AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಶ್ಚಿಮ ಬಂಗಾಳದಲ್ಲಿ ವರ್ಚುವಲ್ ರ‍್ಯಾಲಿ, ಮಮತಾ ವಿರುದ್ಧ ಗೆಲುವಿಗಾಗಿ ಅಮಿತ್ ಶಾ ರಣತಂತ್ರ

ದೆಹಲಿ: ‘ಕೊರೊನಾ’ ಲಾಕ್​ಡೌನ್ ಮುಗಿಯುತ್ತಿದ್ದಂತೆ ರಾಜಕೀಯ ಪಕ್ಷಗಳು ಚುನಾವಣಾ ಅಖಾಡಕ್ಕೆ ಧುಮುಕುತ್ತಿವೆ. ಬಿಜೆಪಿ ವಿಪಕ್ಷಗಳಿಗಿಂತ ಹೆಚ್ಚುಶ್ರಮ ಹಾಕುತ್ತಾ ಗೆಲುವಿಗಾಗಿ ರಣತಂತ್ರ ರೂಪಿಸುತ್ತಿದೆ. ಭಾನುವಾರದಿಂದ ಶುರುವಾಗಿರುವ ಈ ಱಲಿಗಳ ಪರ್ವ ಇಂದು ಕೂಡ ಮುಂದುವರಿಯಲಿದೆ. ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್ ಶಾ ಮಾಸ್ಟರ್ ಪ್ಲ್ಯಾನ್ ಮಾಡ್ಕೊಂಡು ಎಲೆಕ್ಷನ್ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕೆಲವೇ ತಿಂಗಳು ಅಷ್ಟೇ.. ದೇಶದಲ್ಲಿ ಮಹತ್ವದ ಚುನಾವಣೆಗಳು ಎದುರಾಗಲಿವೆ. ಇದಕ್ಕಾಗಿ ಭರದ ಸಿದ್ಧತೆಗಳು ಸಾಗಿದ್ದು, ವಿಪಕ್ಷಗಳನ್ನ ಬಗ್ಗುಬಡಿಯಲು ಬಿಜೆಪಿ ಮಾಸ್ಟರ್ ಪ್ಲ್ಯಾನ್ ಮಾಡ್ತಾ ಇದೆ. ಇದುವರೆಗೂ […]

ಪಶ್ಚಿಮ ಬಂಗಾಳದಲ್ಲಿ ವರ್ಚುವಲ್ ರ‍್ಯಾಲಿ, ಮಮತಾ ವಿರುದ್ಧ ಗೆಲುವಿಗಾಗಿ ಅಮಿತ್ ಶಾ ರಣತಂತ್ರ
ಅಮಿತ್ ಶಾ
ಸಾಧು ಶ್ರೀನಾಥ್​
| Edited By: |

Updated on:Jun 09, 2020 | 10:32 AM

Share

ದೆಹಲಿ: ‘ಕೊರೊನಾ’ ಲಾಕ್​ಡೌನ್ ಮುಗಿಯುತ್ತಿದ್ದಂತೆ ರಾಜಕೀಯ ಪಕ್ಷಗಳು ಚುನಾವಣಾ ಅಖಾಡಕ್ಕೆ ಧುಮುಕುತ್ತಿವೆ. ಬಿಜೆಪಿ ವಿಪಕ್ಷಗಳಿಗಿಂತ ಹೆಚ್ಚುಶ್ರಮ ಹಾಕುತ್ತಾ ಗೆಲುವಿಗಾಗಿ ರಣತಂತ್ರ ರೂಪಿಸುತ್ತಿದೆ. ಭಾನುವಾರದಿಂದ ಶುರುವಾಗಿರುವ ಈ ಱಲಿಗಳ ಪರ್ವ ಇಂದು ಕೂಡ ಮುಂದುವರಿಯಲಿದೆ. ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್ ಶಾ ಮಾಸ್ಟರ್ ಪ್ಲ್ಯಾನ್ ಮಾಡ್ಕೊಂಡು ಎಲೆಕ್ಷನ್ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಕೆಲವೇ ತಿಂಗಳು ಅಷ್ಟೇ.. ದೇಶದಲ್ಲಿ ಮಹತ್ವದ ಚುನಾವಣೆಗಳು ಎದುರಾಗಲಿವೆ. ಇದಕ್ಕಾಗಿ ಭರದ ಸಿದ್ಧತೆಗಳು ಸಾಗಿದ್ದು, ವಿಪಕ್ಷಗಳನ್ನ ಬಗ್ಗುಬಡಿಯಲು ಬಿಜೆಪಿ ಮಾಸ್ಟರ್ ಪ್ಲ್ಯಾನ್ ಮಾಡ್ತಾ ಇದೆ. ಇದುವರೆಗೂ ವಿಜಯ ಪತಾಕೆ ಹಾರಿಸದ ರಾಜ್ಯಗಳಲ್ಲಿ ಕೇಸರಿ ಬಾವುಟ ನೆಡಲು ಕೌಂಟ್​ಡೌನ್ ಶುರುವಾಗಿದೆ.

ಅದ್ರಲ್ಲೂ ಅಮಿತ್ ಶಾ ಅಧ್ಯಕ್ಷಗಾದಿ ಬಿಟ್ಟರೂ, ಬಿಜೆಪಿ ಪಕ್ಷ ಸಂಘಟನೆಯಿಂದ ದೂರ ಉಳಿದಿಲ್ಲ. ಪಕ್ಷದ ಜವಾಬ್ದಾರಿ ಜೆ.ಪಿ. ನಡ್ಡಾಗೆ ವಹಿಸಿದ್ದರೂ ಕೂಡ ಅಮಿತ್ ಈಗಲೂ ಫುಲ್ ಌಕ್ಟಿವ್ ಆಗಿದ್ದಾರೆ. ಇದೇ ಕಾರಣಕ್ಕೆ ಭಾನುವಾರ ಬಿಹಾರದ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ವರ್ಚುವಲ್ ಱಲಿ ನಡೆಸಿದ್ದ ಬಿಜೆಪಿ ಚಾಣಕ್ಯ ಅಮಿತ್ ಶಾ, ನಿನ್ನೆ ಒರಿಸ್ಸಾ ಕಾರ್ಯಕರ್ತರ ಜೊತೆಯಲ್ಲಿ ಚರ್ಚೆ ನಡೆಸಿದ್ದರು. ಇಂದು ಪಶ್ಚಿಮ ಬಂಗಾಳದ ಸರದಿ ಬಂದಿದೆ.

ಪಶ್ಚಿಮ ಬಂಗಾಳದಲ್ಲಿ ಅಮಿತ್ ಶಾ ಹವಾ..! ಯೆಸ್, ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಅಮಿತ್ ಶಾ ಇದೇ ವರ್ಷದ ಮಾರ್ಚ್ 1 ರಂದು ಸಿಎಎ ಪರ ಱಲಿ ನಡೆಸಿದ್ರು. ನಂತರ ಲಾಕ್‌ಡೌನ್ ಪರಿಣಾಮ ಡಿಜಿಟಲ್ ಱಲಿ ನಡೆಸ್ತಿದ್ದಾರೆ. ಆದ್ರೆ ಈ ಹಿಂದಿನ ಪರಿಸ್ಥಿತಿಗಳಿಗೆ ಹೋಲಿಸಿದ್ರೆ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪ್ರಬಲವಾಗುತ್ತಾ ಸಾಗಿದೆ.

2014ರಲ್ಲಿ ಪಶ್ಚಿಮ ಬಂಗಾಳದಲ್ಲಿ ಕೇವಲ 2 ಲೋಕಸಭಾ ಕ್ಷೇತ್ರಗಳನ್ನ ಗೆದ್ದಿದ್ದ ಬಿಜೆಪಿ, ಅಮಿತ್ ಶಾ ರಣತಂತ್ರದಿಂದ 2019ರ ಲೋಕಸಭೆ ಚುನಾವಣೆಯಲ್ಲಿ 18 ಲೋಕಸಭಾ ಕ್ಷೇತ್ರಗಳಲ್ಲಿ ಗೆದ್ದು ಬೀಗಿತ್ತು. ಇದೇ ರೀತಿ 2021ರ ವೆಸ್ಟ್ ಬೆಂಗಾಲ್ ವಿಧಾನಸಭೆ ಚುನಾವಣೆಯಲ್ಲೂ ಗೆಲುವಿನ ನಗಾರಿ ಬಾರಿಸಲು ಕಮಲಪಾಳಯ ಸಿದ್ಧವಾಗಿದೆ. ಮಮತಾ ಬ್ಯಾನರ್ಜಿ ವಿರುದ್ಧ ಗೆಲುವಿಗಾಗಿ ರಣತಂತ್ರವೇ ಸಿದ್ಧವಾಗಿದ್ದು, ಪಶ್ಚಿಮ ಬಂಗಾಳದಲ್ಲಿ ಅಮಿತ್ ಶಾ ಹವಾ ಎಬ್ಬಿಸಿದ್ದಾರೆ.

ಇವತ್ತು ನಡೆಯಲಿರುವ ವರ್ಚುವಲ್ ಱಲಿಗೆ ಪಶ್ಚಿಮ ಬಂಗಾಳದ 88 ಸಾವಿರ ಬೂತ್​ಗಳ ಪೈಕಿ 65 ಸಾವಿರ ಬೂತ್​ಗಳಲ್ಲಿ ಬಿಜೆಪಿ ಭರದ ಸಿದ್ಧತೆ ನಡೆಸಿದೆ. ಅತ್ತ ಎಡಪಕ್ಷಗಳು ಸೇರಿದಂತೆ ಕಾಂಗ್ರೆಸ್ ಪಶ್ಚಿಮ ಬಂಗಾಳದಲ್ಲಿ ವೀಕ್ ಆಗ್ತಿದ್ರೆ, ಬಿಜೆಪಿ ಮಾತ್ರ ಗಾಢವಾಗಿ ಬೇರೂರುತ್ತಿದೆ. ಇದು ಮಮತಾ ಬ್ಯಾನರ್ಜ್ ಌಂಡ್ ಟೀಂಗೆ ಬೆವರಿಳಿಸಿದೆ.

Published On - 7:53 am, Tue, 9 June 20