
ಅಮರಾವತಿ, ಜೂನ್ 19: ಆಂಧ್ರ ಪ್ರದೇಶ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿನ ಸುಧಾರಣೆಗಾಗಿ ಆರಂಭಿಸಿರುವ ಲೀಪ್(LEAP) ಮಾದರಿಯನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್(Dharmendra Pradhan) ಶ್ಲಾಘಿಸಿದ್ದಾರೆ. ಆಂಧ್ರಪ್ರದೇಶ ಸರ್ಕಾರದ ಕ್ಯಾಬಿನೆಟ್ ಸಚಿವ ನಾರಾ ಲೋಕೇಶ್ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿಯಾಗಿದ್ದಾರೆ.ಈ ಸಭೆಯಲ್ಲಿ, ರಾಜ್ಯ ಸರ್ಕಾರ ಪ್ರಾರಂಭಿಸಿರುವ LEAP ಉಪಕ್ರಮದ ಬಗ್ಗೆ ಅವರು ವಿವರವಾದ ಮಾಹಿತಿ ನೀಡಿದ್ದಾರೆ.
ಎನ್ಇಪಿ- 2020 ರ ಪ್ರಕಾರ ಆಂಧ್ರಪ್ರದೇಶವನ್ನು ಶಿಕ್ಷಣ ಕ್ಷೇತ್ರದಲ್ಲಿ ಮುಂದೆ ಕೊಂಡೊಯ್ಯುವಲ್ಲಿ ಇದು ಸಹಕಾರಿ ಎಂದು ಶ್ಲಾಘಿಷಿದ್ದಾರೆ. LEAP ಎಂದರೆ ಕಲಿಕೆ, ಸಮಾನತೆ ಮತ್ತು ಪ್ರವೇಶ ಮಾರ್ಗಗಳು ಮತ್ತು ಶಾಲೆಗಳನ್ನು ಸುಧಾರಿಸಲು, ಉತ್ತಮ ಕಲಿಕಾ ವಾತಾವರಣವನ್ನು ಒದಗಿಸಲು ಮತ್ತು ವಿದ್ಯಾರ್ಥಿಗಳನ್ನು ಭವಿಷ್ಯಕ್ಕೆ ಸಿದ್ಧಪಡಿಸಲು ಆಂಧ್ರಪ್ರದೇಶ ಸರ್ಕಾರ ಸಿದ್ಧಪಡಿಸಿರುವ ವಿಶಾಲ ಯೋಜನೆಯ ಭಾಗವಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಆಂಧ್ರಪ್ರದೇಶದಲ್ಲಿ ಬಲವಾದ ಶಿಕ್ಷಣ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಬೆಂಬಲ ನೀಡುವುದನ್ನು ಸದಾ ಮುಂದುವರೆಸುತ್ತದೆ ಎಂದು ಅವರು ಭರವಸೆ ನೀಡಿದರು. ರಾಷ್ಟ್ರೀಯ ಶಿಕ್ಷಣ ನೀತಿ 2020 ಕ್ಕೆ ಅನುಗುಣವಾಗಿ ಆಂಧ್ರಪ್ರದೇಶವನ್ನು ಉತ್ತಮ ಗುಣಮಟ್ಟದ ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯತೆಗಾಗಿ ಕೇಂದ್ರವನ್ನಾಗಿ ಮಾಡುವುದು ಗುರಿಯಾಗಿದೆ ಎಂದು ಅವರು ಹೇಳಿದರು.
ಮತ್ತಷ್ಟು ಓದಿ: ಭಾರತ ಜಾಗತಿಕ ಶಿಕ್ಷಣವನ್ನು ಕೈಗೆಟುಕುವಂತೆ ಮಾಡಿದೆ; ಧರ್ಮೇಂದ್ರ ಪ್ರಧಾನ್
ಎಐ-ಚಾಲಿತ ಮೌಲ್ಯಮಾಪನಗಳು, ಆಟ ಆಧಾರಿತ ಕಲಿಕೆ ಮತ್ತು ಶಿಕ್ಷಕರ ತರಬೇತಿಯ ಮೇಲೆ ಕೇಂದ್ರೀಕರಿಸುತ್ತದೆ. ಈ ಉಪಕ್ರಮದ ಸಹಾಯದಿಂದ, ದುರ್ಬಲ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನದೊಂದಿಗೆ ಅಧ್ಯಯನದಲ್ಲಿ ಸಹಾಯ ಮಾಡಲಾಗುತ್ತದೆ.
Delighted to meet Cabinet Minister, Govt. of Andhra Pradesh, Shri Nara Lokesh in my office today.
He briefed me about the LEAP initiative launched by the Govt. of Andhra Pradesh. Appreciated him for the vigorous efforts he is undertaking for transforming the learning landscape… pic.twitter.com/Ie70SN4w4N
— Dharmendra Pradhan (@dpradhanbjp) June 18, 2025
ಈ ವರ್ಷದಿಂದಲೇ ಲೀಪ್(LEAP) ಮಾದರಿಯನ್ನು ಪ್ರಾರಂಭಿಸಲಾಗುತ್ತಿದೆ ಎಂದು ಆಂಧ್ರಪ್ರದೇಶದ ಶಿಕ್ಷಣ ಸಚಿವರು ಹೇಳಿದರು. 2029 ರ ಅಂತ್ಯದ ವೇಳೆಗೆ ವಿಶ್ವ ದರ್ಜೆಯ ಶಿಕ್ಷಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಸರ್ಕಾರದ ಗುರಿಯಾಗಿದೆ. ಇದರ ಅಡಿಯಲ್ಲಿ, ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಶೌಚಾಲಯಗಳ ನಿರ್ಮಾಣದ ಜೊತೆಗೆ, ಇತರ ಮೂಲಭೂತ ಸೌಲಭ್ಯಗಳನ್ನು ಸಹ ಸುಧಾರಿಸಲಾಗುವುದು ಎಂದು ಹೇಳಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:35 am, Thu, 19 June 25