AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತೀಯರ ಮೇಲೆ ಖಲಿಸ್ತಾನಿಗಳ ಅಟ್ಟಹಾಸ: ರಾಷ್ಟ್ರಧ್ವಜ ಹಿಡಿದವರನ್ನು ಅಟ್ಟಾಡಿಸಿ ಕತ್ತಿ, ದೊಣ್ಣೆಯಿಂದ ಹಲ್ಲೆ

ಮೇಲ್ಬೋರ್ನ್ ನಲ್ಲಿ ರಾಷ್ಟ್ರಧ್ವಜ ಹಿಡಿದ ಭಾರತೀಯರನ್ನು ಖಲಿಸ್ತಾನಿ ಬೆಂಬಲಿಗರು ಅಟ್ಟಾಡಿಸಿ ಹೊಡೆದಿದ್ದಾರೆ. ಘಟನೆಯ ವಿಡಿಯೋಗಳು ವೈರಲ್ ಆಗಿವೆ

ಭಾರತೀಯರ ಮೇಲೆ ಖಲಿಸ್ತಾನಿಗಳ ಅಟ್ಟಹಾಸ: ರಾಷ್ಟ್ರಧ್ವಜ ಹಿಡಿದವರನ್ನು ಅಟ್ಟಾಡಿಸಿ ಕತ್ತಿ, ದೊಣ್ಣೆಯಿಂದ ಹಲ್ಲೆ
ರಮೇಶ್ ಬಿ. ಜವಳಗೇರಾ
|

Updated on: Jan 29, 2023 | 10:53 PM

Share

ಮೆಲ್ಬೊರ್ನ್: ಆಸ್ಟ್ರೇಲಿಯಾದ ಮೆಲ್ಬೊರ್ನ್ ನಲ್ಲಿ (Melbourne) ದೇವಾಲಯಗಳನ್ನು ಧ್ವಂಸಗೊಳಿಸಿದ ಬೆನ್ನಲ್ಲೇ ಇದೀಗ ಖಲಿಸ್ತಾನಿಗಳು((Khalistanis)) ಭಾರತೀಯರ ಮೇಲೆ ಅಟ್ಟಹಾಸ ಮೆರೆದಿದ್ದಾರೆ. ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದ ಭಾರತೀಯರ ಮೇಲೆ ಖಲಿಸ್ತಾನಿಗಳು ಕತ್ತಿ, ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಮೇಲ್ಬೋರ್ನ್ ನಲ್ಲಿ ರಾಷ್ಟ್ರಧ್ವಜ ಹಿಡಿದ ಜನರನ್ನು ಖಲಿಸ್ತಾನಿ ಬೆಂಬಲಿಗರು ಅಟ್ಟಾಡಿಸಿ ಹೊಡೆದಿದ್ದಾರೆ.

ಇದನ್ನೂ ಓದಿ: Melbourne: ಆಸ್ಟ್ರೇಲಿಯಾದ ಇಸ್ಕಾನ್ ದೇಗುಲದಲ್ಲಿ ಖಲಿಸ್ತಾನಿಗಳ ಉಪದ್ರವ; ಭಾರತವನ್ನು ಹೀಗಳೆಯುವ ಗೋಡೆ ಬರಹ

ಇಂದು ಮೆಲ್ಬೋರ್ನ್ ನಲ್ಲಿ ಕೈಯಲ್ಲಿ ರಾಷ್ಟ್ರಧ್ವಜ ಹಿಡಿದಿದ್ದ ಭಾರತೀಯರ ಮೇಲೆ ಖಲಿಸ್ತಾನಿ ಪರ ಗುಂಪುಗಳ ವ್ಯಕ್ತಿಗಳು ಹಲ್ಲೆ ನಡೆಸಿದ ಆಘಾತಕಾರಿ ಘಟನೆಯ ವಿಡಿಯೋಗಳು ವೈರಲ್ ಆಗಿವೆ. ಈ ಸಂಬಂಧ ಮೆಲ್ಬೊರ್ನ್ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಮೆಲ್ಬೋರ್ನ್‌ನಲ್ಲಿರುವ ಹಿಂದೂ ದೇವಾಲಯಗಳನ್ನು ಖಲಿಸ್ತಾನ್ ಬೆಂಬಲಿಗರು ಭಿಂದ್ರನ್‌ವಾಲೆ ಪರ ಘೋಷಣೆಗಳು ಮತ್ತು ಗೋಡೆಗಳ ಮೇಲೆ ಭಾರತ ವಿರೋಧಿ ಬರಹದಿಂದ ವಿರೂಪಗೊಳಿಸಿದ ಕೆಲವು ದಿನಗಳ ನಂತರ ಈ ದಾಳಿ ನಡೆದಿದೆ.

ಇದನ್ನೂ ಓದಿ: ಆಸ್ಟ್ರೇಲಿಯಾದ ಮೆಲ್ಬೊರ್ನ್​ ನಗರದಲ್ಲಿ ಸಿಖ್ ಪ್ರತ್ಯೇಕತಾವಾದಿಗಳಿಂದ ಹಿಂದೂ ದೇಗುಲದ ಮೇಲೆ ದಾಳಿ

ಕ್ಯಾರಮ್ ಡೌನ್ಸ್‌ನಲ್ಲಿರುವ ಶಿವ ವಿಷ್ಣು ದೇವಾಲಯವ ಧ್ವಂಸವಾದ ಕೆಲವೇ ದಿನಗಳ ಬಳಿಕ ಮೆಲ್ಬೋರ್ನ್‌ನಲ್ಲಿರುವ ಆಲ್ಬರ್ಟ್ ಪಾರ್ಕ್‌ನಲ್ಲಿ ಹಿಂದೂ ದೇವಸ್ಥಾನವನ್ನು ಕೆಡವಿದ್ದರು. ಭಾರತ ವಿರೋಧಿ ಬರಹದೊಂದಿಗೆ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಲಾಗಿದೆ ಎಂದು ಆಸ್ಟ್ರೇಲಿಯಾದ ಮಾಧ್ಯಮಗಳು ವರದಿ ಮಾಡಿದ್ದವು. ಇದು ಕಳೆದ 11 ದಿನಗಳಲ್ಲಿ ಹಿಂದೂ ದೇವಾಲಯಗಳ ಮೇಲೆ ನಡೆದ ಮೂರನೇ ದಾಳಿಯಾಗಿತ್ತು.