ಮುಂಬೈನಲ್ಲಿ ಆರ್ಭಟಿಸಿದ ಮಿಂಚು ಸಹಿತ ಭಾರೀ ಮಳೆ; ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆ

ಮುಂಬೈನಲ್ಲಿ ಆರ್ಭಟಿಸಿದ ಮಿಂಚು ಸಹಿತ ಭಾರೀ ಮಳೆ; ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆ

ಅಕ್ಷತಾ ವರ್ಕಾಡಿ
|

Updated on: Sep 24, 2024 | 5:17 PM

ಮುಂಜಾನೆ 4 ಗಂಟೆಯ ಸುಮಾರಿಗೆ ನಗರದಲ್ಲಿ ಗುಡುಗು, ಮಿಂಚು ಸಹಿತಾ ಭಾರೀ ಮಳೆಯಾಗಿದ್ದು, ಜನರಲ್ಲಿ ಭಯ ಹುಟ್ಟಿಸಿದೆ. ಇದೀಗ ವರುಣಾರ್ಭಟದ ಸಾಕಷ್ಟು ಫೋಟೋ, ವಿಡಿಯೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗುತ್ತಿವೆ.

ಮಹಾರಾಷ್ಟ್ರ: ಅಲಾರಾಂ ಇಲ್ಲ, ಆದರೆ ಮಂಗಳವಾರ ಬೆಳಿಗ್ಗೆ ಮುಂಬೈನಲ್ಲಿ ಭಯಾನಕ ಗುಡುಗು ಸದ್ದು ಜನರನ್ನು ಎಚ್ಚರಗೊಳಿಸಿತು. ಮುಂಜಾನೆ 4 ಗಂಟೆಯ ಸುಮಾರಿಗೆ ನಗರದಲ್ಲಿ ಗುಡುಗು, ಮಿಂಚು ಸಹಿತಾ ಭಾರೀ ಮಳೆಯಾಗಿದ್ದು, ಜನರಲ್ಲಿ ಭಯ ಹುಟ್ಟಿಸಿದೆ. ಇದೀಗ ವರುಣಾರ್ಭಟದ ಸಾಕಷ್ಟು ಫೋಟೋ, ವಿಡಿಯೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗುತ್ತಿವೆ. ಸದ್ಯ @KuldeepRawat730 ಎಂಬ ಟ್ವಟಿರ್​ ಖಾತೆಯಲ್ಲಿ ಹಂಚಿಕೊಂಡ ಮಿಂಚಿನ ಫೋಟೋ ನೆಟ್ಟಗರನ್ನು ಬೆಚ್ಚಿ ಬೀಳಿಸಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ