ವಧುವಿನ ಮುಖಕ್ಕೆ ವರ ಕೇಕ್​ ಬಳಿದ ರೀತಿಗೆ ನೆಟ್ಟಿಗರ ಕೋಪ ನೆತ್ತಿಗೆ

Wedding Cake : ಇಂಥ ಗಂಡ ನನಗೇನಾದರೂ ಸಿಕ್ಕಿದ್ದರೆ ತಕ್ಷಣವೇ ವಿಚ್ಛೇದನ ಪಡೆಯುತ್ತಿದ್ದೆ ಎಂದಿದ್ದಾರೆ ಒಬ್ಬರು. ಇದು ಬಹಳ ಆಕ್ರಮಣಕಾರಿ, ನನ್ನ ತಂದೆ ನೋಡಿದ್ದರೆ ಖಂಡಿತ ಇವನನ್ನು ಹೊಡೆದೇ ಬಿಡುತ್ತಿದ್ದರು ಎಂದಿದ್ದಾರೆ ಇನ್ನೊಬ್ಬರು.

ವಧುವಿನ ಮುಖಕ್ಕೆ ವರ ಕೇಕ್​ ಬಳಿದ ರೀತಿಗೆ ನೆಟ್ಟಿಗರ ಕೋಪ ನೆತ್ತಿಗೆ
Groom 'aggressively' smashing wedding cake in bride's face has people fuming
Follow us
TV9 Web
| Updated By: ಶ್ರೀದೇವಿ ಕಳಸದ

Updated on: Nov 12, 2022 | 2:44 PM

Viral Video : ತಮಾಷೆಯಲ್ಲಿಯೂ ನವಿರಾದ ಸ್ಪರ್ಷವಿರುತ್ತದೆ. ಅದರಲ್ಲೂ ಬದುಕುಪೂರ್ತಿ ಒಟ್ಟಿಗೆ ಬದುಕುತ್ತೇವೆ ಎಂದು ಪ್ರಮಾಣ ಮಾಡಿದ ನವದಂಪತಿಗಳ ಮಧ್ಯೆ ಕೇಳಬೇಕೆ? ಇದು ಇನ್ನೂ ಹೆಚ್ಚು ಸೂಕ್ಷ್ಮತನದಿಂದ ಕೂಡಿರುತ್ತದೆ. ಆದರೆ ಇದೀಗ ವೈರಲ್​ ಆಗುತ್ತಿರುವ ಈ ವಿಡಿಯೋ ನೋಡುತ್ತಿದ್ದರೆ ನಿಮಗೆ ಜಾಸ್ತಿಯೇ ಕಿರಿಕಿರಿಯಾಗುವುದುಂಟು. ಮದುವೆ ದಿನ ವರ, ವಧುವಿಗೆ ಹೀಗೆ ಆಕ್ರಮಣಕಾರಿಯಾಗಿ ಕೇಕ್​ ಅನ್ನು ಮುಖಕ್ಕೆ ಬಳಿದಿದ್ದಾನೆ. ಟಿಕ್​ ಟಾಕ್​ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದಾಗ ಟಿಕ್​ಟಾಕ್​ ಇದಕ್ಕೆ ರೆಡ್​ ಫ್ಲ್ಯಾಗ್​ ತೋರಿಸಿದೆ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ನಂತರ ವಧುವರರು ಇದೆಲ್ಲ ಮೋಜಿಗಾಗಿ ಮಾಡಿದ್ದು ಎಂದು ಹೇಳಿದ್ದಾರೆ. ​ಆದರೂ ಇದೀಗ ಈ ಪೋಸ್ಟ್​ಗೆ ಸಂಬಂಧಿಸಿದ ಕಮೆಂಟ್ ಸೆಕ್ಷನ್ ಅನ್ನು ನಿಷ್ಕ್ರೀಯಗೊಳಿಸಲಾಗಿದೆ. ಅನೇಕರು ಅನೇಕ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಸಾಕಷ್ಟು ಜನರಿಗೆ ಇದು ತಮಾಷೆ ಎನ್ನಿಸಿಲ್ಲ.

ಇಂಥ ಗಂಡ ನನಗೇನಾದರೂ ಸಿಕ್ಕಿದ್ದರೆ ನಾನು ಈಗಿಂದೀಗಲೇ ವಿಚ್ಛೇದನ ಪಡೆಯುತ್ತಿದ್ದೆ ಎಂದಿದ್ದಾರೆ ಒಬ್ಬರು. ವಧುವಿನ ಮೇಕಪ್​ಗೆ ಎಷ್ಟೊಂದು ಖರ್ಚು ಮಾಡಲಾಗುತ್ತದೆ. ಆದರೆ ವರ ಹೀಗೆಲ್ಲ ಮಾಡಿದ್ದು ಅನ್ಯಾಯ ಎಂದಿದ್ದಾರೆ ಇನ್ನೊಬ್ಬರು. ಇದು ವಧುವಿಗೆ ವಿಶೇಷವಾದ ದಿನ, ರಾಜಕುಮಾರಿಯಂತೆ ಆಕೆ ಅಲಂಕರಿಸಿಕೊಳ್ಳುತ್ತಾಳೆ, ಮೇಕಪ್​ ಮಾಡಿಕೊಳ್ಳುತ್ತಾಳೆ. ಆದರೆ… ಎಂದು ಮಗದೊಬ್ಬರು ರಾಗವೆಳೆದಿದ್ದಾರೆ. ಇದು ಬಹಳ ಆಕ್ರಮಣಕಾರಿ ಎನ್ನಿಸುತ್ತಿದೆ. ನನ್ನ ತಂದೆ ಇದನ್ನು ನೋಡಿದ್ದರೆ ಖಂಡಿತ ಇವನನ್ನು ಹೊಡೆದೇ ಬಿಡುತ್ತಿದ್ದರು ಎಂದು ಇನ್ನೂ ಒಬ್ಬರು ಹೇಳಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ