AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಖಿಲೇಶ್​ ಯಾದವ್​ ಪ್ರತಿಸ್ಪರ್ಧಿ ಕೇಂದ್ರ ಸಚಿವ ಸತ್ಯಪಾಲ್​ ಸಿಂಗ್​ ಬೆಂಗಾವಲು ವಾಹನದ ಮೇಲೆ ಕಲ್ಲು, ಕೋಲುಗಳಿಂದ ದಾಳಿ; ಕರ್ಹಾಲ್​​ನಲ್ಲೇ ನಡೆದ ಘಟನೆ

ಕೇಂದ್ರ ಸಚಿವರ ಬೆಂಗಾವಲು ವಾಹನದ ಮೇಲೆ ಅಟ್ಟಿಕುಲ್ಲಾಪುರ ಗ್ರಾಮದ ಬಳಿ ಕಲ್ಲು ಮತ್ತು ಕೋಲುಗಳಿಂದ ದಾಳಿ ನಡೆದಿದ್ದನ್ನು ಮೇನ್​​ಪುರಿ ಪೊಲೀಸರು ದೃಢಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಖಿಲೇಶ್​ ಯಾದವ್​ ಪ್ರತಿಸ್ಪರ್ಧಿ ಕೇಂದ್ರ ಸಚಿವ ಸತ್ಯಪಾಲ್​ ಸಿಂಗ್​ ಬೆಂಗಾವಲು ವಾಹನದ ಮೇಲೆ ಕಲ್ಲು, ಕೋಲುಗಳಿಂದ ದಾಳಿ; ಕರ್ಹಾಲ್​​ನಲ್ಲೇ ನಡೆದ ಘಟನೆ
ಸತ್ಯಪಾಲ್​ ಸಿಂಗ್​ ಬಾಘೇಲ್​ ಕಾರಿನ ಮೇಲೆ ದಾಳಿ
TV9 Web
| Edited By: |

Updated on: Feb 16, 2022 | 8:34 AM

Share

ಲಖನೌ: ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ಇಲಾಖೆ ಸಚಿವ ಸತ್ಯಪಾಲ್​ ಸಿಂಗ್​ ಬಾಘೇಲ್ (Satya Pal Singh Baghel)​ ಅವರ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ ನಡೆದಿದೆ. ಉತ್ತರ ಪ್ರದೇಶದ ಮೇನ್​ಪುರಿ ಜಿಲ್ಲೆಯ ಕರ್ಹಾಲ್​(Karhal) ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಸತ್ಯಪಾಲ್​ ಸಿಂಗ್​ ನಿನ್ನೆ ತಮ್ಮ ಕ್ಷೇತ್ರಕ್ಕೆ ಹೋದಾಗ ಅವರ ಬೆಂಗಾವಲು ವಾಹನಗಳ ಮೇಲೆ ಸಮಾಜವಾದಿ ಪಕ್ಷದ ಗೂಂಡಾಗಳು ಕಲ್ಲು ತೂರಾಟ, ದಾಳಿ ನಡೆಸಿದ್ದಾರೆ ಎಂದು ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ್​ ಪ್ರಸಾದ್ ಮೌರ್ಯ ಆರೋಪಿಸಿದ್ದಾರೆ. ಸತ್ಯಪಾಲ್​ ಸಿಂಗ್​ ಅವರಿಗೆ ಯಾವುದೇ ಗಾಯವಾಗಿಲ್ಲ. ಅಂದ ಹಾಗೇ, ಈ ಕರ್ಹಾಲ್​​ ವಿಧಾನಸಭಾ ಕ್ಷೇತ್ರದಿಂದ ಅಖಿಲೇಶ್ ಯಾದವ್​ ಸ್ಪರ್ಧಿಸುತ್ತಿದ್ದಾರೆ. ಅವರು ಇದೇ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಅಖಿಲೇಶ್​ ಯಾದವ್​ಗೆ ಸತ್ಯಪಾಲ ಸಿಂಗ್​ ಬಾಘೇಲ್​ ಪ್ರತಿಸ್ಪರ್ಧಿ.

ಕೇಂದ್ರ ಸಚಿವರ ಬೆಂಗಾವಲು ವಾಹನದ ಮೇಲೆ ಅಟ್ಟಿಕುಲ್ಲಾಪುರ ಗ್ರಾಮದ ಬಳಿ ಕಲ್ಲು ಮತ್ತು ಕೋಲುಗಳಿಂದ ದಾಳಿ ನಡೆದಿದ್ದನ್ನು ಮೇನ್​​ಪುರಿ ಪೊಲೀಸರು ದೃಢಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯನ್ನು ವಿವರಿಸಿದ ಬಾಘೇಲ್​, ನನ್ನ ಕಾರು ಅಟ್ಟಿಕುಲ್ಲಾಪುರ ಮಾರ್ಗವಾಗಿ ಕರ್ಹಾಲ್​ಗೆ ತೆರಳುತ್ತಿತ್ತು. ಅಟ್ಟಿಕುಲ್ಲಾಪುರದ ಬಳಿಕ ಹಲವು ಜನರು ಬಡಿಗೆ ಮತ್ತು ಕಬ್ಬಿಣದ ರಾಡ್​​ಗಳನ್ನು ಹಿಡಿದು ಏಕಾಏಕಿ ಬಂದು ಬೆಂಗಾವಲು ವಾಹನಗಳ ಮೇಲೆ ದಾಳಿ ನಡೆಸಿದರು. ಅವರು ಅಖಿಲೇಶ್​ಬಯ್ಯಾ ಜಿಂದಾಬಾದ್​ ಎಂದು ಘೋಷಣೆ ಕೂಗುತ್ತಿದ್ದರು ಎಂದು ಹೇಳಿದ್ದಾರೆ. ಅದರಲ್ಲಿ ಒಬ್ಬಾತ ತನ್ನನ್ನು ತಾನು ಉಮಾ ಕಾಂತ್​ ಯಾದವ್​ ಎಂದು ಹೇಳಿಕೊಂಡಿದ್ದಾನೆ. ಅಷ್ಟೇ ಅಲ್ಲ, ಸಚಿವರನ್ನು ಇಂದು ಬಿಡುವುದಿಲ್ಲ ಎಂದು ಕೂಗಿದ್ದಾಗಿ ಕೂಡ ಸತ್ಯಪಾಲ ಸಿಂಗ್​ ತಿಳಿಸಿದ್ದಾರೆ.

ವೀರಾವೇಶದಿಂದ ಕೂಗುತ್ತ ಬಂದರು. ಅಷ್ಟರಲ್ಲಿ ನನ್ನ ಬೆಂಗಾವಲು ವಾಹನದಲ್ಲಿದ್ದ ಭದ್ರತಾ ಸಿಬ್ಬಂದಿ ಕೆಳಗೆ ಇಳಿಯುತ್ತಿದ್ದಂತೆ ಅವರೆಲ್ಲರೂ ಓಡಿ ಹೋದರು. ಬೆಂಗಾವಲಿಗೆ ಇದ್ದ ಒಂದು ಕಾರಿನ ಮೇಲೆ ಗುಂಡಿನ ದಾಳಿ ಕೂಡ ನಡೆಸಲಾಗಿದೆ ಎಂದೂ ಸಚಿವರು ಆರೋಪಿಸಿದ್ದಾರೆ. ಇನ್ನೊಂದೆಡೆ ಕೇಶವ್​ ಪ್ರಸಾದ್ ಮೌರ್ಯ ಕೂಡ ದಾಳಿ ಕೋರರ ವಿರುದ್ಧ ಕಿಡಿ ಕಾರಿದ್ದಾರೆ. ಖಂಡಿತ ಈ ಬಾರಿ ಅಖಿಲೇಶ್ ಯಾದವ್ ಸೋಲುತ್ತಾರೆ. ಬಿಜೆಪಿ ಸಂಸದೆ ಗೀತಾ ಶಕ್ಯಾ ಅವರ ಮೇಲೆ ಕೂಡ ಫೆ.14ರಂದು ದಾಳಿ ನಡೆದಿತ್ತು. ಆರೋಪಿಗಳನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹಿಜಾಬ್-ಕೇಸರಿ ಶಾಲು ವಿವಾದ; ರಾಜ್ಯಾದ್ಯಂತ ಇಂದಿನಿಂದ ಕಾಲೇಜ್ ಓಪನ್, ಕಾಲೇಜ್​ಗಳಲ್ಲಿ ಖಾಕಿ ಕಣ್ಗಾವಲು

Follow Us
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು