AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೃತಸರ: ಪೊಲೀಸ್​ ಠಾಣೆ ಬಳಿ ನಿಗೂಢ ಸ್ಫೋಟ

ಅಮೃತಸರ ಪೊಲೀಸ್​ ಠಾಣೆ ಬಳಿ ನಿಗೂಢ ಸ್ಫೋಟ ಸಂಭವಿಸಿದೆ. ಪಶ್ಚಿಮ ಅಮೃತಸರದ ಎಸಿಪಿ ಶಿವದರ್ಶನ್ ಸಿಂಗ್ ಪ್ರಕಾರ , ಪೊಲೀಸ್ ಠಾಣೆಯ ಉಸ್ತುವಾರಿ ಎಎಸ್‌ಐ ಹರ್ಜಿಂದರ್ ಸಿಂಗ್ ಕೆಲಸದಲ್ಲಿ ತೊಡಗಿದ್ದಾಗ, ಘಟನೆ ಸಂಭವಿಸಿದೆ. ಘಟನಾ ಸ್ಥಳವನ್ನು ತಲುಪಿದ ಸಿಂಗ್, ಎಎಸ್‌ಐ ತಜೀಂದರ್ ಸಿಂಗ್ ಅವರ ಕಾರಿನಿಂದ ಕೂಲಂಟ್ ಸೋರಿಕೆಯಾಗುತ್ತಿರುವುದನ್ನು ಪತ್ತೆಮಾಡಿದ್ದರು. ವಾಹನ ತಪಾಸಣೆಗೆ ಮೆಕ್ಯಾನಿಕ್‌ನನ್ನು ಕರೆಸಲಾಗಿತ್ತು, ಮೆಕ್ಯಾನಿಕ್ ಕಾರನ್ನು ಪರಿಶೀಲಿಸಿದ ನಂತರ, ಅದು ರೇಡಿಯೇಟರ್ ಬ್ಲಾಸ್ಟ್ ಎಂದು ಹೇಳಿದ್ದಾರೆ.

ಅಮೃತಸರ: ಪೊಲೀಸ್​ ಠಾಣೆ ಬಳಿ ನಿಗೂಢ ಸ್ಫೋಟ
ಸ್ಫೋಟImage Credit source: Hindustan Times
ನಯನಾ ರಾಜೀವ್
|

Updated on: Jan 10, 2025 | 12:41 PM

Share

ಅಮೃತಸರದ ಗುಮ್ಟಾಲಾ ಪೊಲೀಸ್ ಠಾಣೆ ಹೊರಗೆ ರೇಡಿಯೇಟರ್ ಸ್ಫೋಟಗೊಂಡಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪಶ್ಚಿಮ ಅಮೃತಸರದ ಎಸಿಪಿ ಶಿವದರ್ಶನ್ ಸಿಂಗ್ ಪ್ರಕಾರ , ಪೊಲೀಸ್ ಠಾಣೆಯ ಉಸ್ತುವಾರಿ ಎಎಸ್‌ಐ ಹರ್ಜಿಂದರ್ ಸಿಂಗ್ ಕೆಲಸದಲ್ಲಿ ತೊಡಗಿದ್ದಾಗ, ಘಟನೆ ಸಂಭವಿಸಿದೆ.

ಘಟನಾ ಸ್ಥಳವನ್ನು ತಲುಪಿದ ಸಿಂಗ್, ಎಎಸ್‌ಐ ತಜೀಂದರ್ ಸಿಂಗ್ ಅವರ ಕಾರಿನಿಂದ ಕೂಲಂಟ್ ಸೋರಿಕೆಯಾಗುತ್ತಿರುವುದನ್ನು ಪತ್ತೆಮಾಡಿದ್ದರು. ವಾಹನ ತಪಾಸಣೆಗೆ ಮೆಕ್ಯಾನಿಕ್‌ನನ್ನು ಕರೆಸಲಾಗಿತ್ತು, ಮೆಕ್ಯಾನಿಕ್ ಕಾರನ್ನು ಪರಿಶೀಲಿಸಿದ ನಂತರ, ಅದು ರೇಡಿಯೇಟರ್ ಬ್ಲಾಸ್ಟ್ ಎಂದು ಹೇಳಿದ್ದಾರೆ.

ಪೊಲೀಸರು ಈ ಬಗ್ಗೆ ಸಕ್ರಿಯವಾಗಿ ತನಿಖೆ ನಡೆಸುತ್ತಿದ್ದಾರೆ ಎಂದು ಸಿಂಗ್ ಭರವಸೆ ನೀಡಿದರು.ಪಾಕಿಸ್ತಾನದಿಂದ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡಲು ಡ್ರೋನ್ ತಂತ್ರಜ್ಞಾನದ ಸಹಾಯದಿಂದ ಕಾರ್ಯನಿರ್ವಹಿಸುತ್ತಿದ್ದ ಗಡಿಯಾಚೆಗಿನ ಡ್ರಗ್ ಕಾರ್ಟೆಲ್ ಅನ್ನು ಪಂಜಾಬ್ ಪೊಲೀಸರು ಕಿತ್ತುಹಾಕಿದ್ದಾರೆ.

ಮತ್ತಷ್ಟು ಓದಿ: ಕೊಲ್ಕತ್ತಾದಲ್ಲಿ ಹಾಡಹಗಲೇ ಭಾರೀ ಸ್ಫೋಟ; ಒಬ್ಬರ ಸ್ಥಿತಿ ಗಂಭೀರ

ಬಂಧಿತ ವ್ಯಕ್ತಿಗಳು ಭಾರತ-ಪಾಕಿಸ್ತಾನ ಗಡಿಯಲ್ಲಿ ಮಾದಕವಸ್ತುಗಳನ್ನು ತಳ್ಳಲು ಡ್ರೋನ್‌ಗಳನ್ನು ಬಳಸುತ್ತಿದ್ದ ಪಾಕಿಸ್ತಾನ ಮೂಲದ ಸ್ಮಗ್ಲರ್‌ಗಳೊಂದಿಗೆ ಸಂಪರ್ಕ ಹೊಂದಿದ್ದರು. ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ಪಂಜಾಬ್‌ನ ಪೊಲೀಸ್‌ ಸಂಸ್ಥೆಯಲ್ಲಿ ನಡೆದ ಒಂಬತ್ತನೇ ಘಟನೆ ಇದಾಗಿದೆ.

ಎಎಸ್‌ಐ ತೇಜಿಂದರ್ ಸಿಂಗ್ ಅವರಿಗೆ ಸೇರಿದ ಕಾರಿನ ರೇಡಿಯೇಟರ್‌ಗೆ ಹಾನಿಯಾಗಿದ್ದು, ಅದು ಧ್ವನಿಗೆ ಕಾರಣವಾಯಿತು ಎಂದು ಪರೀಕ್ಷೆಯ ಸಮಯದಲ್ಲಿ ಕಂಡುಬಂದಿದೆ. ಕಾರಿನ ವಿಂಡ್‌ ಶೀಲ್ಡ್‌ಗೂ ಹಾನಿಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ