Tomato: ಬೆಲೆ ಏರಿಕೆಯಾದಾಗಿಂದ ಟೊಮೆಟೊವನ್ನು ಕಾಪಾಡಿಕೊಳ್ಳಲು ರೈತರ ಸಾಹಸ: ರಾಜಸ್ಥಾನದಲ್ಲಿ ಒಂದೂವರೆ ಕ್ವಿಂಟಾಲ್ ಕಳ್ಳತನ
ಟೊಮೆಟೊ ಬೆಲೆ ಏರಿಕೆಯಾದಾಗಿಂದ ಅದನ್ನು ಕಾಪಾಡಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ, ಹಗಲು ರಾತ್ರಿ ಗಿಡದ ಬಳಿಯೇ ಮಲಗುತ್ತಿದ್ದಾರೆ. ಆದರೂ ಕಳ್ಳರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಟೊಮೆಟೊ(Tomato) ಬೆಲೆ ಏರಿಕೆಯಾದಾಗಿಂದ ಅದನ್ನು ಕಾಪಾಡಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ, ಹಗಲು ರಾತ್ರಿ ಗಿಡದ ಬಳಿಯೇ ಮಲಗುತ್ತಿದ್ದಾರೆ. ಆದರೂ ಕಳ್ಳರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ರಾಜಸ್ಥಾನದಲ್ಲಿ ಒಂದೂವರೆ ಕ್ವಿಂಟಾಲ್ ಟೊಮೆಟೊ ಕಳ್ಳತನವಾಗಿದೆ. ಟೊಮೆಟೊ ಮಾತ್ರವಲ್ಲದೆ 350 ಕೆಜಿ ಶುಂಠಿಯನ್ನೂ ಕಳ್ಳರು ಕೊಂಡೊಯ್ದಿದ್ದಾರೆ.
50 ಸಾವಿರ ರೂ ಮೌಲ್ಯದ ಒಂದೂವರೆ ಕ್ವಿಂಟಾಲ್ ಟೊಮೆಟೊ ಹಾಗೂ ಶುಂಠಿಯನ್ನು ಕಳ್ಳತನ ಮಾಡಿದ್ದಾರೆ. ಇಬ್ಬರು ಕಳ್ಳರು ಮುಖಕ್ಕೆ ಮಾಸ್ಕ್ ಧರಿಸಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಮೊದಲು ಹಾಸನ ಜಿಲ್ಲೆಯಲ್ಲಿ ರೈತರೊಬ್ಬರ ಜಮೀನಿನಲ್ಲಿ 2.5 ಲಕ್ಷ ರೂ ಮೌಲ್ಯದ ಟೊಮೆಟೋ ಕಳ್ಳತನವಾಗಿತ್ತು. ಜುಲೈ 4 ರಂದು ರಾತ್ರಿ ಕಳ್ಳರು ತಮ್ಮ ಜಮೀನಿನಲ್ಲಿದ್ದ 2.5 ಲಕ್ಷ ರೂ ಮೌಲ್ಯದ ಟೊಮೆಟೊವನ್ನು ಕದ್ದೊಯ್ದಿದ್ದಾರೆ ಎಂದು ರೈತ ಹೇಳಿದ್ದಾರೆ, 2 ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆಯಲಾಗಿತ್ತು. ಟೊಮೆಟೋ ಖರೀದಿಗೂ ಸಾಲ ಮಾಡಿಕೊಂಡಿದ್ದರು.
ಮತ್ತಷ್ಟು ಓದಿ:ಚಿಕ್ಕಮಗಳೂರು: ತರಕಾರಿ ಅಂಗಡಿಯಿಂದ 40 ಕೆಜಿ ಟೊಮೆಟೊ ಕಳ್ಳತನ
ಟೊಮೆಟೊ ಬೆಲೆ ಏರಿಕೆಯಿಂದ ಸ್ವಲ್ಪ ಹಣ ಗಳಿಸುವ ನಿರೀಕ್ಷೆ ಹೊಂದಿದ್ದರು, ಮಧ್ಯಪ್ರದೇಶದಲ್ಲೂ ಇಂಥದ್ದೇ ಪ್ರಕರಣ ಬೆಳಕಿಗೆ ಬಂದಿದ್ದು, ರೈತರ ಜಮೀನಿನಲ್ಲಿದ್ದ ಟೊಮೆಟೊವನ್ನು ಕದ್ದಿದ್ದರು.
ಟೊಮೆಟೊ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಕೆಜಿ 30ರಿಂದ 40ರೂ. ಮಾರಾಟವಾಗುತ್ತಿದ್ದ ಟೊಮೆಟೊ ಈಗ ಮಾರುಕಟ್ಟೆಯಲ್ಲಿ 150ರಿಂದ 200 ರೂ. ಬೆಲೆ ಏರಿಕೆಯ ನಂತರ ಇದೀಗ ಕಳ್ಳತನವೂ ಶುರುವಾಗಿದೆ.
ಕರ್ನಾಟಕ, ತೆಲಂಗಾಣ ನಂತರ ಇದೀಗ ರಾಜಸ್ಥಾನದಿಂದ ಟೊಮೆಟೊ ಕಳ್ಳತನದ ಘಟನೆ ಮುನ್ನೆಲೆಗೆ ಬಂದಿದೆ. ಸದ್ಯ ರಾಜಸ್ಥಾನದ ಸಗಟು ಮಾರುಕಟ್ಟೆಯಲ್ಲಿ ಟೊಮೆಟೊ ಕೆಜಿಗೆ 100 ರಿಂದ 110 ರೂ.ಗೆ ಮಾರಾಟವಾಗುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ