ಹೈದರಾಬಾದ್: ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಣದಲ್ಲಿ ನಾಟಿ ಔಷಧ ತಜ್ಞ ಆನಂದಯ್ಯ ಇಂದಿನಿಂದ ಔಷಧ ತಯಾರಿಕೆ ಮತ್ತೆ ಆರಂಭಿಸಿದ್ದಾರೆ. ಆಂಧ್ರ ಸರ್ಕಾರ ಮತ್ತು ಆಂಧ್ರ ಹೈಕೋರ್ಟ್ ಅನುಮತಿ ಮೇರೆಗೆ ಕೊರೊನಾ ವಿರುದ್ಧ ಹೋರಾಡಲು ಆನಂದಯ್ಯ ಈ ನಾಟಿ ಆಯುರ್ವೇಧ ಔಷಧವನ್ನು ನೀಡುತ್ತಿದ್ದಾರೆ.
ನಾಟಿ ಔಷಧ ತಜ್ಞ ಆನಂದಯ್ಯ ಇಂದಿನಿಂದ ಔಷಧ ತಯಾರಿ ಮತ್ತೆ ಆರಂಭಿಸಲಿದ್ದು, ಸೋಮವಾರದಿಂದ ಔಷಧ ವಿತರಣೆಗೆ ಸಿದ್ಧವಾಗಲಿದೆ ಎಂದು ತಿಳಿದುಬಂದಿದೆ. ಇತರೆ ಜಿಲ್ಲೆಗಳಿಗೂ ಆನಲೈನ್ ಮೂಲಕ ಔಷಧ ವಿತರಣೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕಾಗಿ ಆನಂದಯ್ಯ ತಂಡ ವಿಶೇಷ ವೆಬ್ ಸೈಟ್ ಸಿದ್ದಮಾಡುತ್ತಿದೆ. ಆನಂದಯ್ಯ ಔಷಧ ತಯಾರಿ, ವಿತರಣೆಯಲ್ಲಿ ಆನಂದಯ್ಯ ಅವರ ನಿರ್ಣಯವೇ ಅಂತಿಮ. ಕೊವಿಡ್ ನಿಬಂಧನೆಗಳ ಜಾರಿ, ಅವಶ್ಯಕ ಸಹಕಾರವನ್ನು ಆಂಧ್ರ ಸರಕಾರ ಕಲ್ಪಿಸುತ್ತಿದೆ ಎಂದು ನೆಲ್ಲೂರು ಜಿಲ್ಲಾ ಸರ್ವಪಲ್ಲಿ ಶಾಸಕ ಕಾಕಾನಿ ಗೋವರ್ಧನ ರೆಡ್ಡಿ ಹೇಳಿದ್ದಾರೆ.
(anandayya medicine anandayya covid 19 medicine production to be restarted from today available online also)
ಕೊರೊನಾ ವೈರಸ್ ವಿರುದ್ಧ ನಾಟಿ ಔಷಧ ನೀಡಲು ನೆಲ್ಲೂರು ಆನಂದಯ್ಯಗೆ ಆಂಧ್ರ ಸರ್ಕಾರ ಗ್ರೀನ್ ಸಿಗ್ನಲ್