆದಿದ್ದ. ಬಳಿಕ ಅದರಲ್ಲಿ ಬಿದ್ದು ಮೃತಪಟ್ಟಿದ್ದ. ಇದಕ್ಕೂ ಮೊದಲು, ಏಪ್ರಿಲ್‌ನಲ್ಲಿ ರಘು ಸೋಲಂಕಿ, ಜಾವೇದ್ ಶೇಖ್ ಮತ್ತು ಅವರ ಸಹೋದರ ಅಕಿಬ್ ಶೇಖ್ ಮಲಾಡ್ ಪೂರ್ವದಲ್ಲಿ ಮ್ಯಾನ್‌ಹೋಲ್‌ಗೆ ಬಿದ್ದಿದ್ದರು. 30 ಅಡಿ ಆಳದ ಮ್ಯಾನ್‌ಹೋಲ್‌ಗೆ ರಘು ಬಿದ್ದಿದ್ದು, ಸಹೋದರರಾದ ಜಾವೇದ್ ಮತ್ತು ಅಕಿಬ್ ಅವರನ್ನು ರಕ್ಷಿಸಲು ಯತ್ನಿಸಿದ್ದರು. ಈ ಘಟನೆಯಲ್ಲಿ ರಘು ಮತ್ತು ಜಾವೇದ್ ಸಾವನ್ನಪ್ಪಿದ್ದರು.

ಮಾರ್ಚ್‌ನಲ್ಲಿ ಮ್ಯಾನ್‌ಹೋಲ್ ದುರಂತವು 3 ಜೀವಗಳನ್ನು ಬಲಿ ತೆಗೆದುಕೊಂಡಿತು. ಕಾರ್ಮಿಕರಾದ ಸೂರಜ್ ಕೇವಟ್, ಬಿಕಾಸ್ ಕೇವಟ್ ಮತ್ತು ರಾಮ್ಲಗನ್ ಕೇವಟ್ ಮಲಾಡ್ ಪಶ್ಚಿಮದಲ್ಲಿ ಒಳಚರಂಡಿಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಅದರ ಚೇಂಬರ್‌ಗೆ ಬಿದ್ದು ಸಾವನ್ನಪ್ಪಿದ್ದರು.

ಇದನ್ನೂ ಓದಿ: ಮುಂಬೈನಲ್ಲಿ ಆರ್ಭಟಿಸಿದ ಮಿಂಚು ಸಹಿತ ಭಾರೀ ಮಳೆ; ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆ

ಮುಂಬೈನಲ್ಲಿ ಜಲಾವೃತಗೊಂಡ ರಸ್ತೆಯಲ್ಲಿ ಮ್ಯಾನ್‌ಹೋಲ್‌ಗೆ ಬಿದ್ದು ಇದೀಗ 45 ವರ್ಷದ ವಿಮಲ ಅನಿಲ್ ಗಾಯಕ್ವಾಡ್ ಸಾವನ್ನಪ್ಪಿದ್ದಾರೆ. 2017ರಲ್ಲಿ, ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ದೀಪಕ್ ಅಮ್ರಾಪುರ್ಕರ್ ಅವರು ಭಾರೀ ಮಳೆಯ ಸಮಯದಲ್ಲಿ ಪ್ರಭಾದೇವಿ ಬಳಿ ಮ್ಯಾನ್‌ಹೋಲ್‌ಗೆ ಬಿದ್ದು ಸಾವನ್ನಪ್ಪಿದ್ದರು. 2 ದಿನಗಳ ನಂತರ ವರ್ಲಿ ಬಳಿ ಆತನ ಶವ ಪತ್ತೆಯಾಗಿತ್ತು. ಮುಂದಿನ ವರ್ಷ 18 ವರ್ಷದ ಅರ್ಜುನ್ ಮಲಾಡ್‌ನಲ್ಲಿ ಮ್ಯಾನ್‌ಹೋಲ್‌ಗೆ ಬಿದ್ದು ಸಾವನ್ನಪ್ಪಿದ್ದರು.

35 ವರ್ಷದ ಗೃಹಿಣಿ ಹಾಗೂ ಎರಡು ಮಕ್ಕಳ ತಾಯಿ ಶೀತಲ್ ಭಾನುಶಾಲಿ ಘಾಟ್‌ಕೋಪರ್‌ನಲ್ಲಿ ಭಾರೀ ಮಳೆಯ ಸಂದರ್ಭದಲ್ಲಿ ಮ್ಯಾನ್‌ಹೋಲ್‌ಗೆ ಬಿದ್ದು ಸಾವನ್ನಪ್ಪಿದ್ದರು. ನಂತರ ಆಕೆಯ ಶವ ಹಾಜಿ ಅಲಿ ಬಳಿ ಪತ್ತೆಯಾಗಿತ್ತು.

ಕಳೆದ ಕೆಲವು ವರ್ಷಗಳಿಂದ ಮುಂಬೈನಲ್ಲಿ ಮ್ಯಾನ್‌ಹೋಲ್ ಕವರ್ ಕಳ್ಳತನ ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ಕಳೆದ ವರ್ಷ 791 ಮ್ಯಾನ್‌ಹೋಲ್ ಕವರ್ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಅದಕ್ಕೂ ಹಿಂದಿನ ವರ್ಷ, ಅಂತಹ ಪ್ರಕರಣಗಳ ಸಂಖ್ಯೆ 836 ಆಗಿತ್ತು. ಇದು ನಾಲ್ಕು ವರ್ಷಗಳಲ್ಲಿ ಅತಿ ಹೆಚ್ಚು ಎನ್ನಲಾಗಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ರಸ್ತೆ ಅಪಘಾತದಲ್ಲಿ KPTCL​​​ನ ಇಬ್ಬರು ಸಿಬ್ಬಂದಿ, ಓರ್ವ ಲೈನ್​ ಮ್ಯಾನ್​ ಸಾವು

ಮ್ಯಾನ್‌ಹೋಲ್ ಕವರ್‌ಗಳು ಎರಕಹೊಯ್ದ ಕಬ್ಬಿಣದಿಂದ ಮಾಡಲ್ಪಟ್ಟಿರುತ್ತವೆ. ಕಾಳಸಂತೆಯಲ್ಲಿ 3,000 ರೂ.ನಿಂದ 5,000 ರೂ.ವರೆಗೆ ಉತ್ತಮ ಬೆಲೆಯನ್ನು ಪಡೆಯುತ್ತವೆ. ಇದು ಸಣ್ಣ ಕಳ್ಳರ ಮುಖ್ಯ ಟಾರ್ಗೆಟ್ ಆಗಿದೆ.

ದೀಪಕ್ ಅಮ್ರಾಪುರ್ಕರ್ ಅವರ ಸಾವಿನ ನಂತರ, ಬಾಂಬೆ ಹೈಕೋರ್ಟ್, ಕಳ್ಳರಿಂದ ಕವರ್‌ಗಳನ್ನು ರಕ್ಷಿಸಲು ಮ್ಯಾನ್‌ಹೋಲ್‌ಗಳ ಮೇಲೆ ಪ್ರಿವೆಂಟಿವ್ ಗ್ರಿಲ್‌ಗಳನ್ನು ಅಳವಡಿಸುವಂತೆ ಬಿಎಂಸಿಗೆ ಸೂಚಿಸಿತ್ತು. ಕಳೆದ ವರ್ಷ ನಡೆದ ವಿಚಾರಣೆಯಲ್ಲಿ, ನಗರದ ಒಟ್ಟು 74,682 ಮ್ಯಾನ್‌ಹೋಲ್‌ಗಳ ಪೈಕಿ 1,908 ಮ್ಯಾನ್‌ಹೋಲ್‌ಗಳಲ್ಲಿ ಮಾತ್ರ ಗ್ರಿಲ್‌ಗಳನ್ನು ಅಳವಡಿಸಲಾಗಿದೆ ಎಂದು ನ್ಯಾಯಾಲಯ ಗಮನಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಿದ್ದರಾಮಯ್ಯಗೆ ಮುಡಾ ಸಂಕಷ್ಟ: ಈ ಹಿಂದೆ ಕೋಡಿಶ್ರೀ ನುಡಿದಿದ್ದ ಭವಿಷ್ಯ ನಿಜ
ಸಿದ್ದರಾಮಯ್ಯಗೆ ಮುಡಾ ಸಂಕಷ್ಟ: ಈ ಹಿಂದೆ ಕೋಡಿಶ್ರೀ ನುಡಿದಿದ್ದ ಭವಿಷ್ಯ ನಿಜ
ಬೆಂಗಳೂರಿನ ‘ಏರಿಯಾನ್ ಟೆಕ್ನಾಲಜಿ ಕಂಪನಿ’ಯಲ್ಲಿ ಅಗ್ನಿ ಅವಘಡ;ತಪ್ಪಿದ ಅನಾಹುತ
ಬೆಂಗಳೂರಿನ ‘ಏರಿಯಾನ್ ಟೆಕ್ನಾಲಜಿ ಕಂಪನಿ’ಯಲ್ಲಿ ಅಗ್ನಿ ಅವಘಡ;ತಪ್ಪಿದ ಅನಾಹುತ
ನ್ಯಾಯಾಂಗ ನಿಂದನೆ ತೂಗುಗತ್ತಿ ಬೆನ್ನಲ್ಲೇ ಎಚ್ಚೆತ್ತುಕೊಂಡ ಜಮೀರ್
ನ್ಯಾಯಾಂಗ ನಿಂದನೆ ತೂಗುಗತ್ತಿ ಬೆನ್ನಲ್ಲೇ ಎಚ್ಚೆತ್ತುಕೊಂಡ ಜಮೀರ್
ಮುನಿರತ್ನರಿಂದ ಅತ್ಯಾಚಾರ ಆರೋಪ;ವಿಕಾಸಸೌಧದಲ್ಲಿ ‘ಕೈ’ ಮುಖಂಡರಿಂದ ಶುದ್ಧೀಕರಣ
ಮುನಿರತ್ನರಿಂದ ಅತ್ಯಾಚಾರ ಆರೋಪ;ವಿಕಾಸಸೌಧದಲ್ಲಿ ‘ಕೈ’ ಮುಖಂಡರಿಂದ ಶುದ್ಧೀಕರಣ
ಮುಡಾ ಕೇಸ್: ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದ ಸಚಿವ ಜಮೀರ್​ಗೆ ಸಂಕಷ್ಟ!
ಮುಡಾ ಕೇಸ್: ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದ ಸಚಿವ ಜಮೀರ್​ಗೆ ಸಂಕಷ್ಟ!
ಫ್ಲಿಪ್​ಕಾರ್ಟ್​​​ನಲ್ಲಿ ಬುಕ್ ಮಾಡಿದ್ರೆ ಮನೆಗೇ ಬರುತ್ತೆ ಬೈಕ್, ಸ್ಕೂಟರ್!
ಫ್ಲಿಪ್​ಕಾರ್ಟ್​​​ನಲ್ಲಿ ಬುಕ್ ಮಾಡಿದ್ರೆ ಮನೆಗೇ ಬರುತ್ತೆ ಬೈಕ್, ಸ್ಕೂಟರ್!
ದರ್ಶನ್ ಭೇಟಿ ಮಾಡಿದ ‘ಡೆವಿಲ್’ ನಿರ್ದೇಶಕ; ಬ್ಯಾಗ್​ ತುಂಬ ತಂದಿದ್ದೇನು?
ದರ್ಶನ್ ಭೇಟಿ ಮಾಡಿದ ‘ಡೆವಿಲ್’ ನಿರ್ದೇಶಕ; ಬ್ಯಾಗ್​ ತುಂಬ ತಂದಿದ್ದೇನು?
ಬಿಜೆಪಿ ಪ್ರತಿಭಟನೆಗೆ ವಿಜಯೇಂದ್ರ ಗೈರು: ಶಾಸಕ ಯತ್ನಾಳ್​ ಏನ್​ ಹೇಳಿದ್ರು?
ಬಿಜೆಪಿ ಪ್ರತಿಭಟನೆಗೆ ವಿಜಯೇಂದ್ರ ಗೈರು: ಶಾಸಕ ಯತ್ನಾಳ್​ ಏನ್​ ಹೇಳಿದ್ರು?
ಪ್ರತಿಭಟನಾನಿರತ ಬಿಜೆಪಿ ನಾಯಕರನ್ನ ಎಳೆದೊಯ್ದ ಪೊಲೀಸರು
ಪ್ರತಿಭಟನಾನಿರತ ಬಿಜೆಪಿ ನಾಯಕರನ್ನ ಎಳೆದೊಯ್ದ ಪೊಲೀಸರು
ಜೈಲಿಗೆ ಬಂದ ಅಧಿಕಾರಿಗಳು, ಐಟಿ ವಿಚಾರಣೆಗೆ ಹಾಜರಾದ ನಟ ದರ್ಶನ್
ಜೈಲಿಗೆ ಬಂದ ಅಧಿಕಾರಿಗಳು, ಐಟಿ ವಿಚಾರಣೆಗೆ ಹಾಜರಾದ ನಟ ದರ್ಶನ್