Earthquake In Delhi: ದೆಹಲಿಯ ಪಶ್ಚಿಮ ಭಾಗದಲ್ಲಿ ಲಘು ಭೂಕಂಪನ

| Updated By: ರಮೇಶ್ ಬಿ. ಜವಳಗೇರಾ

Updated on: Nov 29, 2022 | 10:57 PM

Earthquake In New delhi ರಾಷ್ಟ್ರ ರಾಜಧಾನಿ ದೆಹಲಿ ಮಂದಿಗೆ ಮತ್ತೆ ಭೂಕಂಪನದ ಶಾಕ್ ಎದುರಾಗಿದೆ.

Earthquake In Delhi: ದೆಹಲಿಯ ಪಶ್ಚಿಮ ಭಾಗದಲ್ಲಿ ಲಘು ಭೂಕಂಪನ
Earthquake In Delhi
Follow us on

ನವದೆಹಲಿ: ರಾಷ್ಟ್ರ ರಾಜಧಾನಿ  ನವದೆಹಲಿಯ( New Delhi) ಪಶ್ಚಿಮ ಭಾಗದಲ್ಲಿ ಲಘು ಭೂಕಂಪ(Earthquake) ಸಂಭವಿಸಿದ್ದು, ಇಂದು(ನವೆಂಬರ್ 29) ರಾತ್ರಿ 9.30ರ ಸುಮಾರಿಗೆ ನವದೆಹಲಿಯ ಪಶ್ಚಿಮದಲ್ಲಿ ಕಂಪಿಸಿದ್ದು,  2.5ರಷ್ಟು ತೀವ್ರತೆಯ ಭೂಕಂಪನವಾಗಿದೆ.

ಈ ಹಿಂದೆ ನವೆಂಬರ್ 12ರಂದು ರಾಷ್ಟ್ರ ರಾಜಧಾನಿ ಹಾಗೂ ಅಕ್ಕಪಕ್ಕದ ನಗರಗಳಲ್ಲಿ ಭೂಮಿ ಕಂಪಿಸಿದ (Earthquake) ಅನುಭವವಾಗಿದ್ದು, ಜನರನ್ನು ಬೆಚ್ಚಿ ಬೀಳುವಂತೆ ಮಾಡಿತ್ತು, ಸುಮಾರು 5 ಸೆಕೆಂಡ್‌ಗೂ ಹೆಚ್ಚು ಕಾಲ ಭೂಮಿ ಕಂಪಿಸಿತ್ತು. ಭೂಮಿ ಕಂಪಿಸುತ್ತಿದ್ದಂತೆ ಮನೆ, ಕಚೇರಿ, ಕಟ್ಟದಲ್ಲಿದ್ದವರು ಹೊರಗೆ ಒಡಿ ಬಂದಿದ್ದರು,

ದೆಹಲಿ, ಗುರುಗ್ರಾಂ, ನೋಯ್ಡಾದಲ್ಲೂ ಭೂಮಿ ಕಂಪನವಾಗಿತ್ತು. ನೇಪಾಳದಲ್ಲಿ ನೇಪಾಳದಲ್ಲಿ 5.4 ತೀವ್ರತೆಯ ಭೂಕಂಪನವಾಗಿತ್ತು. ಇದರ ಪರಿಣಾಮ ದೆಹಲಿಯಲ್ಲಿ ಭೂಮಿ ಕಂಪಿಸಿ ಆತಂಕಕ್ಕೆ ಕಾರಣವಾಗಿತ್ತು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 10:42 pm, Tue, 29 November 22