ಒಂದೇ ಕ್ಷಣ! ರೈಲುಪಾಲಾಗಿಬಿಡುತ್ತಿದ್ದಳು ಹುಡುಗಿ, ಸದ್ಯ ಆರ್ಪಿಎಫ್ ಸಿಬ್ಬಂದಿ ರಕ್ಷಿಸಿದರು
Kerala : ಕೇರಳದ ತಿರೂರು ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಅಕಸ್ಮಾತ್ ಅಲ್ಲಿ ಯಾರೂ ಇರದಿದ್ದಲ್ಲಿ ಈಕೆ ಖಂಡಿತ ರೈಲಿನ ಗಾಲಿಗೆ ಸಿಲುಕಿಕೊಳ್ಳುತ್ತಿದ್ದಳು. ಆರ್ಪಿಎಫ್ ಹೆಡ್ ಕಾನ್ಸ್ಟೇಬಲ್ಗೆ ನೆಟ್ಟಿಗರು ಧನ್ಯವಾದ ಹೇಳುತ್ತಿದ್ದಾರೆ.
Viral Video : ಚಲಿಸುತ್ತಿರುವ ರೈಲನ್ನು ಏರಲು ಹೋಗುತ್ತಿದ್ದ ಈ ಅಪ್ರಾಪ್ತೆ ಪ್ಲ್ಯಾಟ್ಫಾರ್ಮ್ನ ತುದಿಗೆ ಬಿದ್ದಿದ್ದಾಳೆ. ಅಲ್ಲಿಯೇ ನಿಂತಿದ್ದ ರೈಲ್ವೆ ರಕ್ಷಣಾ ಪಡೆಯ ಹೆಡ್ ಕಾನ್ಸ್ಟೇಬಲ್ ಒಬ್ಬರು ಎಚ್ಚೆತ್ತುಕೊಂಡು ತಕ್ಷಣವೇ ಅವಳನ್ನು ರಕ್ಷಿಸಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಈ ಘಟನೆ ನಡೆದಿರುವುದು ಕೇರಳದಲ್ಲಿ. ಈ ವಿಡಿಯೋ ಅನ್ನು RPF India ದ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
Alert #RPF Head Constable Satheesh acted swiftly and saved a minor girl from going under the wheels of train when she fell down while trying to board a running train at Tirur railway station.#MissionJeewanRaksha #LifeSavingAct #BeResponsible #BeSafe pic.twitter.com/R0iMdas4WX
ಇದನ್ನೂ ಓದಿ— RPF INDIA (@RPF_INDIA) November 11, 2022
ಈ ಹುಡುಗಿ ಚಲಿಸುತ್ತಿರುವ ರೈಲನ್ನು ಏರಲು ಹೋದಾಗ ನಿಯಂತ್ರಣವನ್ನು ಕಳೆದುಕೊಂಡಿದ್ದಾಳೆ. ತಕ್ಷಣವೇ ಹೆಡ್ಕಾನ್ಸ್ಟೇಬಲ್ ಅವಳೆಡೆ ಧಾವಿಸದೇ ಇದ್ದಲ್ಲಿ ಆಕೆ ರೈಲುಪಾಲಾಗುವ ಸಾಧ್ಯತೆ ಖಂಡಿತ ಇತ್ತು. ಅದೃಷ್ಟವಶಾತ್ ಆಕೆ ಬದುಕುಳಿದಿದ್ದಾಳೆ. ‘ಹೆಡ್ ಕಾನ್ಸ್ಟೇಬಲ್ ಸತೀಶ್ ತುಂಬಾ ತ್ವರಿತವಾಗಿ ಇವಳನ್ನು ರಕ್ಷಿಸಿದ್ದಾರೆ. ರೈಲಿನ ಚಕ್ರಗಳಿಗೆ ಪಾಲಾಗದಂತೆ ರಕ್ಷಿಸಿದ್ದಾರೆ’ ಎಂದು ವಿಡಿಯೋಗೆ ಒಕ್ಕಣೆ ಬರೆಯಲಾಗಿದೆ.
ಕೇರಳದ ತಿರೂರು ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಈ ತನಕ 3,500ಕ್ಕೂ ಹೆಚ್ಚು ಜನರು ವಿಡಿಯೋ ನೋಡಿದ್ದಾರೆ. ಅನೇಕರು ರಕ್ಷಣಾ ಕಾರ್ಯವನ್ನು ಶ್ಲಾಘಿಸಿದ್ದಾರೆ. ‘ರೈಲು ನಿಲ್ದಾಣವನ್ನು ರೈಲು ಪ್ರವೇಶಿಸುತ್ತಿರುವಾಗ ಆರ್ಪಿಎಫ್ನವರು ಯಾಕೆ ಹೀಗೆ ಸೂಕ್ಷ್ಮವಾಗಿ ಗಮನಿಸುತ್ತಾರೆ, ರೈಲಿನ ಹತ್ತಿರ ಬಂದು ನಿಲ್ಲುತ್ತಾರೆ ಎನ್ನುವುದು ನನಗೀಗ ಅರ್ಥವಾಯಿತು’ ಎಂದಿದ್ದಾರೆ ಒಬ್ಬರು. ‘ಸದ್ಯ ಬದುಕಿದಳು ಆ ಹುಡುಗಿ. ರಕ್ಷಿಸಿದವರಿಗೆ ಧನ್ಯವಾದ’ ಎಂದಿದ್ದಾರೆ ಇನ್ನೊಬ್ಬರು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ