ವಿಶಾಖಪಟ್ಟಣಂ: ರೈಲಿನಿಂದ ಇಳಿಯುವಾಗ ವಿದ್ಯಾರ್ಥಿಯೊಬ್ಬಳು ಕಾಲು ಜಾರಿ ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವೆ ಸಿಲುಕಿಕೊಂಡಿರುವ ಘಟನೆ ವಿಶಾಖಪಟ್ಟಣಂ ಜಿಲ್ಲೆಯ ದುವ್ವಾಡ ರೈಲು ನಿಲ್ದಾಣದಲ್ಲಿ ನಡೆದಿದೆ. ತಕ್ಷಣವೇ ರೈಲನ್ನು ನಿಲ್ಲಿಸಲಾಗಿದ್ದು, ರಕ್ಷಣಾ ಸಿಬ್ಬಂದಿ ವಿದ್ಯಾರ್ಥಿನಿಯನ್ನು ರಕ್ಷಿಸಿದ್ದಾರೆ. ದುವ್ವಾಡದ ವಿಜ್ಞಾನ ಕಾಲೇಜಿನಲ್ಲಿ ಎಂಸಿಎ ಓದುತ್ತಿರುವ ಶಶಿಕಲಾ ಎಂಬ ವಿದ್ಯಾರ್ಥಿನಿ ಗುಂಟೂರು-ರಾಯಗಡ ಎಕ್ಸ್‌ಪ್ರೆಸ್‌ನಿಂದ ಇಳಿಯುವಾಗ ರೈಲ್ವೇ ಪ್ಲಾಟ್‌ಫಾರ್ಮ್ ಮತ್ತು ರೈಲಿನ ನಡುವೆ ಸಿಲುಕಿಕೊಂಡಿದ್ದಾರೆ.
ಆಕೆ ಕಾಲೇಜಿನಿಂದ ಅಣ್ಣಾವರಂನಿಂದ ದುವ್ವಾಡ ತಲುಪಿದ್ದಳು. ಪ್ಲಾಟ್‌ಫಾರ್ಮ್‌ನಲ್ಲಿ ಇಳಿಯುವಾಗ ಕಾಲು ಜಾರಿ ಪ್ಲಾಟ್‌ಫಾರ್ಮ್ ಮತ್ತು ರೈಲಿನ ನಡುವೆ ಸಿಲುಕಿಕೊಂಡಿದ್ದು, ಕಾಲು ತಿರುಚಿ ಹಳಿಯಲ್ಲಿ ಸಿಲುಕಿಕೊಂಡಿದ್ದಾಳೆ. ವಿದ್ಯಾರ್ಥಿನಿ ಕಾಪಾಡಲು ಕಿರುಚಿದ್ದಾಳೆ. ನಿಲ್ದಾಣದ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಬಂದು ರೈಲು ಚಲಿಸದಂತೆ ರೈಲು ಸಿಬ್ಬಂದಿಗೆ ತಿಳಿಸಿದ್ದಾರೆ.
ಇದನ್ನು ಓದಿ: : 2025ರ ವೇಳೆಗೆ ಬೆಂಗಳೂರು 314 ಕಿಮೀ ಮೆಟ್ರೋ ರೈಲು ಸಂಪರ್ಕವನ್ನು ಹೊಂದಲಿದೆ
ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಸಿಬ್ಬಂದಿ ವಿದ್ಯಾರ್ಥಿನಿಯನ್ನು ಕಾಪಾಡಲು ರೈಲು ನಿಲ್ದಾಣದ ಪ್ಲಾಟ್ಫಾರ್ಮ್ನ ಒಂದು ಭಾಗವನ್ನು ತೆಗೆದಿದ್ದಾರೆ. ಈ ಕಾರ್ಯಾಚರಣೆ ಒಂದೂವರೆ ಗಂಟೆಗಳ ಕಾಲ ನಡೆಯಿತು. ಗಾಯಗೊಂಡ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
ಗೂಡ್ಸ್ ರೈಲು ಹಳಿತಪ್ಪಿ ಇಬ್ಬರು ಸಾವು
ಇದಕ್ಕೂ ಮೊದಲು ಒಡಿಶಾದ ಕೊರೈ ನಿಲ್ದಾಣದಲ್ಲಿ ಗೂಡ್ಸ್ ರೈಲು ಹಳಿತಪ್ಪಿ ಇಬ್ಬರು ಸಾವನ್ನಪ್ಪಿದ್ದರೆ, ಇತರರು ಗಾಯಗೊಂಡಿದ್ದರು. ಎರಡೂ ರೈಲು ಮಾರ್ಗಗಳನ್ನು ನಿರ್ಬಂಧಿಸಲಾಗಿದೆ ಮತ್ತು ನಿಲ್ದಾಣದ ಕಟ್ಟಡಕ್ಕೆ ಹಾನಿಯಾಗಿದೆ. ಪೂರ್ವ ಕರಾವಳಿ ರೈಲ್ವೆಯ ಖುರ್ದಾ ರೋಡ್ ರೈಲ್ವೆ ವಿಭಾಗದ ಅಡಿಯಲ್ಲಿ ಭದ್ರಕ್-ಕಪಿಲಾಸ್ ರಸ್ತೆ ರೈಲ್ವೆ ವಿಭಾಗದ ಕೊರೈ ನಿಲ್ದಾಣದಲ್ಲಿ ಸರಕು ರೈಲು ಹಳಿತಪ್ಪಿತು. ಎರಡೂ ಸಾಲುಗಳನ್ನು ನಿರ್ಬಂಧಿಸಲಾಗಿದೆ.
A student was slipped while deboarding Guntur-Raigad express train and got #Stuck in between the train and the platform, at #Duvvada rly stn. Appreciable job by #RailwayPolice , rescued the girl safely and shifted to the nearby hospital.#Visakhapatnam #AndhraPradesh #Vizag pic.twitter.com/wezF8Eb6wl
— Surya Reddy (@jsuryareddy) December 7, 2022
ರೈಲು ಹಳಿತಪ್ಪಿದಾಗ, ಎಂಟು ವ್ಯಾಗನ್‌ಗಳು ಪ್ಲಾಟ್‌ಫಾರ್ಮ್ ಮತ್ತು ವೇಟಿಂಗ್ ಹಾಲ್‌ಗೆ ನುಗ್ಗಿ ಸಾವುನೋವುಗಳಿಗೆ ಕಾರಣವಾಯಿತು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಈ ಬಗ್ಗೆ ಈಸ್ಟ್ ಕೋಸ್ಟ್ ರೈಲ್ವೆ (ಇಸಿಒಆರ್) ಅಧಿಕಾರಿಗಳು ಹೇಳಿದ್ದಾರೆ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಸಂತ್ರಸ್ತರ ಸಂಬಂಧಿಕರಿಗೆ ತಲಾ 2 ಲಕ್ಷ ರೂ ನೀಡಿದ್ದಾರೆ ಘಟನೆಯಿಂದಾಗಿ ಗುಂಟೂರು-ರಾಯಗಡ ಎಕ್ಸ್‌ಪ್ರೆಸ್‌ನ ನಿರ್ಗಮನದಲ್ಲಿ ಒಂದೂವರೆ ಗಂಟೆ ವಿಳಂಬವಾಯಿತು ಮತ್ತು ಮಾರ್ಗದಲ್ಲಿ ಇತರ ರೈಲುಗಳ ಓಡಾಟದ ಮೇಲೂ ಪರಿಣಾಮ ಬೀರಿತು.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:49 pm, Wed, 7 December 22