ದೀದಿ ನಾಡಲ್ಲಿ ಕಮಲ ಅರಳಿಸಲು ಬಿಜೆಪಿ ಪ್ಲ್ಯಾನ್, ಮತ ಬೇಟೆಗೆ ಬೆಂಗಾಳಿ ಕಲೀತಿರೋ ಅಮಿತ್ ಶಾ
ದೆಹಲಿ: ಕೇಸರಿ ಪಾಳಯದ ಚುನಾವಣಾ ಚಾಣಕ್ಯ ಅಮಿತ್ ಶಾ ಮತ್ತೊಂದು ಭರ್ಜರಿ ಗೆಲುವಿಗಾಗಿ ತಯಾರಿ ಆರಂಭಿಸಿದ್ದಾರೆ. ಇತ್ತೀಚೆಗೆ ಸಾಲು ಸಾಲು ಸೋಲುಗಳಿಂದ ಸೊರಗುತ್ತಿರುವ ಬಿಜೆಪಿಗೆ ಮತ್ತೆ ಶಕ್ತಿ ತುಂಬಲು ಅಣಿಯಾಗಿದ್ದಾರೆ. ದೆಹಲಿ ಸೇರಿದಂತೆ ಬಿಹಾರ, ಪಶ್ಚಿಮ ಬಂಗಾಳ ಚುನಾವಣೆಗಳು ಹತ್ತಿರದಲ್ಲೇ ಇರುವಾಗ, ಹೊಸ ಬ್ರಹ್ಮಾಸ್ತ್ರ ಸಿದ್ಧಗೊಳಿಸಿದ್ದಾರೆ. ಬಂಗಾಳವೇ ಇರಲಿ.. ಬಿಹಾರವೇ ಇರಲಿ.. ಅಮಿತ್ ಶಾ ಎಂಟ್ರಿಯಾದ್ರು ಅಂದ್ರೆ ಅಲ್ಲಿ ಬಿಜೆಪಿಯದ್ದೇ ಹವಾ. ದೇಶಾದ್ಯಂತ ಬಿಜೆಪಿ ದಿಗ್ವಿಜಯ ಸಾಧಿಸಲು, ಕಮಲ ಕೋಟೆ ಭದ್ರಪಡಿಸಲು ಅಮಿತ್ ಶಾ ಸಾಕಷ್ಟು ಶ್ರಮಪಟ್ಟಿದ್ದಾರೆ. […]
ದೆಹಲಿ: ಕೇಸರಿ ಪಾಳಯದ ಚುನಾವಣಾ ಚಾಣಕ್ಯ ಅಮಿತ್ ಶಾ ಮತ್ತೊಂದು ಭರ್ಜರಿ ಗೆಲುವಿಗಾಗಿ ತಯಾರಿ ಆರಂಭಿಸಿದ್ದಾರೆ. ಇತ್ತೀಚೆಗೆ ಸಾಲು ಸಾಲು ಸೋಲುಗಳಿಂದ ಸೊರಗುತ್ತಿರುವ ಬಿಜೆಪಿಗೆ ಮತ್ತೆ ಶಕ್ತಿ ತುಂಬಲು ಅಣಿಯಾಗಿದ್ದಾರೆ. ದೆಹಲಿ ಸೇರಿದಂತೆ ಬಿಹಾರ, ಪಶ್ಚಿಮ ಬಂಗಾಳ ಚುನಾವಣೆಗಳು ಹತ್ತಿರದಲ್ಲೇ ಇರುವಾಗ, ಹೊಸ ಬ್ರಹ್ಮಾಸ್ತ್ರ ಸಿದ್ಧಗೊಳಿಸಿದ್ದಾರೆ.
ಬಂಗಾಳವೇ ಇರಲಿ.. ಬಿಹಾರವೇ ಇರಲಿ.. ಅಮಿತ್ ಶಾ ಎಂಟ್ರಿಯಾದ್ರು ಅಂದ್ರೆ ಅಲ್ಲಿ ಬಿಜೆಪಿಯದ್ದೇ ಹವಾ. ದೇಶಾದ್ಯಂತ ಬಿಜೆಪಿ ದಿಗ್ವಿಜಯ ಸಾಧಿಸಲು, ಕಮಲ ಕೋಟೆ ಭದ್ರಪಡಿಸಲು ಅಮಿತ್ ಶಾ ಸಾಕಷ್ಟು ಶ್ರಮಪಟ್ಟಿದ್ದಾರೆ. ಆದ್ರೆ ಇತ್ತೀಚೆಗೆ ಬಿಜೆಪಿಗೆ ಆಘಾತಗಳ ಮೇಲೆ ಆಘಾತ ಎದುರಾಗ್ತಿದೆ. ಮಹಾರಾಷ್ಟ್ರ ಹಾಗೂ ಜಾರ್ಖಂಡ್ನಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದ್ದರೆ, ಹರಿಯಾಣದಲ್ಲಿ ಸಮ್ಮಿಶ್ರ ಸರ್ಕಾರ ರಚಿಸುವ ಅನಿವಾರ್ಯತೆ ಎದುರಾಗಿತ್ತು. ಹೀಗಾಗಿ ಮುಂದಿನ ಚುನಾವಣೆಗಳಿಗೆ ಭರ್ಜರಿ ಸಿದ್ಧತೆ ಆರಂಭಿಸಿರುವ ಶಾ, ಪಶ್ಚಿಮ ಬಂಗಾಳವನ್ನೇ ಟಾರ್ಗೆಟ್ ಮಾಡಿ ಬೆಂಗಾಳಿ ಭಾಷೆ ಕಲಿಯೋಕೆ ಮುಂದಾಗಿದ್ದಾರೆ. ಆ ಮೂಲಕ ಮಮತಾ ಬ್ಯಾನರ್ಜಿಗೆ ಸೆಡ್ಡು ಹೊಡೆಯಲು ಸಿದ್ಧರಾಗ್ತಿದ್ದಾರೆ.
‘ಕಮಲ ಪಡೆ’ಗೆ ಗೆಲುವಿನ ಅನಿವಾರ್ಯತೆ..! ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಷ್ಟು ಬಲವಾಗಿಲ್ಲ. ಹೀಗಿದ್ದರೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಅಮಿತ್ ಶಾ ರಣತಂತ್ರ ಹೆಣೆದು ಅತಿ ಹೆಚ್ಚು ಸ್ಥಾನಗಳನ್ನ ಗೆಲ್ಲಿಸುವಲ್ಲಿ ಯಶಸ್ಸು ಕಂಡಿದ್ರು. ಆದ್ರೆ, ಸದ್ಯದ ಸ್ಥಿತಿ ಹಾಗಿಲ್ಲ. ಪಶ್ಚಿಮ ಬಂಗಾಳ ವಿಧಾನಸಭೆಗೆ ಕೌಂಟ್ಡೌನ್ ಶುರುವಾಗಿದ್ದು, ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಇದೆಲ್ಲವನ್ನು ಚೆನ್ನಾಗಿ ಅರಿತಿರುವ ಅಮಿತ್ ಶಾ, ಬೆಂಗಾಳಿಗಳನ್ನ ಅವರ ಮಾತೃಭಾಷೆಯಿಂದಲೇ ಗೆಲ್ಲಲು ಮುಂದಾಗಿದ್ದಾರೆ. ದೀದಿಗೆ ಟಾಂಗ್ ಕೊಡಲು ಬೆಂಗಾಳಿ ಕಲಿಯುತ್ತಿರುವ ಶಾ, ಲೋಕಸಭಾ ಚುನಾವಣೆಯ ದಿಗ್ವಿಜಯವನ್ನ ಮರುಕಳಿಸುವಂತೆ ಮಾಡಲು ಸಾಕಷ್ಟು ಶ್ರಮಪಡ್ತಿದ್ದಾರೆ.
ಅಂದು ಹಿಂದಿ ಕಲಿತಿದ್ದರು.. ಇಂದು ಬೆಂಗಾಳಿ ಸರದಿ..! ಅಂದಹಾಗೆ ಶಾ ಗುಜರಾತ್ ಮೂಲದವರಾಗಿದ್ದು, ಗುಜರಾತಿ ಭಾಷೆ ಮೇಲೆ ಹಿಡಿತ ಇಟ್ಟುಕೊಂಡಿದ್ದರು. ಆದ್ರೆ 2010ಕ್ಕೂ ಮೊದಲು ಅವರು ಹಿಂದಿ ಭಾಷೆ ಮೇಲೆ ಹಿಡಿತ ಹೊಂದಿರಲಿಲ್ಲ. ನಂತರ ನಡೆದ ಘಟನೆಗಳಿಂದ ಅಮಿತ್ ಶಾ ಅನಿವಾರ್ಯವಾಗಿ ಹಿಂದಿ ಕಲಿತು, ಇಡೀ ಉತ್ತರಭಾರತದಲ್ಲಿ ಛಾಪು ಮೂಡಿಸಿರುವುದು ಎಲ್ಲರಿಗೂ ಗೊತ್ತಿದೆ. ಈ ಮಧ್ಯೆ ಬೆಂಗಾಳಿಯನ್ನ ಕಲಿತು ತಮಿಳು ಭಾಷೆ ಮೇಲೂ ಹಿಡಿತ ಸಾಧಿಸಲು ಶ್ರಮಪಡ್ತಿದ್ದಾರೆ. ತಮಿಳುನಾಡಿನಲ್ಲಿ ಹಿಂದಿ ನಡೆಯೋದಿಲ್ಲ ಅಂತಾ ಗೊತ್ತಾಗಿರೋದ್ರಿಂದ ಅಮಿತ್ ಶಾ ತಮಿಳು ಭಾಷೆಯನ್ನೂ ಕಲಿಯುತ್ತಿದ್ದಾರೆ. ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಇದು ಸಹಕಾರಿಯಾಗಲಿದೆ.
ಒಟ್ನಲ್ಲಿ ತಮ್ಮ ಚುನಾವಣಾ ರಣತಂತ್ರಗಳು ಹಾಗೂ ರಾಜಕೀಯ ನೈಪುಣ್ಯತೆಯಿಂದಲೇ ಛಾಪು ಮೂಡಿಸೋ ಅಮಿತ್ ಶಾ, ಬಿಜೆಪಿ ಅಧಿಕಾರದಲ್ಲಿ ಇಲ್ಲದ ರಾಜ್ಯಗಳನ್ನೇ ಟಾರ್ಗೆಟ್ ಮಾಡ್ತಿದ್ದಾರೆ. ಆ ಮೂಲಕ ಅಲ್ಲೆಲ್ಲಾ ಬಿಜೆಪಿಗೆ ಬಲ ತುಂಬಿ, ಪಕ್ಷ ಸಂಘಟನೆಗೆ ಒತ್ತು ನೀಡ್ತಿದ್ದಾರೆ. ಆದರೆ ಭಾಷಾ ಪ್ರೇಮ ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದನ್ನ ಪಶ್ಚಿಮ ಬಂಗಾಳ ಚುನಾವಣೆ ಬಳಿಕವೇ ತಿಳಿಯಬೇಕು.