Fish Attack: ಗಣಪತಿ ವಿಸರ್ಜನೆ ವೇಳೆ ಕಡಲತೀರದಲ್ಲಿ ಭಕ್ತರ ಮೇಲೆ ದಾಳಿ ಮಾಡಿದ ಭಯಂಕರ ಮೀನು! ಗಾಯಗೊಂಡ ಭಕ್ತರು, ಭಯದಿಂದ ಓಟಕಿತ್ತ ಜನ

|

Updated on: Sep 22, 2023 | 1:32 PM

ಗಣಪತಿ ವಿಸರ್ಜನೆ ವೇಳೆ ಕಡಲತೀರದಲ್ಲಿ ಭಯಂಕರ ಮೀನು ಭಕ್ತರ ಮೇಲೆ ದಾಳಿ ಮಾಡಿದೆ. ನೋಡನೋಡುತ್ತಿದ್ದಂತೆ 14 ಜನರ ಮೇಲೆ ಭಾರೀ ಗಾತ್ರದ ಮೀನೊಂದು ದಾಳಿ ನಡೆಸಿದೆ. ಮೀನು ದಾಳಿ ಮಾಡಿರುವುದು ದಡದಲ್ಲಿದ್ದ ಕೆಲ ಭಕ್ತರು ಗಮನಿಸುವವರೆಗೂ ಗೊತ್ತಾಗಿರಲಿಲ್ಲ.

Fish Attack: ಗಣಪತಿ ವಿಸರ್ಜನೆ ವೇಳೆ ಕಡಲತೀರದಲ್ಲಿ ಭಕ್ತರ ಮೇಲೆ ದಾಳಿ ಮಾಡಿದ ಭಯಂಕರ ಮೀನು! ಗಾಯಗೊಂಡ ಭಕ್ತರು, ಭಯದಿಂದ ಓಟಕಿತ್ತ ಜನ
ಗಣಪತಿ ವಿಸರ್ಜನೆ ವೇಳೆ ಕಡಲತೀರದಲ್ಲಿ ಭಕ್ತರ ಮೇಲೆ ದಾಳಿ ಮಾಡಿದ ಭಯಂಕರ ಮೀನು!
Follow us on

ಆಂಧ್ರ ಪ್ರದೇಶ, ಸೆಪ್ಟೆಂಬರ್​​ 22: ವಿನಾಯಕ ಚೌತಿ (Ganesha Chaturthi) ಬಳಿಕ ಎಲ್ಲೆಡೆ ಈಗ ಗಣೇಶ ವಿಸರ್ಜನೆ (Ganesha Immersion) ಆರಂಭವಾಗಿದೆ. ಅನೇಕ ಭಕ್ತರು ಮೂರು ದಿನಗಳ ನಂತರ ಗಣಪನನ್ನು ಗಂಗಮ್ಮನ ಮಡಿಲಿಗೆ ಹಾಕಲು ನೀರಿನತ್ತ ಸಾಗುತ್ತಿದ್ದಾರೆ. ಬೊಜ್ಜು ಗಣಪಯ್ಯನನ್ನು ಸ್ವಾಗತಿಸಿದಷ್ಟೇ ವೇಗವಾಗಿ ಭಕ್ತರು ವಿದಾಯವನ್ನೂ ಹೇಳುತ್ತಿದ್ದಾರೆ. ಸೌಂಡ್​ಸೆಟ್​​ ಹಾಡುಗಳ ಸದ್ದಿನೊಂದಿಗೆ ಗಂಗಮ್ಮನ ಮಡಿಲಿಗೆ ಸ್ವಾಮಿಯನ್ನು ಸಂತಸದಿಂದ ಬಿಡಲಾಗುತ್ತಿದೆ. ಆದರೆ, ನೆಲ್ಲೂರಿನಲ್ಲಿ ವಿನಾಯಕನ ವಿಸರ್ಜನೆಯ ವೇಳೆ ಅನಿರೀಕ್ಷಿತ ಘಟನೆಯೊಂದು ನಡೆದಿದೆ. ಕಡಲ ಕಿನಾರೆಯಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡುತ್ತಿದ್ದಾಗ ಏಕಾಏಕಿ ಬೃಹತ್ ಗಾತ್ರದ ಮೀನು ದಡಕ್ಕೆ ಬಂದುಬಿಟ್ಟಿದೆ. ಭಕ್ತರ ಮೇಲೆ ದಾಳಿ ನಡೆಸಿದೆ. ಮೀನು ದಾಳಿಯಿಂದ (Fish Attack) ಸುಮಾರು 14 ಭಕ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ. ಏನಾಗುತ್ತಿದೆ ಎಂದು ತಿಳಿಯದೆ ಅನೇಕ ಭಕ್ತರು (Devotees) ಓಡಿ ಹೋದರು. ಈ ಘಟನೆಯ ವಿವರ ಇಂತಿದೆ.

ತಿರುಪತಿ ಜಿಲ್ಲೆಯ ಗುಡೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿನಾಯಕ ಚೌತಿ ಆಚರಣೆ ವಿಜೃಂಭಣೆಯಿಂದ ನಡೆಯುತ್ತಿದೆ. ವಿವಿಧ ಆಕಾರದ ಬೃಹತ್​​ ಗಣೇಶ ಮಂಟಪಗಳನ್ನು ಸ್ಥಾಪಿಸಿರುವ ವಿನಾಯಕ ಉತ್ಸವ ಸಮಿತಿಗಳು ಮೂರು, ನಾಲ್ಕು ಮತ್ತು ಐದನೇ ದಿನ ವಿಸರ್ಜನೆ ನಡೆಸುತ್ತಿವೆ. ಈ ಪ್ರದೇಶಗಳಲ್ಲಿ ಹೆಚ್ಚಿನ ವಿಸರ್ಜನೆ ಕಾರ್ಯಕ್ರಮಗಳನ್ನು ಸಮುದ್ರ ತೀರದಲ್ಲಿ ಮಾಡಲಾಗುತ್ತದೆ.

ಎಂದಿನಂತೆ ತಿರುಪತಿ ಜಿಲ್ಲೆಯ ತೂಪಿಲ್ಲಾ ಪಾಮ್ ಬೀಚ್‌ಗೆ ಗ್ರಾಮಸ್ಥರು ಗಣೇಶ ಮೂರ್ತಿಗಳೊಂದಿಗೆ ಬೃಹತ್ ರ್ಯಾಲಿಯಲ್ಲಿ ಬಂದರು. ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಚಿತ್ತಮೂರಿನ ಉತ್ಸವ ಸಮಿತಿ ಸದಸ್ಯರು ಹಾಗೂ ಭಕ್ತರು ಕಡಲ ತೀರಕ್ಕೆ ಆಗಮಿಸಿದರು. ವಿಸರ್ಜನೆಗೂ ಮುನ್ನ ದಡದಲ್ಲಿ ವಿಶೇಷ ಪೂಜೆ ಮಾಡಲಾಗಿದೆ. ಈಗಾಗಲೇ ವಿಸರ್ಜನೆಗೆಂದು ಅಲ್ಲಿಗೆ ಬಂದಿದ್ದ ಸಮಿತಿ ಸದಸ್ಯರು ಹಾಗೂ ಇನ್ನೊಂದು ಸಮಿತಿಯ ಭಕ್ತರು ಗಣೇಶ ಉತ್ಸವ ಮೂರ್ತಿಯನ್ನು ಸಮುದ್ರದಲ್ಲಿ ವಿಸರ್ಜಿಸಲು ನೀರಿಗೆ ಇಳಿದರು. ಸರಿಯಾಗಿ ಆ ವೇಳೆ ಅವರ ಕಾಲುಗಳಿಗೆ ಏನೋ ತಾಗುತ್ತಿರುವುದನ್ನು ಗಮನಿಸಿದ್ದಾರೆ. ಸಮುದ್ರ ತೀರದಲ್ಲಿ ಕೊಚ್ಚಿಹೋಗಿರುವ ವಸ್ತುಗಳು ಕಾಲಿಗೆ ತಾಕುತ್ತಿರಬಹುದು ಎಂದು ಅವರು ಭಾವಿಸಿದ್ದರು.

Also Read: ಅಸಲಿಗೆ ಸರ್ಕಾರಿ ಅತಿಥಿಗೃಹ ಕೆಕೆ ಗೆಸ್ಟ್ ಹೌಸ್​​ ನಲ್ಲಿ ಚೈತ್ರಾ ಮೇಡಂಗೆ ರೂಮ್​ ಸಿಕ್ಕಿದ್ದು ಹೇಗೆ? ಯಾರ, ಯಾವ ಪ್ರಭಾವ ಅಲ್ಲಿ ಕೆಲಸ ಮಾಡಿತ್ತು?

ಆದರೆ ಆಳಕ್ಕೆ ಹೋದಂತೆಲ್ಲಾ ಅವರಿಗೆ ಏನೋ ಬಾಧಿಸತೊಡಗಿದೆ, ಏನೋ ತಮ್ಮನ್ನು ನೋಯಿಸುತ್ತಿದೆ ಎಂದು ಅರಿವಿಗೆ ಬಂತು. ನೋಡನೋಡುತ್ತಿದ್ದಂತೆ 14 ಜನರ ಮೇಲೆ ಭಾರೀ ಗಾತ್ರದ ಮೀನೊಂದು ದಾಳಿ ನಡೆಸಿದೆ. ಮೀನು ದಾಳಿ ಮಾಡಿರುವುದು ದಡದಲ್ಲಿದ್ದ ಕೆಲ ಭಕ್ತರು ಗಮನಿಸುವವರೆಗೂ ಗೊತ್ತಾಗಿರಲಿಲ್ಲ. ಆದರೆ ದಾಳಿ ಮಾಡಿದ ಮೀನು ಯಾವ ಮಾದರಿಯದ್ದು ಎಂದು ಯಾರಿಗೂ ಹೇಳಲು ಸಾಧ್ಯವಾಗಿಲ್ಲ.

ಅದು ದೊಡ್ಡ ಮೀನು ಎಂದು ಕೆಲವರು ಹೇಳುತ್ತಾರೆ. ಇನ್ನು ಕೆಲವರು ತೇಗದ ಮೀನು ಎಂದು ಹೇಳುತ್ತಿದ್ದಾರೆ… ಇನ್ನು ಕೆಲವರು ನೀಲಿ ವಸಂತ ಮೀನು ಎಂದು ಹೇಳುತ್ತಾರೆ. ಗಾಯಾಳುಗಳಿಗೆ ಸ್ಥಳೀಯ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಮೀನುಗಾರಿಕಾ ಅಧಿಕಾರಿಗಳು ವಾಸ್ತವಾಂಶವನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಭಾಗದಲ್ಲಿ ಮೀನು ದಾಳಿ ನಡೆಸಿರುವ ಈ ಘಟನೆ ಸಂಚಲನ ಮೂಡಿಸಿದೆ. ಇದರಿಂದ ಉಳಿದವರು ಗಣೇಶನ ವಿಸರ್ಜನೆಗೆ ಅಲ್ಲಿಗೆ ಹೋಗಲು ಭಯಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಶುಕ್ರವಾರ ನಿಗದಿಯಾಗಿದ್ದ ಗಣೇಶನ ವಿಸರ್ಜನೆಗಳು ಬೇರೆಡೆ ನಡೆಯುವ ನಿರೀಕ್ಷೆಯಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ