
ಚಿಂತಪಲ್ಲಿ, ಡಿಸೆಂಬರ್ 12:ಫೋನ್ನಲ್ಲಿ ಯಾಕಿಷ್ಟು ಮಾತಾಡ್ತೀಯ ಎಂದು ಗದರಿದ್ದಕ್ಕೆ ಪತ್ನಿ ಪತಿಯನ್ನೇ ಹತ್ಯೆ(Murder) ಮಾಡಿರುವ ಘಟನೆ ಆಂಧ್ರಪ್ರದೇಶದ ಅಲ್ಲೂರಿ ಜಿಲ್ಲೆಯಲ್ಲಿ ನಡೆದಿದೆ. ಎಲ್ಲದಕ್ಕೂ ಪತಿ ಮೂಗು ತೂರಿಸಿಕೊಂಡು ಬರುತ್ತಾರೆ ಎಂದು ಕೋಪಗೊಂಡು ಕೊಡಲಿಯಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾಳೆ. ಕುಟುಂಬ ಸದಸ್ಯರು ಆತನನ್ನು ಹುತಾ ಹುತಿನಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಅಲ್ಲೂರಿ ಜಿಲ್ಲೆಯ ಚಿಂತಪಲ್ಲಿ ಮಂಡಲದ ಮೇದೂರಿನ ನಿವಾಸಿ ರಾಜಾ ರಾವ್, ಪತ್ನಿ ದೇವಿ ಮತ್ತು ಮೂವರು ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಯಾವಾಗ ನೋಡಿದರೂ ಪತ್ನಿ ಮೊಬೈಲ್ ಕಾಲ್ನಲ್ಲಿಯೇ ಇರುತ್ತಿರುವುದನ್ನು ಕಂಡು ಕೋಪಗೊಂಡಿದ್ದ ಪತಿ ರಾಜಾ ರಾವ್ ಪತ್ನಿಗೆ ಗದರಿದ್ದರು.
ರಾಜಾ ರಾವ್ ಪತ್ನಿಗೆ ಮಾತನಾಡುವುದನ್ನು ಕಡಿಮೆ ಮಾಡಲು ಸಲಹೆ ನೀಡಿದರು. ಇದು ಇಬ್ಬರ ನಡುವೆ ಜಗಳಕ್ಕೆ ಕಾರಣವಾಗಿತ್ತು, ಜಗಳ ಅತಿರೇಕಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯಗೊಂಡಿದೆ.
ಮತ್ತಷ್ಟು ಓದಿ: ಗರ್ಭಿಣಿ ಪತ್ನಿಯಿಂದ ದೂರವಾಗಿದ್ದ ಪತಿಯಿಂದ ಆಕೆಯ ಲಿವ್-ಇನ್ ಸಂಗಾತಿಯ ಹತ್ಯೆ
ದೇವಿ ಕೂಡಲೇ ಹತ್ತಿರದಲ್ಲಿದ್ದ ಕೊಡಲಿಯನ್ನು ಕೈಲೆತ್ತಿಕೊಂಡು ಕೊಡಲಿಗೆ ಜೋಡಿಸಲಾದ ಕೋಲಿನಿಂದ ತನ್ನ ಗಂಡನ ಮೇಲೆ ಹಲ್ಲೆ ನಡೆಸಿದ್ದಾರೆ. ದಾಳಿಯಲ್ಲಿ ರಾಜಾ ರಾವ್ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಕಳುಹಿಸಲಾಯಿತು.
ಅಲ್ಲಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಶಾಖಪಟ್ಟಣಂನ ಕಿಂಗ್ ಜಾರ್ಜ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಕೆಜಿಎಚ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ರಾಜಾ ರಾವ್ ಸಾವನ್ನಪ್ಪಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:50 pm, Fri, 12 December 25