ಶೀಘ್ರ ಉತ್ತರ ಭಾರತದ 15 ಗ್ಯಾಂಗ್ಸ್ಟರ್ಗಳನ್ನು ಅಂಡಮಾನ್ ಜೈಲಿಗೆ ಸ್ಥಳಾಂತರಿಸಲಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಕುರಿತು ಎನ್‌ಐಎ ಗೃಹ ಸಚಿವಾಲಯಕ್ಕೆ ಮನವಿ ಮಾಡಿತ್ತು. ಉತ್ತರ ಭಾರತದ ಕುಖ್ಯಾತ ಕ್ರಿಮಿನಲ್ಗಳನ್ನು ಅಂಡಮಾನ್(Andaman) ಜೈಲಿಗೆ ಕಳುಹಿಸಲು ಕೇಂದ್ರ ಒಪ್ಪಿಗೆ ಸೂಚಿಸಿದೆ ಎನ್ನುವ ಮಾಹಿತಿ ಲಭ್ಯೌಆಗಿದೆ.. 15 ಕ್ರಿಮಿನಲ್ಗಳು, ಪಾತಕಿಗಳ ಸ್ಥಳಾಂತರಕ್ಕೆ ಎನ್‌ಐಎ(NIA) ಮನವಿ ಮಾಡಿತ್ತು. ಎನ್‌ಐಎ ಮನವಿಗೆ ಒಪ್ಪಿಗೆ ನೀಡಿದ ಕೇಂದ್ರ ಗೃಹ ಸಚಿವಾಲಯ ಸಮ್ಮತಿ ನೀಡಿದೆ. ದೆಹಲಿ, ಪಂಜಾಬ್, ಹರ್ಯಾಣ ಜೈಲಿನಲ್ಲಿರುವ ಜೈಲಿನಲ್ಲಿರುವ ಕೈದಿಗಳನ್ನು ಸ್ಥಳಾಂತರಿಸಲು ಒಪ್ಪಿಗೆ ನೀಡಲಾಗಿದೆ, ಇತ್ತೀಚೆಗೆ ತಿಹಾರ್ ಜೈಲಿನಲ್ಲಿ ಓರ್ವ ಕೈದಿ ಹತ್ಯೆ ಪ್ರಕರಣ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ.
ಗ್ಯಾಂಗ್ಸ್ಟರ್ಗಳನ್ನು ದಕ್ಷಿಣ ಭಾರತದ ಜೈಲುಗಳಿಗೆ ವರ್ಗಾಯಿಸುವುದು ಆರಂಭಿಕ ಪ್ರಸ್ತಾಪವಾಗಿತ್ತು, ಆದರೆ ರಾಜ್ಯ ಸರ್ಕಾರಗಳಿಂದ ಅನುಮತಿ ಪಡೆಯಬೇಕಾಗಿರುವುದರಿಂದ ಇದು ದೀರ್ಘ ಪ್ರಕ್ರಿಯೆಯಾಗಿದೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಕೇಂದ್ರಾಡಳಿತ ಪ್ರದೇಶವಾಗಿರುವುದರಿಂದ ಮತ್ತು ಅದರ ಆಡಳಿತವು ಗೃಹ ಸಚಿವಾಲಯದ ಅಡಿಯಲ್ಲಿ ಬರುವುದರಿಂದ, ಪ್ರಕ್ರಿಯೆಯು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಸಂಸ್ಥೆಯು ಪ್ರಸ್ತುತ ಕಾನೂನು ಅಭಿಪ್ರಾಯವನ್ನೂ ಪಡೆಯುತ್ತಿದೆ.
ಮತ್ತಷ್ಟು ಓದಿ: Delhi: ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ನ ಇಬ್ಬರು ಸಹಚರರ ಬಂಧನ
ಇದಕ್ಕೂ ಮುನ್ನ ಗೃಹ ಸಚಿವಾಲಯಕ್ಕೆ ಬರೆದ ಪತ್ರದಲ್ಲಿ ಉತ್ತರ ಭಾರತದ ಜೈಲಿನಲ್ಲಿರುವ ಕನಿಷ್ಠ 25 ಕ್ರಿಮಿನಲ್ಗಳನ್ನು ದಕ್ಷಿಣದ ರಾಜ್ಯಗಳಿಗೆ ವರ್ಗಾಯಿಸುವಂತೆ ಎನ್‌ಐಎ ಒತ್ತಾಯಿಸಿತ್ತು. ಈ ಪಟ್ಟಿಯಲ್ಲಿ ಪಂಜಾಬಿ ಗಾಯಕ ಸಿಧು ಮುಸೇವಾಲಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಲಾರೆನ್ಸ್ ಬಿಷ್ಣೋಯ್ ಕೂಡ ಸೇರಿದ್ದಾರೆ. ಲಾರೆನ್ಸ್ ಬಿಷ್ಣೋಯ್ ಅವರನ್ನು ಹೊರತುಪಡಿಸಿ, ದೆಹಲಿ, ಪಂಜಾಬ್ ಮತ್ತು ಹರಿಯಾಣದ ಜೈಲುಗಳಲ್ಲಿ ಬಂಧಿತರಾಗಿರುವ ಹಕೀಮ್ ಬಾಬಾ ಚೆನು, ಕೌಶಲ್ ಚೌಧರಿ, ಅಮ್ರಿಕ್ ಪ್ರಮುಖ ಗ್ಯಾಂಗ್ಸ್ಟರ್ಗಳ ಮೇಲೆ ನಿಗಾ ಇರಿಸಲಾಗಿದೆ.
ವಾಸ್ತವವಾಗಿ, 1906 ರಲ್ಲಿ ಮೊದಲ ಬಾರಿಗೆ ಅಂಡಮಾನ್‌ನ ಪೋರ್ಟ್ ಬ್ಲೇರ್‌ನಲ್ಲಿ ಸೆಲ್ಯುಲಾರ್ ಜೈಲನ್ನು ನಿರ್ಮಿಸಲಾಯಿತು. ಬ್ರಿಟಿಷರ ಆಳ್ವಿಕೆಯಲ್ಲಿ ದೇಶಭ್ರಷ್ಟ ರಾಜಕೀಯ ಕೈದಿಗಳನ್ನು ಇಲ್ಲಿ ಇರಿಸಲಾಗಿತ್ತು. ಸ್ವಾತಂತ್ರ್ಯ ಚಳವಳಿಯಲ್ಲಿ ದನಿ ಎತ್ತಿದ ಕ್ರಾಂತಿಕಾರಿಗಳನ್ನು ದೂರವಿಡಲು ಇಲ್ಲಿ ಜೈಲು ನಿರ್ಮಿಸಲಾಗಿದೆ.
ಬಟುಕೇಶ್ವರ್ ದತ್, ಬಾಬಾರಾವ್ ಸಾವರ್ಕರ್, ವಿನಾಯಕ್ ದಾಮೋದರ್ ಸಾವರ್ಕರ್, ದಿವಾನ್ ಸಿಂಗ್ ಸೇರಿದಂತೆ ಹಲವರು ಇಲ್ಲಿನ ಜೈಲುಗಳಲ್ಲಿ ಬಂಧಿಯಾಗಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ