ಆಂಧ್ರದ ಶಾಲೆಯಲ್ಲಿ 22 ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ; ಪ್ರಿನ್ಸಿಪಾಲ್ ಸೇರಿ ಮೂವರ ಬಂಧನ

ಆಂಧ್ರಪ್ರದೇಶದ ಶಾಲೆಯಲ್ಲಿ 22 ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರಾಂಶುಪಾಲರು, ವಾರ್ಡನ್ ಸೇರಿ ಮೂವರನ್ನು ಬಂಧಿಸಲಾಗಿದೆ. ಶಾಲೆಯನ್ನು ಮುಚ್ಚಲಾಗಿದೆ. ಅರುಣಾಚಲ ಪ್ರದೇಶದ ಪೂರ್ವ ಸಿಯಾಂಗ್‌ನಲ್ಲಿರುವ ಸಾಂಗೋ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ 22 ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಪ್ರಕರಣ ಬೆಳಕಿಗೆ ಬಂದಿದೆ. ಶಾಲಾ ವಾರ್ಡನ್, ಪ್ರಾಂಶುಪಾಲರು ಮತ್ತು ಲೆಕ್ಕಪತ್ರಗಾರ ಸೇರಿದಂತೆ ಮೂವರನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ.

ಆಂಧ್ರದ ಶಾಲೆಯಲ್ಲಿ 22 ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ; ಪ್ರಿನ್ಸಿಪಾಲ್ ಸೇರಿ ಮೂವರ ಬಂಧನ
Sexual Assault

Updated on: Nov 01, 2025 | 8:41 PM

ಹೈದರಾಬಾದ್, ನವೆಂಬರ್ 1: ಅರುಣಾಚಲ ಪ್ರದೇಶದ ಪೂರ್ವ ಸಿಯಾಂಗ್‌ನಲ್ಲಿರುವ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ 22 ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ (Sexual Harassment) ನಡೆದ ಪ್ರಕರಣ ಬೆಳಕಿಗೆ ಬಂದಿದೆ. ಶಾಲಾ ವಾರ್ಡನ್ ಸೇರಿದಂತೆ ಮೂವರನ್ನು ಬಂಧಿಸಲಾಗಿದ್ದು, ಶಾಲೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಈ ವಿಷಯದ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ. ಈ ವಿಷಯದ ತನಿಖೆಗಾಗಿ ಎಸ್‌ಐಟಿ ರಚಿಸಲಾಗಿದ್ದು, ಶಾಲೆಯನ್ನು ಮುಚ್ಚಲಾಗಿದೆ. ಬಲಿಪಶುಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ.

ಸಾಂಗೋ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ವಿಶೇಷ ತನಿಖಾ ತಂಡ (SIT) ತನಿಖೆ ಆರಂಭಿಸಿದೆ . SIT ಶಾಲಾ ಆವರಣಕ್ಕೆ ಭೇಟಿ ನೀಡಿ ಹಲವಾರು ದಾಖಲೆಗಳನ್ನು ವಶಪಡಿಸಿಕೊಂಡಿದೆ. ಡಿಜಿಟಲ್ ಪುರಾವೆಗಳನ್ನು ಸಹ ಸಂಗ್ರಹಿಸಲಾಗಿದ್ದು, ಅವುಗಳನ್ನು ವಿಧಿವಿಜ್ಞಾನ ತಂಡಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪ್ರಕರಣದಲ್ಲಿ ಪ್ರಭಾವಿತರಾದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಬಹುದು ಎಂದು ವರದಿಯಾಗಿದೆ.

ಇದನ್ನೂ ಓದಿ: ಕೇರಳದಲ್ಲಿ ಮಂಗಳೂರಿನ ಕುಖ್ಯಾತ ರೌಡಿಶೀಟರ್​ನ ಬರ್ಬರ ಹತ್ಯೆ

ಈ ಪ್ರಕರಣದ ಬಗ್ಗೆ ಅಕ್ಟೋಬರ್ 29ರಂದು ಮೆಬೊ ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ದಾಖಲಿಸಿದ್ದರು. ಪೋಷಕರ ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿ ಆರೋಪಿ ವಾರ್ಡನ್ ಹೇನ್ ಜಾನ್ಸನ್ ವಾಫೆ ಅವರನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಬಂಧಿಸಿದರು. ತನಿಖೆ ಮುಂದುವರೆದಂತೆ, ಹೆಚ್ಚಿನ ಪೋಷಕರು ಮುಂದೆ ಬಂದು ದೂರು ದಾಖಲಿಸಿದರು.

ಇದನ್ನೂ ಓದಿ: ತನ್ನ ತಮ್ಮನ ಜೊತೆ ಮಲಗಲೊಪ್ಪದ ಹೆಂಡತಿಯನ್ನು 10 ದಿನ ರೂಂನಲ್ಲಿ ಕೂಡಿಹಾಕಿದ ಗಂಡ!

ಆ ಶಾಲೆಯ ಪ್ರಾಂಶುಪಾಲರಾದ ಹೊಯಿನು ವೈಫೆ ಮತ್ತು ಲೆಕ್ಕಪರಿಶೋಧಕ ನಿಯಾಂಗ್‌ಡೊಯಿಟಿಂಗ್ ವೈಫೆ ಅವರು ಈ ವಿಷಯವನ್ನು ಮರೆಮಾಚುವಲ್ಲಿ ಮತ್ತು ವರದಿಯನ್ನು ಸಲ್ಲಿಸುವಲ್ಲಿ ವಿಫಲರಾಗಿದ್ದಾರೆ ಎಂದು ಪೋಷಕರು ಹೇಳಿದ್ದಾರೆ. ಪೋಷಕರ ದೂರಿನ ನಂತರ, ಅಕ್ಟೋಬರ್ 30ರಂದು ಪ್ರಾಂಶುಪಾಲರು ಮತ್ತು ಲೆಕ್ಕಪರಿಶೋಧಕರನ್ನು ಸಹ ಬಂಧಿಸಲಾಯಿತು. ಇಲ್ಲಿಯವರೆಗೆ, 22 ವಿದ್ಯಾರ್ಥಿಗಳ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ