ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಇಂದು ಮುಂಜಾನೆ 5.43ರ ಹೊತ್ತಿಗೆ ಭೂಕಂಪ ಉಂಟಾಗಿದೆ (Earthquake In Jammu Kashmir) ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪ ತೀವ್ರತೆ 3.2ರಷ್ಟು ದಾಖಲಾಗಿದೆ. ಪಹಲ್ಗಾಮ್ನ ದಕ್ಷಿಣ-ನೈಋತ್ಯಕ್ಕೆ 15 ಕಿಮೀ ದೂರದಲ್ಲಿ ಭೂಮಿ ಕಂಪಿಸಿದ್ದಾಗಿ ವರದಿಯಾಗಿದೆ. ಯಾವುದೇ ಆಸ್ತಿಪಾಸ್ತಿ ಹಾನಿಯಾಗಿಲ್ಲ. ಸ್ಥಳೀಯರಿಗೂ ಏನೂ ಅಪಾಯ ಆಗಲಿಲ್ಲ.
ಫೆ.5ರಂದು ಜಮ್ಮು-ಕಾಶ್ಮೀರದಲ್ಲಿ 5.7ರಷ್ಟು ತೀವ್ರತೆಯಲ್ಲಿ ಭೂಕಂಪನ ಉಂಟಾಗಿತ್ತು. ಅಂದು ಅಫ್ಘಾನಿಸ್ತಾನ-ತಜಿಕಿಸ್ತಾನ ಗಡಿಯಲ್ಲಿ ಉಂಟಾಗಿದ್ದ ಭೂಕಂಪದ ಪರಿಣಾಮ ಜಮ್ಮು-ಕಾಶ್ಮೀರ, ದೆಹಲಿ, ನೊಯ್ಡಾಗಳಲ್ಲೂ ಭೂಮಿ ನಡುಗಿತ್ತು. ಫೆ.5ರಂದು ಜಮ್ಮು-ಕಾಶ್ಮೀರದಲ್ಲಿ ಜಾಸ್ತಿ ಎನ್ನಿಸುವಷ್ಟು ಭೂಕಂಪದ ಅನುಭವ ಆಗಿದ್ದು, ಸ್ಥಳೀಯರೊಬ್ಬರು ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದರು. ಭೂಮಿ ಕಂಪನವಾಗುತ್ತಿದ್ದಂತೆ ರಸ್ತೆಯ ಮೇಲೆ ಹೋಗುತ್ತಿದ್ದ ಬೈಕ್ ಸವಾರರೆಲ್ಲ ಬಿದ್ದಿರುವುದು, ಒಬ್ಬರನ್ನೊಬ್ಬರು ಗಟ್ಟಿಯಾಗಿ ಹಿಡಿದು ನಿಂತಿರುವ ದೃಶ್ಯ ವೈರಲ್ ಆಗಿತ್ತು. ಇನ್ನೊಬ್ಬರು ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಮನೆಯೊಂದರ ಮೇಲ್ಛಾವಣಿಗೆ ಹಾಕಿದ್ದ ಸೀಲಿಂಗ್ ಫ್ಯಾನ್ ನಡುಗುವುದನ್ನು ನೋಡಬಹುದು. ಜಮ್ಮು-ಕಾಶ್ಮೀರದಲ್ಲಿ ಭೂಕಂಪನವಾದ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿಯವರು ಅಲ್ಲಿನ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾರಿಗೆ ಕರೆ ಮಾಡಿ, ಪರಿಸ್ಥಿತಿ ಬಗ್ಗೆ ವಿಚಾರಿಸಿದ್ದರು.
ಇದನ್ನೂ ಓದಿ: ಪಾಳುಬಿದ್ದ ಜಮೀನನ್ನೇ ಸುಂದರ ಉದ್ಯಾನವನ ಮಾಡಿದ ಸಿಇಒ; ಮಂಡ್ರೇಗಾ ಯೋಜನೆಯಡಿ ವಸತಿಗೃಹದ ಮುಂದೆಯೇ ಪಾರ್ಕ್
Published On - 9:50 am, Wed, 16 February 22