AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದತ್ತುಪೋಷಕರೊಂದಿಗೆ ಹೊರಡುವ ಮುನ್ನ ಈ ಮಗು ಕೋರ್ಟ್​ನಲ್ಲಿ ಆಡಿದ ಮಾತುಗಳು ನಿಮ್ಮನ್ನು ಆರ್ದ್ರಗೊಳಿಸುತ್ತವೆ

Adoption : ಈ ಹೊಸ ತಾಯಿಯನ್ನು ತುಂಬಾ ಪ್ರೀತಿಸುತ್ತೇನೆ, ಬಹಳ ಒಳ್ಳೆಯ ತಾಯಿ ಆಕೆ ಎಂದು ತನ್ನ ದತ್ತುತಾಯಿಯ ಬಗ್ಗೆ ನ್ಯಾಯಾಧೀಶರಿಗೆ ಹೇಳುತ್ತಿದೆ ಈ ಮಗು. ಈ ವಾರಾಂತ್ಯದ ಮೂಡಿನಲ್ಲಿರುವ ನೀವೊಮ್ಮೆ ಈ ವಿಡಿಯೋ ನೋಡಬಹುದೆ?

ದತ್ತುಪೋಷಕರೊಂದಿಗೆ ಹೊರಡುವ ಮುನ್ನ ಈ ಮಗು ಕೋರ್ಟ್​ನಲ್ಲಿ ಆಡಿದ ಮಾತುಗಳು ನಿಮ್ಮನ್ನು ಆರ್ದ್ರಗೊಳಿಸುತ್ತವೆ
Little boys moving words during adoption hearing
TV9 Web
| Updated By: ಶ್ರೀದೇವಿ ಕಳಸದ|

Updated on:Nov 12, 2022 | 3:48 PM

Share

Viral Video : ನ್ಯಾಯಾಲಯದಲ್ಲಿ ದತ್ತು ಪ್ರಕ್ರಿಯೆಯ ಸಂದರ್ಭದಲ್ಲಿ ತನ್ನ ಹೊಸ ತಾಯಿಯನ್ನು ತಾನೆಷ್ಟು ಪ್ರೀತಿಸುತ್ತೇನೆ ಎಂದು ಈ ಮಗು ತನ್ನ ಮಾತಿನಲ್ಲಿ ವಿವರಿಸುವುದನ್ನು ಕೇಳುವಾಗ ಯಾರಿಗೂ ಕಣ್ಣುಗಳು ತೇವವಾಗದೇ ಇರಲಾರವು. ಅತ್ಯಂತ ಭಾವನಾತ್ಮಕವಾಗಿ ಹಿಡಿದಿಡುವ ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ತನ್ನ ಹೊಸ ತಾಯಿಯ ಪಕ್ಕದಲ್ಲಿ ಮತ್ತು ನ್ಯಾಯಾಧೀಶರ ಎದುರಿನಲ್ಲಿ ಕುಳಿತು ಈ ಮಗು ಮನಸಿನ ಮಾತು ಹೇಳುತ್ತಿದೆ.

ತಾನು ಈ ಹೊಸ ತಾಯಿಯನ್ನು ತುಂಬಾ ಪ್ರೀತಿಸುತ್ತೇನೆ ಎಂದು ನ್ಯಾಯಾಧೀಶರಿಗೆ ಹೇಳುತ್ತಿದೆ. ಅವಳು ಬಹಳ ಒಳ್ಳೆಯ ತಾಯಿ ಅವಳನ್ನು ತುಂಬಾನೇ ಪ್ರೀತಿಸುತ್ತೇನೆ ಎನ್ನುತ್ತಿದೆ. ಈ ಮಾತು ಕೇಳುತ್ತಿದ್ದಂತೆ, ದತ್ತು ಪಡೆಯುತ್ತಿರುವ ತಾಯಿಯ ಭಾವದ ಕಟ್ಟೆಯೊಡೆಯುತ್ತದೆ. ಮಗುವಿನ ಕಡೆ ವಾಲುತ್ತ ಅದನ್ನು ಅಪ್ಪುತ್ತಾಳೆ. ಪ್ರತಿಯಾಗಿ ಮಗುವೂ ಅವಳನ್ನು ಅಪ್ಪುತ್ತದೆ.

ಆಗ ನ್ಯಾಯಾಧೀಶರು, ‘ಓ ಮೈ ಗಾಡ್​! ನಿನಗಿದೆಲ್ಲ ಗೊತ್ತಾ? ನಿಜ, ನಮ್ಮ ಬಗ್ಗೆ ಯಾರಾದರೂ ಕಾಳಜಿ ತೋರಿಸಿದಾಗ ಅವರಿಗೆ ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಹೇಳುವುದು ಬಹಳ ಮುಖ್ಯ. ನೀನು ಈ ವಿಷಯದಲ್ಲಿ ಬಹಳ ಅದೃಷ್ಟವಂತ ಮತ್ತು ನಿನ್ನ ಹೊಸ ಪೋಷಕರೂ ಕೂಡ ಅದೃಷ್ಟವಂತರು ನಿನ್ನನ್ನು ಪಡೆಯಲು. ಇದೆಲ್ಲವನ್ನು ನೋಡಲು ನನಗೆ ಬಹಳ ಖುಷಿಯಾಗುತ್ತಿದೆ’ ಎಂದಿದ್ದಾರೆ.

ಈಗಾಗಲೇ ಈ ವಿಡಿಯೋ ಅನ್ನು 65,000ಕ್ಕೂ ಹೆಚ್ಚು ಜನರು ನೋಡಿದ್ದಾರೆ. 4,600ಕ್ಕೂ ಹೆಚ್ಚು ಜನರು ಪ್ರತಿಕ್ರಿಯಿಸಿದ್ದಾರೆ. ಎಂಥ ಭಾವುಕ ಕ್ಷಣಗಳಿವು, ಇದಕ್ಕಿಂತ ಹೆಚ್ಚಿಗೆ ಇನ್ನೇನು ಬೇಕು ತಾಯಿಯಾದವಳಿಗೆ ಎಂದಿದ್ದಾರೆ ಒಬ್ಬರು. ಕೊನೆಗೂ ಈ ಮಗುವಿಗೆ ಒಳ್ಳೆಯ ಅಪ್ಪ ಅಮ್ಮ ಮತ್ತು ಮನೆ ದೊರಕಿತ್ತಲ್ಲ, ನನಗಂತೂ ತುಂಬಾ ಖುಷಿಯಾಯಿತು ಎಂದಿದ್ದಾರೆ ಇನ್ನೊಬ್ಬರು.

ಇದೆಲ್ಲವನ್ನೂ ಓದಿದಿ ನೋಡಿದ ನಿಮಗೆ ಈ ಕ್ಷಣದಲ್ಲಿ ಏನನ್ನಿಸುತ್ತಿದೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:48 pm, Sat, 12 November 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ