ಜುಲೈ 28ರಂದು ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಅವರ 120 ದಿನಗಳ ಪಾದಯಾತ್ರೆಗೆ ಅಮಿತ್ ಶಾ ಚಾಲನೆ

ಅಣ್ಣಾಮಲೈ ಅವರು ಆಗಸ್ಟ್ 7 ರಂದು ಮಧುರೈನಲ್ಲಿ ಬಿಜೆಪಿ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. 50 ನೇ ದಿನದ ಪಾದಯಾತ್ರೆ ಪರಮತಿ ವೆಲ್ಲೂರಿನಲ್ಲಿ ಮತ್ತು 100 ನೇ ದಿನದ ಪಾದಯಾತ್ರೆ ವಂದವಾಸಿ ಮತ್ತು ಉತ್ತರಮೇರೂರಿನಲ್ಲಿ ನಡೆಯಲಿದೆ. ಉದ್ಘಾಟನಾ ದಿನದಂದು ಸುಮಾರು ಒಂದೂವರೆ ಲಕ್ಷ ಸ್ವಯಂಸೇವಕರು ಭಾಗವಹಿಸಲಿದ್ದಾರೆ.

ಜುಲೈ 28ರಂದು ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಅವರ 120 ದಿನಗಳ ಪಾದಯಾತ್ರೆಗೆ ಅಮಿತ್ ಶಾ ಚಾಲನೆ
ಕೆ.ಅಣ್ಣಾಮಲೈ

Updated on: Jul 12, 2023 | 1:06 PM

ತಮಿಳುನಾಡು (Tamil Nadu) ಬಿಜೆಪಿ ಮುಖ್ಯಸ್ಥ ಕೆ.ಅಣ್ಣಾಮಲೈ (K Annamalai) ಅವರು 120 ದಿನಗಳ ಕಾಲ ಪಾದಯಾತ್ರೆ  ನಡೆಸಲಿದ್ದಾರೆ. ಈ ಪಾದಯಾತ್ರೆಗೆ ಕೇಂದ್ರ ಗೃಹ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಅಮಿತ್ ಶಾ (Amit Shah) ಅವರು ಜುಲೈ 28 ರಂದು ರಾಮೇಶ್ವರಂನಿಂದ ಚಾಲನೆ ನೀಡಲಿದ್ದಾರೆ. ‘ಎನ್ ಮಣ್ ಎನ್ ಮಕ್ಕಳ್ – ಪ್ರಥಮರ್ ಮೋದಿಯಿನ್ ತಮಿಳ್ ಮುಝಕ್ಕಂ’ (ನನ್ನ ಭೂಮಿ, ನನ್ನ ಜನರು – ತಮಿಳರಿಗೆ ಪ್ರಧಾನಿ ಮೋದಿಯವರ ಕರೆ) ಎಂಬ ಹೆಸರಿನ ಈ ಯಾತ್ರೆಯು ಎಲ್ಲಾ 234 ವಿಧಾನಸಭಾ ಕ್ಷೇತ್ರಗಳನ್ನು ಹಾದುಹೋಗಲಿದ್ದು, 2024 ರ ಜನವರಿ ಮಧ್ಯದಲ್ಲಿ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಚೆನ್ನೈನಲ್ಲಿ ಕೊನೆಗೊಳ್ಳಲಿದೆ. ಈ ಹಿಂದೆ ಪೂರ್ಣವಾಗಿ ಪಾದಯಾತ್ರೆ ಎಂದು ಹೇಳಿದ್ದರೂ ಕೆಲವೆಡೆ ಬಸ್ಸಿನಲ್ಲಿ ಸಂಚಾರ ನಡೆಯಲಿದೆ.

ಅಣ್ಣಾಮಲೈ ಅವರು ಆಗಸ್ಟ್ 7 ರಂದು ಮಧುರೈನಲ್ಲಿ ಬಿಜೆಪಿ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. 50 ನೇ ದಿನದ ಪಾದಯಾತ್ರೆ ಪರಮತಿ ವೆಲ್ಲೂರಿನಲ್ಲಿ ಮತ್ತು 100 ನೇ ದಿನದ ಪಾದಯಾತ್ರೆ ವಂದವಾಸಿ ಮತ್ತು ಉತ್ತರಮೇರೂರಿನಲ್ಲಿ ನಡೆಯಲಿದೆ.
ಉದ್ಘಾಟನಾ ದಿನದಂದು ಸುಮಾರು ಒಂದೂವರೆ ಲಕ್ಷ ಸ್ವಯಂಸೇವಕರು ಭಾಗವಹಿಸಲಿದ್ದಾರೆ.

ಪಾದಯಾತ್ರೆಯಲ್ಲಿ ಸುಮಾರು 5 ಸಾವಿರ ಜನರು ಭಾಗವಹಿಸುತ್ತಾರೆ. ಈ ರೋಡ್‌ಶೋ ಲೋಕಸಭಾ ಚುನಾವಣೆಯ ಪೂರ್ವಭಾವಿ ಸಿದ್ಧತೆ ಎಂದು ತಮಿಳುನಾಡು ಬಿಜೆಪಿಯ ಉಪಾಧ್ಯಕ್ಷ ನಾರಾಯಣನ್ ತಿರುಪತಿ ನ್ಯೂಸ್ 9 ಗೆ ತಿಳಿಸಿದ್ದಾರೆ.

ಇದನ್ನೂ ಓದಿ: Opposition Meet: ಬೆಂಗಳೂರಿನಲ್ಲಿ ಜುಲೈ 17-18ರಂದು ನಡೆಯಲಿರುವ ಪ್ರತಿಪಕ್ಷಗಳ ಸಭೆಯಲ್ಲಿ 24 ಪಕ್ಷಗಳು ಭಾಗಿ

ಇದೇ ವೇಳೆ ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಪೌಲ್ ಕನಕರಾಜ್, ಚಕ್ರವರ್ತಿ, ಕ್ರೀಡಾ ಮತ್ತು ಕೌಶಲ್ಯಾಭಿವೃದ್ಧಿ ರಾಜ್ಯ ಅಧ್ಯಕ್ಷ ಅಮರ್ ಪ್ರಸಾದ್ ರೆಡ್ಡಿ ಅವರು ಅಣ್ಣಾಮಲೈ ಪಾದಯಾತ್ರೆಗೆ ಭದ್ರತೆ ನೀಡುವಂತೆ ಕೋರಿ ಡಿಜಿಪಿ ಶಂಕರ್ ಜಿವಾಲ್ ಅವರಿಗೆ ನಿನ್ನೆ ಮನವಿ ಸಲ್ಲಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:01 pm, Wed, 12 July 23