AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಜರಾತ್: ಎಎಪಿ ಸಿಎಂ ಅಭ್ಯರ್ಥಿ ಇಸುದಾನ್ ಗಢ್ವಿ ರೋಡ್ ಶೋ ವೇಳೆ ಖಾಲಿ ರಸ್ತೆ, ವೈರಲ್ ವಿಡಿಯೊ 6 ತಿಂಗಳು ಹಿಂದಿನದ್ದು

Fact Check ಶ್ರೀನಿವಾಸ್ ಬಿವಿ ಅವರ ಟ್ವೀಟ್‌ಗೆ ಪ್ರತಿಕ್ರಿಯೆಗಳಲ್ಲಿ, ವಿಡಿಯೊ ಹಳೆಯದು ಎಂದು ಹಲವರು ಪ್ರತಿಕ್ರಿಯಿಸಿದ್ದು ವೈರಲ್ ವಿಡಿಯೊದ ಫ್ರೇಮ್‌ಗಳನ್ನು ಎಎಪಿ ಗುಜರಾತ್‌ನ ಯೂಟ್ಯೂಬ್ ಪೇಜ್​​ಗೆ ಅಪ್‌ಲೋಡ್ ಮಾಡಿದ ಆರು ತಿಂಗಳ ಹಳೆಯ ವಿಡಿಯೊದೊಂದಿಗೆ ಹೋಲಿಸಿದ್ದಾರೆ.

ಗುಜರಾತ್: ಎಎಪಿ ಸಿಎಂ ಅಭ್ಯರ್ಥಿ ಇಸುದಾನ್ ಗಢ್ವಿ ರೋಡ್ ಶೋ ವೇಳೆ ಖಾಲಿ ರಸ್ತೆ, ವೈರಲ್ ವಿಡಿಯೊ 6 ತಿಂಗಳು ಹಿಂದಿನದ್ದು
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗ ವಿಡಿಯೊ
TV9 Web
| Edited By: |

Updated on: Nov 29, 2022 | 9:27 PM

Share

ಗುಜರಾತ್‌ ಚುನಾವಣೆಗೆ (Gujarat Assembly Election)ಕೆಲವೇ ದಿನಗಳು ಬಾಕಿ ಇರುವಾಗ ರಾಜಕೀಯ ಪಕ್ಷಗಳು ಜಿದ್ದಾಜಿದ್ದಿನ ಪೈಪೋಟಿಗೆ ಸಿದ್ಧತೆ ನಡೆಸಿದ್ದು ಅಬ್ಬರದ ಪ್ರಚಾರದಲ್ಲಿ ನಿರತವಾಗಿವೆ, ಅಧಿಕಾರದಲ್ಲಿರುವ ಬಿಜೆಪಿ, ಕಾಂಗ್ರೆಸ್ ಮತ್ತು  ಆಮ್ ಆದ್ಮಿ ಪಕ್ಷವು ರಾಜ್ಯಾದ್ಯಂತ ಪ್ರಚಾರ ಮಾಡುತ್ತಿದೆ. ಈ ನಡುವೆ ಎಎಪಿಯ(Aam Aadmi Party) ಮುಖ್ಯಮಂತ್ರಿ ಅಭ್ಯರ್ಥಿ ಇಸುದಾನ್ ಗಢ್ವಿ (Isudan Gadhvi)ಅವರ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಗಢ್ವಿ ಅವರು ಚಲಿಸುತ್ತಿರುವ ವಾಹನದ ಮೇಲಿಂದ ಕೈ ಬೀಸುತ್ತಾ ರೋಡ್ ಶೋ ನಡೆಸುತ್ತಿರುವ ವಿಡಿಯೊ ಅದು. ಆದರೆ, ರಸ್ತೆ ಎರಡೂ ಕಡೆ ಖಾಲಿಯಾಗಿ ಕಾಣುತ್ತಿದ್ದು, ಜನಸಂದಣಿ ಕಾಣುತ್ತಿಲ್ಲ. ಕಾಂಗ್ರೆಸ್ ನಾಯಕರು ಸೇರಿದಂತೆ ವಿಡಿಯೊವನ್ನು ಶೇರ್ ಮಾಡಿ ಎಎಪಿ ನಾಯಕನನ್ನು ಲೇವಡಿ ಮಾಡಿದ್ದಾರೆ. ಎಎಪಿಯ ಗುಜರಾತ್ ಸಿಎಂ ಅಭ್ಯರ್ಥಿಯ ರೋಡ್‌ಶೋನ ದೃಶ್ಯಗಳನ್ನು ನೋಡಿದರೆ ಇಡೀ ಗುಜರಾತ್  ನೆರೆದಂತೆ ಕಾಣುತ್ತಿದೆ ಎಂದು ಕಾಂಗ್ರೆಸ್ ಮುಖಂಡರಾದ ಶ್ರೀನಿವಾಸ್ ಬಿವಿ ಮತ್ತು ಕೇಶವ್ ಚಂದ್ ಯಾದವ್ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ. ಅದೇ ಶೀರ್ಷಿಕೆಯ ಜೊತೆಗೆ ಹಿಮಾಚಲ ಪ್ರದೇಶ ಯುವ ಕಾಂಗ್ರೆಸ್, ಮಧ್ಯಪ್ರದೇಶ ಯುವ ಕಾಂಗ್ರೆಸ್ ಮತ್ತು ಯುಪಿ-ಪಶ್ಚಿಮ ಯುವ ಕಾಂಗ್ರೆಸ್‌ನ ಅಧಿಕೃತ ಫೇಸ್‌ಬುಕ್ ಪುಟಗಳಿಂದ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಅಂದಹಾಗೆ ಈ ವಿಡಿಯೊ ಆರು ತಿಂಗಳಿಗಿಂತ ಹಳೆಯದ್ದು. ಗಢ್ವಿ ಅವರನ್ನು ಗುಜರಾತ್‌ನಲ್ಲಿ ಎಎಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸುವ ಮೊದಲಿನ ವಿಡಿಯೊ ಎಂದು ಇಂಡಿಯಾ ಟುಡೇ ಫ್ಯಾಕ್ಟ್ ಚೆಕ್ ವರದಿ ಮಾಡಿದೆ.

ಫ್ಯಾಕ್ಟ್ ಚೆಕ್ ಶ್ರೀನಿವಾಸ್ ಬಿವಿ ಅವರ ಟ್ವೀಟ್‌ಗೆ ಪ್ರತಿಕ್ರಿಯೆಗಳಲ್ಲಿ, ವಿಡಿಯೊ ಹಳೆಯದು ಎಂದು ಹಲವರು ಪ್ರತಿಕ್ರಿಯಿಸಿದ್ದು ವೈರಲ್ ವಿಡಿಯೊದ ಫ್ರೇಮ್‌ಗಳನ್ನು ಎಎಪಿ ಗುಜರಾತ್‌ನ ಯೂಟ್ಯೂಬ್ ಪೇಜ್​​ಗೆ ಅಪ್‌ಲೋಡ್ ಮಾಡಿದ ಆರು ತಿಂಗಳ ಹಳೆಯ ವಿಡಿಯೊದೊಂದಿಗೆ ಹೋಲಿಸಿದ್ದಾರೆ.  ಈ ಸುಳಿವಿನ ಸಹಾಯದಿಂದ ಯೂಟ್ಯೂಬ್‌ನಲ್ಲಿ ಸಂಬಂಧಿತ ಕೀವರ್ಡ್‌ಗಳೊಂದಿಗೆ ಹುಡುಕಿದಾಗ ಈ ವರ್ಷದ ಮೇನಲ್ಲಿ ಎಎಪಿ ಗುಜರಾತ್‌ನ ಚಾನಲ್‌ಗೆ ಅಪ್‌ಲೋಡ್ ಮಾಡಿದ ಇದೇ ರೀತಿಯ ರೋಡ್‌ಶೋ ವಿಡಿಯೊ ಇದೆ. ಈ ವಿಡಿಯೊದಲ್ಲಿ ಗಢ್ವಿ ಅವರು ಇದೇ ರೀತಿಯ ಉಡುಪಿನಲ್ಲಿ ರ್ಯಾಲಿಯನ್ನು ಮುನ್ನಡೆಸುತ್ತಿರುವುದನ್ನು ಕಾಣಬಹುದು. ಕೆಲವು ಕೀವರ್ಡ್‌ಗಳನ್ನು ನೀಡಿ ಹುಡುಕಿದಾಗ ಆರು ತಿಂಗಳ ಹಿಂದೆ ಎಎಪಿ ಗುಜರಾತ್‌ನ ಅಧಿಕೃತ ಫೇಸ್‌ಬುಕ್ ಪುಟಕ್ಕೆ ಅಪ್‌ಲೋಡ್ ಮಾಡಲಾದ ಮೂಲ ವಿಡಿಯೊ ಸಿಕ್ಕಿದೆ.ಫೋರ್​​ಬಂದರ್‌ನಲ್ಲಿ ನಡೆದ ಪರಿವರ್ತನ್ ಯಾತ್ರೆ ಸಮಯದಲ್ಲಿ ಇದನ್ನು ಸೆರೆಹಿಡಿಯಲಾಗಿದೆ ಎಂದು ಗುಜರಾತಿ ಭಾಷೆಯಲ್ಲಿ ಶೀರ್ಷಿಕೆ ಬರೆದಿದೆ. ವೈರಲ್ ವಿಡಿಯೊದ ಫ್ರೇಮ್ ಮತ್ತು ಮೂಲ ವಿಡಿಯೊದಿಂದ ಫ್ರೇಮ್‌ಗಳನ್ನು ಹೋಲಿಸಿದ ನಂತರ, ಎರಡೂ ವಿಡಿಯೊಗಳು ಒಂದೇ ಅಂತ ಗೊತ್ತಾಗಿದೆ.

ಮುಖ್ಯಮಂತ್ರಿ ಅಭ್ಯರ್ಥಿಯ ಅಧಿಕೃತ ಹೆಸರನ್ನು ಘೋಷಿಸುವ ಸುಮಾರು ಆರು ತಿಂಗಳ ಮೊದಲು ಈ ವರ್ಷದ ಮೇ 17 ರಂದು ಈ ಲೈವ್ ವಿಡಿಯೊವನ್ನು AAP ಗುಜರಾತ್‌ನ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದೆ. ವರದಿಯ ಪ್ರಕಾರ, ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನವೆಂಬರ್ 4 ರಂದು ಗಢ್ವಿಯ ಹೆಸರನ್ನು ಘೋಷಿಸಿದರು. ಆದ್ದರಿಂದ, ಈ ರೋಡ್ ಶೋ ವೇಳೆ ಗಢ್ವಿ ಗುಜರಾತ್‌ಗೆ ಎಎಪಿಯ ಸಿಎಂ ಅಭ್ಯರ್ಥಿಯಾಗಿರಲಿಲ್ಲ ಎಂಬುದು ಸ್ಪಷ್ಟವಾಗಿದೆ.

ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಚಂದನ್ ಹತ್ಯೆ: ಮೊಬೈಲ್‌ನಲ್ಲಿ ಮಗನ ಅಂತಿಮ ದರ್ಶನ ನೋಡಿ ಕಣ್ಣೀರಿಟ್ಟ ತಂದೆ
ಚಂದನ್ ಹತ್ಯೆ: ಮೊಬೈಲ್‌ನಲ್ಲಿ ಮಗನ ಅಂತಿಮ ದರ್ಶನ ನೋಡಿ ಕಣ್ಣೀರಿಟ್ಟ ತಂದೆ
ಪಿಡಬ್ಲ್ಯೂಡಿ ಮುಖ್ಯ ಇಂಜಿನಿಯರ್​​ಗೆ ಶಾಕ್​​ ಕೊಟ್ಟ ಲೋಕಾಯುಕ್ತ
ಪಿಡಬ್ಲ್ಯೂಡಿ ಮುಖ್ಯ ಇಂಜಿನಿಯರ್​​ಗೆ ಶಾಕ್​​ ಕೊಟ್ಟ ಲೋಕಾಯುಕ್ತ
RCB ಅಭಿಮಾನಿಗಳಿಗೆ ಸರ್ಕಾರದಿಂದ ಇಂದೇ ಸಿಗುತ್ತಾ ಸಿಹಿ ಸುದ್ದಿ?
RCB ಅಭಿಮಾನಿಗಳಿಗೆ ಸರ್ಕಾರದಿಂದ ಇಂದೇ ಸಿಗುತ್ತಾ ಸಿಹಿ ಸುದ್ದಿ?