
ನವದೆಹಲಿ, ಸೆಪ್ಟೆಂಬರ್ 28: ಭಾರತದಲ್ಲಿ ಸಾಕಷ್ಟು ಆಸ್ಪತ್ರೆಗಳಿಲ್ಲ, ಖಾಸಗಿ ಆಸ್ಪತ್ರೆಗಳು ದುಬಾರಿ ಹಣ ವಸೂಲಿ ಮಾಡುತ್ತವೆ ಎನ್ನುವಂತಹ ದೂರುಗಳನ್ನು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ, ಭಾರತದಲ್ಲಿ ವಾಸಿಸುತ್ತಿರುವ ವಿದೇಶೀ ಮೂಲದ ಮಹಿಳೆಯೊಬ್ಬರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ (Instagram post) ಭಾರತದಲ್ಲಿನ ತಮ್ಮ ಅನುಭವ ಹಂಚಿಕೊಂಡಿದ್ದು, ಇಲ್ಲಿಯ ಚಿಕಿತ್ಸಾ ವ್ಯವಸ್ಥೆಯನ್ನು ಮೆಚ್ಚಿಕೊಂಡಿದ್ದಾರೆ. ಭಾರತದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಅದೆಷ್ಟು ಸುಲಭ ಮತ್ತು ಅಗ್ಗ ಎಂದು ವಿವರಿಸಿದ್ದಾರೆ.
‘ನನ್ನ ಹೆಬ್ಬೆರಳಿಗೆ ಗಾಯವಾಗಿ ಸಾಕಷ್ಟು ರಕ್ತ ಸೋರಿಕೆಯಾಯಿತು. ಬೈಸಿಕಲ್ ಹತ್ತಿ ಸ್ಥಳೀಯ ಆಸ್ಪತ್ರೆಗೆ ಹೋದೆ. ಅಲ್ಲಿ ಇದ್ದದ್ದು 45 ನಿಮಿಷ ಮಾತ್ರ. ಬೆರಳಿಗೆ ಚಿಕಿತ್ಸೆ ಆಯಿತು. ಸ್ಟಿಚ್ ಹಾಕಬೇಕಾಗಲಿಲ್ಲ. 50 ರೂ ಕೊಟ್ಟು ಮನೆಗೆ ವಾಪಸ್ ಬಂದೆ’ ಎಂದು ಕ್ರಿಸ್ಟನ್ ಫಿಶರ್ ಎಂಬಾಕೆ ತಮ್ಮ ಇನ್ಸ್ಟಾ ಪೋಸ್ಟ್ನಲ್ಲಿ ಹೇಳಿದ್ದು, ತನಗೆ ಎರಡು ಕಾರಣಕ್ಕೆ ಈ ಘಟನೆ ಗಮನ ಸೆಳೆಯಿತು ಎಂದಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನ, ಚೀನಾ ಗಡಿಭಾಗದಲ್ಲಿ ದೇಶದ ರಕ್ಷಣೆಗೆ ಅನಂತ್ ಶಸ್ತ್ರ ಕ್ಷಿಪಣಿ: ಬಿಇಎಲ್ಗೆ ಗುತ್ತಿಗೆ
‘ನನ್ನ ಮನೆಯಿಂದ ಕೇವಲ 5 ನಿಮಿಷ ದೂರದಲ್ಲೇ ಆಸ್ಪತ್ರೆ ಇತ್ತು. ವೈದ್ಯರು, ಕ್ಲಿನಿಕ್ಗಳು, ಆಸ್ಪತ್ರೆಗಳು ಭಾರತದಲ್ಲಿ ಸುಲಭವಾಗಿ ಸಿಗುತ್ತವೆ. ನನಗೆ ತುರ್ತು ಅಗತ್ಯ ಇದ್ದಾಗ ಕೆಲವೇ ಕ್ಷಣಗಳಲ್ಲಿ ಸಹಾಯ ಸಿಗುತ್ತದೆ. ಭಾರತದಲ್ಲಿ ಇರುವುದು ಸುರಕ್ಷಿತ ಭಾವನೆ ಮೂಡಿಸುತ್ತದೆ’ ಎಂದು ಕ್ರಿಸ್ಟೆನ್ ಹೇಳಿಕೊಂಡಿದ್ದಾರೆ.
ಕ್ರಿಸ್ಟನ್ ಅವರ ಇನ್ಸ್ಟ ವಿಡಿಯೋ
ಇದೇ ವೇಳೆ ಭಾರತ ಹಾಗೂ ಅಮೆರಿಕದ ವೈದ್ಯಕೀಯ ವ್ಯವಸ್ಥೆಯನ್ನೂ ತುಲನೆ ಮಾಡುವ ಪ್ರಯತ್ನ ಮಾಡಿದ್ದಾರೆ.
‘ಅವರು ನನ್ನಿಂದ ಪಡೆದದ್ದು 50 ರೂ ಮಾತ್ರವೇ. ಈ ಹಣದ ಬೆಲೆ ಎಷ್ಟು ಎಂಬುದು ಗೊತ್ತಿಲ್ಲದವರು, ಇದು 60 ಸೆಂಟ್ಗೆ ಸಮ ಎಂಬುದು ತಿಳಿದಿರಿ. ಅಮೆರಿಕಕ್ಕೆ ಹೋಲಿಸಿದರೆ ಭಾರತದಲ್ಲಿ ವೈದ್ಯಕೀಯ ಶುಶ್ರೂಷೆ ವೆಚ್ಚ ಬಹಳ ಕಡಿಮೆ. ಅಮೆರಿಕದಲ್ಲಿ ಇನ್ಷೂರೆನ್ಸ್ ಪ್ರೀಮಿಯಮ್ ವೆಚ್ಚವೇ ತಿಂಗಳಿಗೆ 1-2 ಸಾವಿರ ಡಾಲರ್ ಆಗುತ್ತದೆ’ ಎಂದು ಅಮೆರಿಕ ಮೂಲದ ಕ್ರಿಸ್ಟನ್ ಫಿಶರ್ ತಮ್ಮ ವಿಡಿಯೋದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ನಟ ವಿಜಯ್ ರ‍್ಯಾಲಿಯಲ್ಲಿ ಕಲ್ಲು ತೂರಾಟ ಆಗಿರಲಿಲ್ಲ, ಪೊಲೀಸ್ ಭದ್ರತೆ ಸರಿಯಾಗಿಯೇ ಇತ್ತು: ಎಡಿಜಿಪಿ ಡೇವಿಡ್ಸನ್ ಸ್ಪಷ್ಟನೆ
ಈ ಅಮೆರಿಕನ್ ಮಹಿಳೆಯ ಅಭಿಪ್ರಾಯಕ್ಕೆ ಹೆಚ್ಚಿನವರು ಧ್ವನಿಗೂಡಿಸಿದ್ದಾರೆ. ಭಾರತದಲ್ಲಿ ಆರೋಗ್ಯ ಚಿಕಿತ್ಸೆ ವ್ಯವಸ್ಥೆ ಬಹಳ ಸುಲಭ ಹಾಗೂ ಅಗ್ಗ ಎನ್ನುವ ಅನಿಸಿಕೆಗೆ ಸಹಮತ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:44 pm, Sun, 28 September 25