Pakistan Earthquake: ಪಾಕಿಸ್ತಾನದಲ್ಲಿ 4.1 ತೀವ್ರತೆಯ ಪ್ರಬಲ ಭೂಕಂಪ
ಪಾಕಿಸ್ತಾನದಲ್ಲಿ 4.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ರಾಜಧಾನಿ ಇಸ್ಲಾಮಾಬಾದ್ ಮತ್ತು ಪಂಜಾಬ್ ಪ್ರಾಂತ್ಯದಲ್ಲಿ ಈ ಭೂಕಂಪ ಸಂಭವಿಸಿದೆ.
ಪಾಕಿಸ್ತಾನದಲ್ಲಿ 4.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ರಾಜಧಾನಿ ಇಸ್ಲಾಮಾಬಾದ್ ಮತ್ತು ಪಂಜಾಬ್ ಪ್ರಾಂತ್ಯದಲ್ಲಿ ಈ ಭೂಕಂಪ ಸಂಭವಿಸಿದೆ. ಮಧ್ಯಾಹ್ನ 12.54ಕ್ಕೆ ಈ ಭೂಕಂಪ ಸಂಭವಿಸಿದ್ದು, ಅದರ ತೀವ್ರತೆ 4.1ರಷ್ಟಿತ್ತು ಎಂದು ಪಾಕಿಸ್ತಾನದ ಹವಾಮಾನ ಇಲಾಖೆ ತಿಳಿಸಿದೆ. ಭೂಕಂಪದ ಕೇಂದ್ರಬಿಂದು ತಜಕಿಸ್ತಾನದಲ್ಲಿದ್ದು, 150 ಕಿ.ಮೀ ಆಳವಿದೆ ಎಂಬ ಮಾಹಿತಿ ಲಭಿಸುತ್ತಿದೆ.
ರಾಷ್ಟ್ರೀಯ ಭೂಕಂಪನ ಮಾನಿಟರಿಂಗ್ ಸೆಂಟರ್ (ಎನ್‌ಎಸ್‌ಎಂಸಿ) ಪ್ರಕಾರ, ಇದುವರೆಗೆ ಯಾವುದೇ ಜೀವ ಅಥವಾ ಆಸ್ತಿ ನಷ್ಟದ ಸುದ್ದಿ ಇಲ್ಲ. ಇಸ್ಲಾಮಾಬಾದ್‌ನ ಪತ್ರಕರ್ತರೊಬ್ಬರು ಟ್ವಿಟರ್‌ನಲ್ಲಿ ಇಸ್ಲಾಮಾಬಾದ್‌ನಲ್ಲಿ ಭೂಕಂಪದ ತೀವ್ರ ಕಂಪನವನ್ನು ಅನುಭವಿಸಿದೆ ಎಂದು ಹೇಳಿದ್ದಾರೆ.
ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದ್ದಾರೆ. ಭೂಮಿ ಕಂಪಿಸಿದಾಗ ಪಾಕಿಸ್ತಾನದ ಹಲವು ನಗರಗಳಲ್ಲಿ ಜನರು ಭಯಭೀತರಾಗಿದ್ದರು. ಇಸ್ಲಾಮಾಬಾದ್ ಸೇರಿದಂತೆ ಹಲವು ನಗರಗಳಲ್ಲಿ ಭೂಕಂಪದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 4.1 ತೀವ್ರತೆ ದಾಖಲಾಗಿದೆ. ಭೂಕಂಪದ ಕೇಂದ್ರಬಿಂದು ಇಸ್ಲಾಮಾಬಾದ್‌ನಲ್ಲಿ ಭೂಮಿಯೊಳಗೆ 10 ಕಿ.ಮೀ ದೂರದಲ್ಲಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ