ಕೇರಳದಲ್ಲಿ ಮಂಗಳೂರಿನ ಕುಖ್ಯಾತ ರೌಡಿಶೀಟರ್ನ ಬರ್ಬರ ಹತ್ಯೆ
ಮಂಗಳೂರಿನ ಕುಖ್ಯಾತ ರೌಡಿಶೀಟರ್ ಕೇರಳದ ಕಾಸರಗೋಡು ಜಿಲ್ಲೆಯ ಉಪ್ಪಳದ ರೈಲ್ವೆ ಗೇಟ್ ಬಳಿ ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆಯಾಗಿದ್ದಾನೆ. ಫರಂಗಿಪೇಟೆ ಜೋಡಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ರೌಡಿಶೀಟರ್ನನ್ನು ದುಷ್ಕರ್ಮಿಗಳು ಕೊಚ್ಚಿ ಕೊಂದಿದ್ದಾರೆ. ಸದ್ಯ ಉಪ್ಪಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು, ನವೆಂಬರ್ 01: ಕೇರಳದಲ್ಲಿ ಮಂಗಳೂರಿನ ಕುಖ್ಯಾತ ರೌಡಿಶೀಟರ್ನ (Rowdysheeter) ಬರ್ಬರ ಹತ್ಯೆ ನಡೆದಿರುವಂತಹ ಘಟನೆ ಕಾಸರಗೋಡು ಜಿಲ್ಲೆಯ ಉಪ್ಪಳದ ರೈಲ್ವೆ ಗೇಟ್ ಬಳಿ ನಡೆದಿದೆ. ರೌಡಿಶೀಟರ್ ಟೋಪಿ ನೌಫಾಲ್ ಅನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ (murder) ಮಾಡಿದ್ದಾರೆ. ಉಪ್ಪಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಯಾರೀತ ನೌಫಾಲ್?
ಮಂಗಳೂರಿನ ಫೈಸಲ್ನಗರದ ನಿವಾಸಿಯಾಗಿರುವ ರೌಡಿಶೀಟರ್ ಟೋಪಿ ನೌಫಾಲ್, ಮಂಗಳೂರಿನ ನಟೋರಿಯಸ್ ರೌಡಿಯೊಂದಿಗೆ ಸೇರಿ ಡ್ರಗ್ಸ್ ಸೇವನೆ ಮತ್ತು ವಹಿವಾಟು ಮಾಡುತ್ತಿದ್ದ. 2017ರಲ್ಲಿ ಮಂಗಳೂರಿನ ಫರಂಗಿಪೇಟೆಯಲ್ಲಿ ನಡೆದಿದ್ದ ಜೋಡಿ ಕೊಲೆ ಕೇಸ್ನ ಪ್ರಮುಖ ಆರೋಪಿ.
ಇದನ್ನೂ ಓದಿ: ವರದಕ್ಷಿಣ ಕಿರುಕುಳಕ್ಕೆ ಯುವತಿ ಬಲಿ?: ಮೃತಳ ಪೋಷಕರಿಂದ ಗಂಭೀರ ಆರೋಪ
ನೌಫಾಲ್ ಮಾರಿಪಳ್ಳ ಜಬ್ಬಾರ್, ತಲ್ಲತ್ ಗ್ಯಾಂಗ್ ಜೊತೆಗೂ ಗುರುತಿಸಿಕೊಂಡಿದ್ದ. ಬಳಿಕ ತನ್ನದೇ ತಂಡವೊಂದನ್ನು ಕಟ್ಟಿಕೊಂಡು ಡ್ರಗ್ಸ್, ವಸೂಲಿ, ಅಕ್ರಮ ಚಿನ್ನ ವಹಿವಾಟು ಮತ್ತು ಕೊಲೆಯತ್ನ ಮಾಡುತ್ತಿದ್ದ. ನೌಫಾಲ್ ವಿರುದ್ಧ ಮಂಗಳೂರಿನಲ್ಲಿ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಡಂಬಲ್ಸ್ನಿಂದ ತಲೆಗೆ ಹೊಡೆದು ಸಹ ಕೆಲಸಗಾರ ಕೊಲೆ
ಕ್ಲುಲ್ಲಕ ಕಾರಣಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವಂತಹ ಘಟನೆ ಬೆಂಗಳೂರಿನ ಗೋವಿಂದರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಧ್ಯರಾತ್ರಿ 1:30ಕ್ಕೆ ನಡೆದಿದೆ. ಸೋಮಲಾ ವಂಶಿ (24) ಮೃತ ವ್ಯಕ್ತಿ. ಡಂಬಲ್ಸ್ನಿಂದ ತಲೆಗೆ ಹೊಡೆದು ಭೀಮೇಶ್ ಬಾಬು ಎಂಬುವವರಿಂದ ಕೊಲೆ ಮಾಡಲಾಗಿದೆ.
ಇದನ್ನೂ ಓದಿ: ದೇವನಹಳ್ಳಿ: ಒಂದೇ ಕುಟುಂಬದ ನಾಲ್ವರು ಸಾಮೂಹಿಕ ಆತ್ಮಹತ್ಯೆ ಯತ್ನ; ಇಬ್ಬರ ಸಾವು, ಇನ್ನಿಬ್ಬರ ಸ್ಥಿತಿ ಗಂಭೀರ
ಡಾಟಾ ಡಿಜಿಟಲ್ ಬ್ಯಾಂಕ್ ಹಾಗೂ ಸಿನಿಮಾಗಳಿಗೆ ಚಿತ್ರೀಕರಣ ಮಾಡುವ ಕಂಪನಿಯಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದರು. ಪ್ರತಿನಿತ್ಯ ಕಂಪನಿಯಲ್ಲಿಯೇ ಮಲಗುತ್ತಿದ್ದರು. ಹೀಗಾಗಿ ಲೈಟ್ ಆನ್ ಮಾಡುವ ವಿಚಾರಕ್ಕೆ ಗಲಾಟೆ ನಡೆದಿದ್ದು, ಬಳಿಕ ಕೊಲೆಯಲ್ಲಿ ಅಂತ್ಯವಾಗಿದೆ. ಹತ್ಯೆ ಬಳಿಕ ಪೊಲೀಸ್ ಠಾಣೆಗೆ ಬಂದು ಆರೋಪಿ ಶರಣಾಗಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:29 pm, Sat, 1 November 25



