Andhra Pradesh: ರಸ್ತೆ ದಾಟುವಾಗ ಟ್ರಕ್​ ಡಿಕ್ಕಿ ಹೊಡೆದ ಪರಿಣಾಮ 3 ಆನೆಗಳು ಸ್ಥಳದಲ್ಲೇ ಸಾವು

|

Updated on: Jun 16, 2023 | 10:08 AM

ಆಂಧ್ರಪ್ರದೇಶ(Andhra Pradesh)ದ ಚಿತ್ತೂರು ಜಿಲ್ಲೆಯಲ್ಲಿ ಬುಧವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೂರು ಆನೆ(Elephant)ಗಳು ಸಾವನ್ನಪ್ಪಿವೆ.

Andhra Pradesh: ರಸ್ತೆ ದಾಟುವಾಗ ಟ್ರಕ್​ ಡಿಕ್ಕಿ ಹೊಡೆದ ಪರಿಣಾಮ 3 ಆನೆಗಳು ಸ್ಥಳದಲ್ಲೇ ಸಾವು
ಟ್ರಕ್
Image Credit source: IndiaToday
Follow us on

ಆಂಧ್ರಪ್ರದೇಶ(Andhra Pradesh)ದ ಚಿತ್ತೂರು ಜಿಲ್ಲೆಯಲ್ಲಿ ಬುಧವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೂರು ಆನೆ(Elephant)ಗಳು ಸಾವನ್ನಪ್ಪಿವೆ. ಚಿತ್ತೂರು-ಪಲಮನೇರು ರಾಷ್ಟ್ರೀಯ ಹೆದ್ದಾರಿಯ ಜಗಮರ್ಲ ಕ್ರಾಸ್‌ನಲ್ಲಿ ಆನೆಗಳು ರಸ್ತೆ ದಾಟುತ್ತಿದ್ದಾಗ ಟ್ರಕ್ ಡಿಕ್ಕಿ ಹೊಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಚಿತ್ತೂರು ಜಿಲ್ಲೆಯ ಪಲಮನೇರು ಮಂಡಲದಲ್ಲಿ ಈ ಅಪಘಾತ ಸಂಭವಿಸಿದೆ. ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ರಸ್ತೆ ದಾಟುತ್ತಿದ್ದಾಗ ಟ್ರಕ್ ಡಿಕ್ಕಿ ಹೊಡೆದ ನಂತರ ಮೂರು ಆನೆಗಳು ಸಾವನ್ನಪ್ಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆನೆಗಳಿಗೆ ಡಿಕ್ಕಿ ಹೊಡೆದ ನಂತರ ಟ್ರಕ್ ಚಾಲಕ ತಲೆಮರೆಸಿಕೊಂಡಿದ್ದಾನೆ. ಟ್ರಕ್ ಚಾಲಕರು ಅತಿವೇಗದ ಚಾಲನೆಯಿಂದ ಇಂತಹ ಅವಘಡಗಳು ಸಂಭವಿಸುತ್ತಿವೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಮತ್ತಷ್ಟು ಓದಿ: ತಮಿಳುನಾಡು ಗಡಿಯಲ್ಲಿ ಆನೆ ಹಾವಳಿ: ಸಿಕ್ಕ ಸಿಕ್ಕವರ ಮೇಲೆ ದಾಳಿ, ಇಬ್ಬರು ಸಾವು, ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ನಾವು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸುತ್ತೇವೆ ಮತ್ತು ಅದರ ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ. ಇದಕ್ಕೂ ಮುನ್ನ ಆಂಧ್ರಪ್ರದೇಶದ ಗ್ರಾಮಕ್ಕೆ ನೀರು ಕುಡಿಯಲು ಆನೆಗಳ ಹಿಂಡು ನುಗ್ಗುತ್ತಿರುವ ದೃಶ್ಯ ವೈರಲ್ ಆಗಿದೆ.

ಆಂಧ್ರಪ್ರದೇಶದ ಪಾರ್ವತಿಪುರಂ ಜಿಲ್ಲೆಯ ಪೂಜಾರಿಗುಡ ಗ್ರಾಮಕ್ಕೆ ಬುಧವಾರ ಬೆಳಗ್ಗೆ ಏಳು ಆನೆಗಳ ಹಿಂಡು ಬಾಯಾರಿಕೆಯಿಂದಾಗಿ ಗ್ರಾಮವನ್ನು ಪ್ರವೇಶಿಸಿವೆ.

ಗ್ರಾಮಸ್ಥರು ಎರಡು ಬಕೆಟ್‌ಗಳಲ್ಲಿ ಸಂಗ್ರಹಿಸಿಟ್ಟ ನೀರನ್ನು ಆನೆಗಳು ಕುಡಿಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಗ್ರಾಮಸ್ಥರು ಆನೆಗಳನ್ನು ಓಡಿಸಲು ಯತ್ನಿಸುತ್ತಿದ್ದಂತೆಯೇ ಮರಿ ಆನೆ ಸೇರಿದಂತೆ ಏಳು ಆನೆಗಳ ಗುಂಪು ಗ್ರಾಮಕ್ಕೆ ಬಂದಿವೆ. ಆನೆಗಳ ಹಿಂಡು ಗ್ರಾಮದಲ್ಲಿ ಆತಂಕ ಸೃಷ್ಟಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ