ಆಂಧ್ರಪ್ರದೇಶ: ಸಭೆಯೊಂದರಲ್ಲಿ ಚಪ್ಪಲಿಯಿಂದ ತನ್ನ ಕಪಾಳಕ್ಕೆ ತಾನೇ ಹೊಡೆದುಕೊಂಡ ಕಾರ್ಪೊರೇಟರ್, ಕಾರಣವೇನು?
ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯ ಕಾರ್ಪೊರೇಟರ್ ಮತದಾರರಿಗೆ ನೀಡಿದ ಭರವಸೆಗಳನ್ನು ಈಡೇರಿಸದ ಕಾರಣಕ್ಕೆ ತಮಗೆ ತಾವೇ ಚಪ್ಪಲಿಯಿಂದ ಕಪಾಳಮೋಕ್ಷ ಮಾಡಿಕೊಂಡಿದ್ದಾರೆ.
ಆಂಧ್ರಪ್ರದೇಶ(Andhra Pradesh)ದ ಅನಕಪಲ್ಲಿ ಜಿಲ್ಲೆಯ ಕಾರ್ಪೊರೇಟರ್ ಮತದಾರರಿಗೆ ನೀಡಿದ ಭರವಸೆಗಳನ್ನು ಈಡೇರಿಸದ ಕಾರಣಕ್ಕೆ ತಮಗೆ ತಾವೇ ಚಪ್ಪಲಿಯಿಂದ ಕಪಾಳಮೋಕ್ಷ ಮಾಡಿಕೊಂಡಿದ್ದಾರೆ. ನರಸೀಪಟ್ಟಣ ಪುರಸಭೆಯ ವಾರ್ಡ್ 20ರ ಕೌನ್ಸಿಲರ್ ಮುಲಪರ್ತಿ ರಾಮರಾಜು ಕೌನ್ಸಿಲ್ ಸಭೆಯಲ್ಲಿ ಬೇಸರ ವ್ಯಕ್ತಪಡಿಸಿ ಈ ವೇಳೆ ಚಪ್ಪಲಿಯಿಂದ ತಾವೇ ಹೊಡೆದುಕೊಂಡಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದೆ.
ಕಪಾಳಮೋಕ್ಷಕ್ಕೆ ಕಾರಣ ನೀಡಿದ ರಾಮರಾಜು, ‘ನಾನು ಕಾರ್ಪೊರೇಟರ್ ಆಗಿ ಆಯ್ಕೆಯಾಗಿ 31 ತಿಂಗಳು ಕಳೆದರೂ ನನ್ನ ವಾರ್ಡ್‌ನಲ್ಲಿನ ನಾಗರಿಕ ಸಮಸ್ಯೆಗಳಾದ ಒಳಚರಂಡಿ, ವಿದ್ಯುತ್, ಸ್ವಚ್ಛತೆ, ರಸ್ತೆ ಮತ್ತಿತರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತಿಲ್ಲ’ ಎಂದು ಪಿಟಿಐಗೆ ತಿಳಿಸಿದರು.
ಆಟೋ ರಿಕ್ಷಾ ಓಡಿಸಿ ಜೀವನ ಸಾಗಿಸುತ್ತಿರುವ 40 ವರ್ಷದ ಕಾರ್ಪೊರೇಟರ್ ಅವರು ಎಲ್ಲ ರೀತಿಯಲ್ಲಿ ಪ್ರಯತ್ನಿಸಿದರೂ ಮತದಾರರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗಲಿಲ್ಲ. 20ನೇ ವಾರ್ಡ್ ಅನ್ನು ಸ್ಥಳೀಯ ಪುರಸಭೆ ಅಧಿಕಾರಿಗಳು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ, ಇದರಿಂದಾಗಿ ಯಾವುದೇ ಮತದಾರರಿಗೆ ನೀರಿನ ಸಂಪರ್ಕವನ್ನು ನೀಡಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು.
తెలుగుదేశం పార్టీ తరపున గెలిచిన లింగాపురం గ్రామ గిరిజన ప్రజాప్రతినిధి ఆయన. పదవిలో ఉండి కూడా 30 నెలలుగా గ్రామంలో ఒక్క కుళాయి కూడా వేయించలేకపోయానని… దీనికంటే చచ్చిపోవడం నయమని కౌన్సిలర్ల సమావేశంలో కన్నీరు పెట్టుకుని, చెప్పుతో కొట్టుకున్నారాయన.#AndhraPradesh #NalugellaNarakam… pic.twitter.com/u6k4E5KXZy
— Telugu Desam Party (@JaiTDP) July 31, 2023
ಅಪೂರ್ಣ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಮತದಾರರು ಒತ್ತಾಯಿಸುತ್ತಿದ್ದು, ಭರವಸೆಗಳನ್ನು ಈಡೇರಿಸಲು ಸಾಧ್ಯವಾಗದೆ ಕೌನ್ಸಿಲ್ ಸಭೆಯಲ್ಲಿ ಸಾಯುವುದೇ ಲೇಸು ಎಂದು ರಾಮರಾಜು ಹೇಳಿದರು.
ಸ್ಥಳೀಯ ಸಂಸ್ಥೆ ಚುನಾವಣೆ ವೇಳೆ ಕೌನ್ಸಿಲರ್‌ಗೆ ಟಿಡಿಪಿ ಬೆಂಬಲವಿತ್ತು. ಮುಳಪರ್ತಿ ರಾಮರಾಜು ಅವರು ತಮ್ಮ ಹುಟ್ಟೂರು ಲಿಂಗಪುರದ 20ನೇ ವಾರ್ಡ್‌ನಲ್ಲಿ ಗೆದ್ದಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ