ತಿರುಪತಿಯಲ್ಲಿ ಕಾಣಿಯೂರು ಶ್ರೀಪಾದರನ್ನು ಭೇಟಿಯಾದ BJP ನಾಯಕ ಕೆ. ಅಣ್ಣಾಮಲೈ

‘ಮುಂದಿನ ದಿನಗಳಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಿ. ಉತ್ತಮ ಜನಸೇವಕರಾಗಿ ಕೆಲಸ ಮಾಡಿ’ ಎಂದು ಅಣ್ಣಾಮಲೈ ಅವರಿಗೆ ಕಾಣಿಯೂರು ಶ್ರೀಪಾದರು ಹರಸಿದರು.

ತಿರುಪತಿಯಲ್ಲಿ ಕಾಣಿಯೂರು ಶ್ರೀಪಾದರನ್ನು ಭೇಟಿಯಾದ BJP ನಾಯಕ ಕೆ. ಅಣ್ಣಾಮಲೈ
ತಿರುಪತಿಯಲ್ಲಿ ಕಾಣಿಯೂರು ಶ್ರೀಪಾದರ ಆಶೀರ್ವಾದ ಪಡೆದ ಅಣ್ಣಾಮಲೈ
Updated By: ಸಾಧು ಶ್ರೀನಾಥ್​

Updated on: Dec 22, 2020 | 10:37 AM

ತಿರುಪತಿ: ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆಲಸ ಮಾಡಿ ಹೆಸರು ಮಾಡಿದ್ದ ಮಾಜಿ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈ ತಿರುಪತಿಯಲ್ಲಿ ಕಾಣಿಯೂರು ಮಠದ ವಿದ್ಯಾ ವಲ್ಲಭ ತೀರ್ಥ ಸ್ವಾಮೀಜಿಯನ್ನು ಭೇಟಿಯಾಗಿ, ಆಶೀರ್ವಾದ ಪಡೆದುಕೊಂಡರು. ಉಡುಪಿ ಅಷ್ಟಮಠಗಳ ಪೈಕಿ ಕಾಣಿಯೂರು ಮಠವೂ ಒಂದಾಗಿದೆ.

ಪೊಲೀಸ್​ ಕೆಲಸಕ್ಕೆ ರಾಜೀನಾಮೆ ನೀಡಿದ ನಂತರ ಕೆಲಕಾಲ ಅಣ್ಣಾಮಲೈ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ನಂತರ ರಾಜಕೀಯಕ್ಕೆ ಇಳಿಯುವುದಾಗಿ ಘೋಷಿಸಿ, ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇದೀಗ ಬಿಜೆಪಿ ತಮಿಳುನಾಡು ಘಟಕದ ಉಪಾಧ್ಯಕ್ಷರಾಗಿದ್ದಾರೆ.

‘ಮುಂದಿನ ದಿನಗಳಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಿ. ಉತ್ತಮ ಜನಸೇವಕರಾಗಿ ಕೆಲಸ ಮಾಡಿ’ ಎಂದು ಅಣ್ಣಾಮಲೈ ಅವರಿಗೆ ಕಾಣಿಯೂರು ಶ್ರೀಪಾದರು ಹರಸಿದರು.

ಸಸಿಕಾಂಥ್ ಸೆಂಥಿಲ್ ಮತ್ತು ಅಣ್ಣಾಮಲೈ ಮೇಲೆ ನಿಂತಿದೆ ಎರಡು ರಾಷ್ಟ್ರೀಯ ಪಕ್ಷಗಳ ಭವಿಷ್ಯ!?

Published On - 10:34 pm, Mon, 21 December 20