
ಇಂದು ಜಮ್ಮು-ಕಾಶ್ಮೀರದ ಲಡಾಖ್ನಲ್ಲಿರುವ ಅಲ್ಚಿ ಪ್ರದೇಶದ ಉತ್ತರದಲ್ಲಿ ಇಂದು ಮುಂಜಾನೆ ಭೂಕಂಪ (Earthquake)ವಾಗಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 4.3ರಷ್ಟು ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ. ಇಂದು ಮುಂಜಾನೆ 7.29ರ ಹೊತ್ತಿಗೆ ಲಡಾಖ್ನ ಲೇಹ್ ಜಿಲ್ಲೆಯ ಆಲ್ಚಿ ಗ್ರಾಮದ ಉತ್ತರಕ್ಕೆ 186 ಕಿಮೀ ದೂರದಲ್ಲಿ ಭೂ ಮೇಲ್ಮೈನಿಂದ 186 ಕಿಮೀ ಆಳದಲ್ಲಿ ಭೂಮಿ ನಡುಗಿದ್ದಾಗಿ ಟ್ವೀಟ್ ಮಾಡಿದೆ.
ಭೂಕಂಪದ ಕೇಂದ್ರ ಚೀನಾದಿಂದ ಉತ್ತರಕ್ಕೆ 18 ಕಿಮಿ ದೂರದಲ್ಲಿ ಇದೆ ಎಂದೂ ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ ತಿಳಿಸಿದೆ. ಭೂಮಿ ನಡುಗುತ್ತಿದ್ದಂತೆ ಸ್ಥಳದಲ್ಲಿದ್ದವರೆಲ್ಲ ಕಂಗಾಲಾಗಿದ್ದರು. ತಮ್ಮ ಮನೆಗಳಿಂದ ಹೊರಬಂದಿದ್ದರು. ಅದೃಷ್ಟವಶಾತ್ ಏನೂ ಹಾನಿಯಾಗಲಿಲ್ಲ. ಯಾರ ಜೀವಕ್ಕೂ ಅಪಾಯವಾಗಿಲ್ಲ ಎಂದು ವರದಿಯಾಗಿದೆ.
ನಿನ್ನೆ ತಡರಾತ್ರಿ 2.52ರ ಹೊತ್ತಿಗೆ ಅಂಡಮಾನ್-ನಿಕೋಬಾರ್ನ ದಿಗ್ಲಿಪುರ್ ಎಂಬಲ್ಲಿ ಭೂಕಂಪನವಾಗಿದೆ. ಇಲ್ಲಿನ ಭೂಕಂಪ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.4ರಷ್ಟು ದಾಖಲಾಗಿದ್ದು, ದಿಗ್ಲಿಪುರದಿಂದ ಉತ್ತರಕ್ಕೆ ಸುಮಾರು 147 ಕಿಮೀ ದೂರದಲ್ಲಿ ಭೂಕಂಪನ ಕೇಂದ್ರ ಬಿಂದು ಎಂದು ಹೇಳಲಾಗಿದೆ.
ಇದನ್ನೂ ಓದಿ: Ranjani Raghavan: ಸಾಂಪ್ರದಾಯಿಕ ದಿರಿಸಿನಲ್ಲಿ ಮಿಂಚುವ ‘ಕನ್ನಡತಿ’; ರಂಜನಿ ರಾಘವನ್ಗೆ ಹುಟ್ಟುಹಬ್ಬದ ಸಂಭ್ರಮ
Published On - 11:45 am, Tue, 29 March 22