AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನ, ಚೀನಾ ಗಡಿಭಾಗದಲ್ಲಿ ದೇಶದ ರಕ್ಷಣೆಗೆ ಅನಂತ್ ಶಸ್ತ್ರ ಕ್ಷಿಪಣಿ: ಬಿಇಎಲ್​ಗೆ ಗುತ್ತಿಗೆ

Anant Shastra air defence systems by BEL: ಆಪರೇಷನ್ ಸಿಂದೂರ್​ನಲ್ಲಿ ದೇಶೀಯ ನಿರ್ಮಿತ ಶಸ್ತ್ರಾಸ್ತ್ರಗಳು ಅದೆಷ್ಟು ಮಹತ್ವದ್ದು ಎಂದು ಸಾಬೀತಾಗಿತ್ತು. ಈಗ ದೇಶೀಯ ಶಸ್ತ್ರಾಸ್ತ್ರಗಳ ಸಾಲಿಗೆ ಅನಂತ ಶಸ್ತ್ರ ಸೇರ್ಪಡೆಯಾಗಿದೆ. ಡಿಆರ್​ಡಿಒ ಅಭಿವೃದ್ಧಿಪಡಿಸಿದ ಅನಂತ ಶಸ್ತ್ರದ ಖರೀದಿಗಾಗಿ ಬಿಇಎಲ್ ಸಂಸ್ಥೆಗೆ ವಾಯುಸೇನೆ ಗುತ್ತಿಗೆ ಕೊಟ್ಟಿದೆ.

ಪಾಕಿಸ್ತಾನ, ಚೀನಾ ಗಡಿಭಾಗದಲ್ಲಿ ದೇಶದ ರಕ್ಷಣೆಗೆ ಅನಂತ್ ಶಸ್ತ್ರ ಕ್ಷಿಪಣಿ: ಬಿಇಎಲ್​ಗೆ ಗುತ್ತಿಗೆ
ಅನಂತ ಶಸ್ತ್ರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 28, 2025 | 5:48 PM

Share

ನವದೆಹಲಿ, ಸೆಪ್ಟೆಂಬರ್ 28: ರಕ್ಷಣಾ ಕ್ಷೇತ್ರದಲ್ಲಿ ಭಾರತದ ಸ್ವಾವಲಂಬನೆ ದಿನೇ ದಿನೇ ಹೆಚ್ಚುತ್ತಿದೆ. ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ದೇಶೀಯವಾಗಿ ನಿರ್ಮಾಣ ಮಾಡುವ ಪ್ರಯತ್ನಗಳು ಹೆಚ್ಚುತ್ತಿವೆ. ಪಾಕಿಸ್ತಾನ ಮತ್ತು ಚೀನಾ ಗಡಿಭಾಗದುದ್ದಕ್ಕೂ ವಾಯು ರಕ್ಷಣೆ ಬಲಪಡಿಸಲು ಅನಂತ್ ಶಸ್ತ್ರ ಎನ್ನುವ ಏರ್ ಮಿಸೈಲ್ ಸಿಸ್ಟಂಗಳನ್ನು ಖರೀದಿಸುತ್ತಿದೆ ಭಾರತೀಯ ಸೇನೆ (Indian Army). ಐದರಿಂದ ಆರು ರೆಜಿಮೆಂಟ್​ಗಳ ಅನಂತ ಶಸ್ತ್ರ ಕ್ಷಿಪಣಿ ಸಿಸ್ಟಂಗಳ ಖರೀದಿಗೆ ಗುತ್ತಿಗೆ ನೀಡಲಾಗಿದೆ.

ಬೆಂಗಳೂರು ಮೂಲದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಕಂಪನಿಗೆ ಅನಂತ ಶಸ್ತ್ರ ಕ್ಷಿಪಣಿ ಗುತ್ತಿಗೆ ಸಿಕ್ಕಿದೆ. ಇದು 30,000 ಕೋಟಿ ರೂ ಮೌಲ್ಯದ ಬೃಹತ್ ಪ್ರಾಜೆಕ್ಟ್ ಆಗಿದೆ. ಡಿಆರ್​ಡಿಒ ಅಭಿವೃದ್ಧಿಪಡಿಸಿರುವ ಅನಂತ ಶಸ್ತ್ರವು ಕ್ವಿಕ್ ರಿಯಾಕ್ಷನ್ ಸರ್ಫೇಸ್ ಟು ಏರ್ ಮಿಸೈಲ್ ಸಿಸ್ಟಂ ಆಗಿದೆ.

ಇದನ್ನೂ ಓದಿ: ಈ ಯುದ್ಧದಲ್ಲಿ ಗೆದ್ದವರಿಂದ ಜಗತ್ತಿನ ಮುಂದಿನ ಅಧಿಪತ್ಯ: ರೇ ಡಾಲಿಯೋ

ಅನಂತ ಶಸ್ತ್ರ ಏರ್ ಡಿಫೆನ್ಸ್ ಸಿಸ್ಟಂ ಹೇಗಿದೆ?

ಅನಂತ ಶಸ್ತ್ರ ಏರ್ ಡಿಫೆನ್ಸ್ ಸಿಸ್ಟಂಗಳು ಬಹಳ ನಿಖರವಾಗಿ ಗುರಿಗಳಿಗೆ ಹೊಡೆಯಲು ಸಮರ್ಥವಾಗಿವೆ. ಇವುಗಳ ಶ್ರೇಣಿ 30 ಕಿಮೀ ಇದೆ.

ಭಾರತದಲ್ಲಿ ಈಗಾಗಲೇ ದೇಶೀಯ ನಿರ್ಮಿತ ಉತ್ತಮ ಏರ್ ಡಿಫೆನ್ಸ್ ಸಿಸ್ಟಂಗಳಿವೆ. ಎಂಆರ್​ಎಸ್​ಎಎಂ, ಆಕಾಶ್ ಸಿಸ್ಟಂಗಳಿವೆ. ಪಾಕಿಸ್ತಾನ ವಿರುದ್ಧದ ಆಪರೇಷನ್ ಸಿಂದೂರ್​ನಲ್ಲಿ ಭಾರತದ ದೇಶೀಯ ಶಸ್ತ್ರಾಸ್ತ್ರಗಳು ಗಮನಾರ್ಹ ಪಾತ್ರ ವಹಿಸಿದ್ದವು.

ಎಂಆರ್​ಎಸ್​ಎಎಂ, ಆಕಾಶ್ ಅಷ್ಟೇ ಅಲ್ಲದೆ, ಸ್ಪೈಡರ್, ಸುದರ್ಶನ್ ಎಸ್-400 ಏರ್ ಡಿಫೆನ್ಸ್ ಸಿಸ್ಟಂಗಳು ಆಪರೇಷನ್ ಸಿಂದೂರ್​ನಲ್ಲಿ ಮಿಂಚಿದ್ದವು. ಎಲ್-70, ಝಡ್​ಯು-23 ಏರ್ ಡಿಫೆನ್ಸ್ ಗನ್ ಮೊದಲಾದವು ಕೂಡ ಪ್ರಮುಖ ಪಾತ್ರ ವಹಿಸಿದ್ದರು.

ಇದನ್ನೂ ಓದಿ: ಹೊಸ ತಲೆಮಾರಿನ ಯುದ್ಧವಿಮಾನ ನಿರ್ಮಾಣಕ್ಕೆ ಜೊತೆಯಾದ ಬಿಇಎಲ್ ಮತ್ತು ಎಲ್ ಅಂಡ್ ಟಿ

ಈ ಸಮರ್ಥ ಏರ್ ಡಿಫೆನ್ಸ್ ವ್ಯವಸ್ಥೆಗೆ ಈಗ ಅನಂತ ಶಸ್ತ್ರ ಮತ್ತಷ್ಟು ಬಲ ಒದಗಿಸಲಿದೆ. ಹಾಗೆಯೇ, ಹೊಸ ರಾಡಾರ್​ಗಳು, ಬಹಳ ಕಿರು ಶ್ರೇಣಿಯ ಏರ್ ಡಿಫೆನ್ಸ್ ಸಿಸ್ಟಂಗಳು, ಜಾಮರ್​ಗಳು, ಲೇಸರ್ ಆಧಾರಿತ ಸಿಸ್ಟಂಗಳು ಇವೇ ಮುಂತಾದವನ್ನು ಭಾರತ ತನ್ನ ಬತ್ತಳಿಕೆಗೆ ಸೇರಿಸಿಕೊಳ್ಳಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ