AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಮ್ಮು-ಕಾಶ್ಮೀರದಲ್ಲಿ ಇಂದು ಮುಂಜಾನೆ ಭೂಕಂಪ; ರಿಕ್ಟರ್ ಮಾಪಕದಲ್ಲಿ 3.2ರಷ್ಟು ತೀವ್ರತೆ ದಾಖಲು

ಫೆ.5ರಂದು ಜಮ್ಮು-ಕಾಶ್ಮೀರದಲ್ಲಿ 5.7ರಷ್ಟು ತೀವ್ರತೆಯಲ್ಲಿ ಭೂಕಂಪನ ಉಂಟಾಗಿತ್ತು. ಅಂದು ಅಫ್ಘಾನಿಸ್ತಾನ-ತಜಿಕಿಸ್ತಾನ ಗಡಿಯಲ್ಲಿ ಉಂಟಾಗಿದ್ದ ಭೂಕಂಪದ ಪರಿಣಾಮ ಜಮ್ಮು-ಕಾಶ್ಮೀರ, ದೆಹಲಿ, ನೊಯ್ಡಾಗಳಲ್ಲೂ ಭೂಮಿ ನಡುಗಿತ್ತು.

ಜಮ್ಮು-ಕಾಶ್ಮೀರದಲ್ಲಿ ಇಂದು ಮುಂಜಾನೆ ಭೂಕಂಪ; ರಿಕ್ಟರ್ ಮಾಪಕದಲ್ಲಿ 3.2ರಷ್ಟು ತೀವ್ರತೆ ದಾಖಲು
ಸಾಂಕೇತಿಕ ಚಿತ್ರ
TV9 Web
| Edited By: |

Updated on:Feb 16, 2022 | 10:06 AM

Share

ಜಮ್ಮು ಕಾಶ್ಮೀರದ ಪಹಲ್​ಗಾಮ್​​ನಲ್ಲಿ ಇಂದು ಮುಂಜಾನೆ 5.43ರ ಹೊತ್ತಿಗೆ ಭೂಕಂಪ ಉಂಟಾಗಿದೆ (Earthquake In Jammu Kashmir) ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ. ರಿಕ್ಟರ್​ ಮಾಪಕದಲ್ಲಿ ಭೂಕಂಪ ತೀವ್ರತೆ 3.2ರಷ್ಟು ದಾಖಲಾಗಿದೆ. ಪಹಲ್​​ಗಾಮ್​​ನ ದಕ್ಷಿಣ-ನೈಋತ್ಯಕ್ಕೆ 15 ಕಿಮೀ ದೂರದಲ್ಲಿ ಭೂಮಿ ಕಂಪಿಸಿದ್ದಾಗಿ ವರದಿಯಾಗಿದೆ.  ಯಾವುದೇ ಆಸ್ತಿಪಾಸ್ತಿ ಹಾನಿಯಾಗಿಲ್ಲ. ಸ್ಥಳೀಯರಿಗೂ ಏನೂ ಅಪಾಯ ಆಗಲಿಲ್ಲ.

ಫೆ.5ರಂದು ಜಮ್ಮು-ಕಾಶ್ಮೀರದಲ್ಲಿ 5.7ರಷ್ಟು ತೀವ್ರತೆಯಲ್ಲಿ ಭೂಕಂಪನ ಉಂಟಾಗಿತ್ತು. ಅಂದು ಅಫ್ಘಾನಿಸ್ತಾನ-ತಜಿಕಿಸ್ತಾನ ಗಡಿಯಲ್ಲಿ ಉಂಟಾಗಿದ್ದ ಭೂಕಂಪದ ಪರಿಣಾಮ ಜಮ್ಮು-ಕಾಶ್ಮೀರ, ದೆಹಲಿ, ನೊಯ್ಡಾಗಳಲ್ಲೂ ಭೂಮಿ ನಡುಗಿತ್ತು. ಫೆ.5ರಂದು ಜಮ್ಮು-ಕಾಶ್ಮೀರದಲ್ಲಿ ಜಾಸ್ತಿ ಎನ್ನಿಸುವಷ್ಟು ಭೂಕಂಪದ ಅನುಭವ ಆಗಿದ್ದು, ಸ್ಥಳೀಯರೊಬ್ಬರು ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದರು. ಭೂಮಿ  ಕಂಪನವಾಗುತ್ತಿದ್ದಂತೆ ರಸ್ತೆಯ ಮೇಲೆ ಹೋಗುತ್ತಿದ್ದ ಬೈಕ್​ ಸವಾರರೆಲ್ಲ ಬಿದ್ದಿರುವುದು, ಒಬ್ಬರನ್ನೊಬ್ಬರು ಗಟ್ಟಿಯಾಗಿ ಹಿಡಿದು ನಿಂತಿರುವ ದೃಶ್ಯ ವೈರಲ್​ ಆಗಿತ್ತು.  ಇನ್ನೊಬ್ಬರು ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಮನೆಯೊಂದರ ಮೇಲ್ಛಾವಣಿಗೆ ಹಾಕಿದ್ದ ಸೀಲಿಂಗ್​ ಫ್ಯಾನ್​ ನಡುಗುವುದನ್ನು ನೋಡಬಹುದು. ಜಮ್ಮು-ಕಾಶ್ಮೀರದಲ್ಲಿ ಭೂಕಂಪನವಾದ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿಯವರು ಅಲ್ಲಿನ ಲೆಫ್ಟಿನೆಂಟ್​ ಗವರ್ನರ್​ ಮನೋಜ್ ಸಿನ್ಹಾರಿಗೆ ಕರೆ ಮಾಡಿ, ಪರಿಸ್ಥಿತಿ ಬಗ್ಗೆ ವಿಚಾರಿಸಿದ್ದರು.

ಇದನ್ನೂ ಓದಿ: ಪಾಳುಬಿದ್ದ ಜಮೀನನ್ನೇ ಸುಂದರ ಉದ್ಯಾನವನ ಮಾಡಿದ ಸಿಇಒ; ಮಂಡ್ರೇಗಾ ಯೋಜನೆಯಡಿ ವಸತಿಗೃಹದ ಮುಂದೆಯೇ ಪಾರ್ಕ್​

Published On - 9:50 am, Wed, 16 February 22

Follow Us
ಜೈಲಿನಲ್ಲಿ ಮೊಬೈಲ್ ಬಳಕೆ ಒಪ್ಪಿಕೊಂಡ ಪ್ರಜ್ವಲ್ ರೇವಣ್ಣ!
ಜೈಲಿನಲ್ಲಿ ಮೊಬೈಲ್ ಬಳಕೆ ಒಪ್ಪಿಕೊಂಡ ಪ್ರಜ್ವಲ್ ರೇವಣ್ಣ!
ಸರ್ಕಾರದ 100 ದಿನದ ಕಾರ್ಯಕ್ರಮಕ್ಕೆ ಬಂದ ಸಿದ್ದರಾಮಯ್ಯಗೆ ವಿಶೇಷ ಸ್ವಾಗತ
ಸರ್ಕಾರದ 100 ದಿನದ ಕಾರ್ಯಕ್ರಮಕ್ಕೆ ಬಂದ ಸಿದ್ದರಾಮಯ್ಯಗೆ ವಿಶೇಷ ಸ್ವಾಗತ
KSRTC ಬಸ್‌ನ ಸ್ಟೇರಿಂಗ್ ಕಟ್ ಆಗಿ ಪಲ್ಟಿ
KSRTC ಬಸ್‌ನ ಸ್ಟೇರಿಂಗ್ ಕಟ್ ಆಗಿ ಪಲ್ಟಿ
ಮುಂಗಾರಿನಲ್ಲೇ ಹೀಟ್ ವೇವ್! ಬೆಂಗಳೂರಿನಲ್ಲಿ ದಿನೇದಿನೆ ಹೆಚ್ಚಾಗುತ್ತಿದೆ ತಾಪ
ಮುಂಗಾರಿನಲ್ಲೇ ಹೀಟ್ ವೇವ್! ಬೆಂಗಳೂರಿನಲ್ಲಿ ದಿನೇದಿನೆ ಹೆಚ್ಚಾಗುತ್ತಿದೆ ತಾಪ
ಕಲಬುರಗಿ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ದಾಳಿ: ಕೈದಿಯಿಂದ ಮೊಬೈಲ್​​ ವಶ
ಕಲಬುರಗಿ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ದಾಳಿ: ಕೈದಿಯಿಂದ ಮೊಬೈಲ್​​ ವಶ
ಮಂಡ್ಯದ ವಸತಿಶಾಲೆಯಲ್ಲಿ ಮಕ್ಕಳಿಗೆ ಫುಡ್ ಪಾಯಿಸನ್
ಮಂಡ್ಯದ ವಸತಿಶಾಲೆಯಲ್ಲಿ ಮಕ್ಕಳಿಗೆ ಫುಡ್ ಪಾಯಿಸನ್
‘ಜೈಲಿನಲ್ಲಿ ಖುದ್ದು ಹಾಜರಿ ಬೇಕು’; ಹೈಕೋರ್ಟ್​​ನಲ್ಲಿ ದರ್ಶನ್ ಅರ್ಜಿ
‘ಜೈಲಿನಲ್ಲಿ ಖುದ್ದು ಹಾಜರಿ ಬೇಕು’; ಹೈಕೋರ್ಟ್​​ನಲ್ಲಿ ದರ್ಶನ್ ಅರ್ಜಿ
ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಅಣಕಿಸಿದ ವಿಡಿಯೋ ವೈರಲ್
ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಅಣಕಿಸಿದ ವಿಡಿಯೋ ವೈರಲ್
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್​ಎಸ್ ಡ್ಯಾಂಗೆ ಕಲರ್​ಫುಲ್​ ​ಲೈಟಿಂಗ್
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್​ಎಸ್ ಡ್ಯಾಂಗೆ ಕಲರ್​ಫುಲ್​ ​ಲೈಟಿಂಗ್
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ