Andaman Earthquake: ಅಂಡಮಾನ್ನಲ್ಲಿ 4.9 ತೀವ್ರತೆಯ ಭಾರಿ ಭೂಕಂಪ
ಅಂಡಮಾನ್ನಲ್ಲಿ 4.9 ತೀವ್ರತೆಯ ಭಾರಿ ಭೂಕಂಪ ಸಂಭವಿಸಿದೆ. ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಈ ಮಾಹಿತಿಯನ್ನು ನೀಡಿದೆ. ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 4.9 ಎಂದು ಅಳೆಯಲಾಗಿದೆ.

ಅಂಡಮಾನ್ನಲ್ಲಿ 4.9 ತೀವ್ರತೆಯ ಭಾರಿ ಭೂಕಂಪ ಸಂಭವಿಸಿದೆ. ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಈ ಮಾಹಿತಿಯನ್ನು ನೀಡಿದೆ. ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 4.9 ಎಂದು ಅಳೆಯಲಾಗಿದೆ. ಭೂಕಂಪದಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಸೋಮವಾರ ರಾತ್ರಿ 12.15 ಕ್ಕೆ ಕಂಪನದ ಅನುಭವವಾಯಿತು ಮತ್ತು ಅದರ ಕೇಂದ್ರಬಿಂದು ಅಂಡಮಾನ್ ಸಮುದ್ರದಲ್ಲಿದೆ. ಭೂಕಂಪದ ಆಳ 77 ಕಿ.ಮೀ. ಇದೆ ಎಂದು ಹೇಳಲಾಗಿದೆ.
4.9 ತೀವ್ರತೆಯ ಭೂಕಂಪ ಸಂಭವಿಸಿದೆ; ಅಕ್ಷಾಂಶ: 12.60 ಮತ್ತು ರೇಖಾಂಶ: 93.42, ಆಳ: 77 ಕಿಮೀ, ಸ್ಥಳ: ಅಂಡಮಾನ್ ಸಮುದ್ರ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಈ ಹಿಂದೆಯೂ ಸಹ ಪ್ರಬಲ ಭೂಕಂಪನದ ಅನುಭವವಾಗಿತ್ತು.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ 253 ಕಿಮೀ ಎಸ್‌ಎಸ್‌ಇ ದೂರದಲ್ಲಿರುವ ಪೋರ್ಟ್ ಬ್ಲೇರ್‌ನಲ್ಲಿ ನವೆಂಬರ್ 10 ರಂದು ಮುಂಜಾನೆ 2:29 ಕ್ಕೆ 4.3 ತೀವ್ರತೆಯ ಭೂಕಂಪ ಸಂಭಿಸಿತ್ತು. ಭೂಕಂಪದ ಆಳವು ನೆಲದಿಂದ 10 ಕಿ.ಮೀ. ಆದರೆ, ಈ ಭೂಕಂಪದಿಂದ ಯಾವುದೇ ಹಾನಿ ಸಂಭವಿಸಿರಲಿಲ್ಲ.
ಮತ್ತಷ್ಟು ಓದಿ: Pakistan Earthquake: ಪಾಕಿಸ್ತಾನದಲ್ಲಿ 4.1 ತೀವ್ರತೆಯ ಪ್ರಬಲ ಭೂಕಂಪ
ಸೆಪ್ಟೆಂಬರ್ 3 ರಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಭೂಕಂಪನದ ಅನುಭವವಾಗಿತ್ತು. ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 4.4 ಎಂದು ಅಳೆಯಲಾಗಿದೆ. ಇದಕ್ಕೂ ಮುನ್ನ ಸೆಪ್ಟೆಂಬರ್ 2 ರಂದು ಭೂಕಂಪನದ ಅನುಭವವಾಗಿತ್ತು.
ಸೋಮವಾರ ಬೆಳಗ್ಗೆ ಗುಜರಾತ್‌ನ ಕಚ್ ಜಿಲ್ಲೆಯಲ್ಲಿ 4.2 ತೀವ್ರತೆಯ ಭೂಕಂಪ ಸಂಭವಿಸಿದೆ. ಅಧಿಕಾರಿಗಳ ಪ್ರಕಾರ, ಭೂಕಂಪದಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
