ಕೊರೊನಾ ಹುಟ್ಟಿದ ಚೀನಾದಲ್ಲೇ ಲಸಿಕೆ ಸಿದ್ಧಪಡಿಸುತ್ತಿದೆಯೇ ಫೈಜರ್? ವೈರಲ್ ಆಯ್ತು ಫೋಟೋ
ಚೀನಾದಲ್ಲಿ ಮೊಟ್ಟ ಮೊದಲ ಬಾರಿಗೆ ಕೊರೊನಾ ವೈರಸ್ ಕಾಣಿಸಿಕೊಂಡಿತ್ತು. ಇದಾದ ನಂತರ ಎಲ್ಲ ರಾಷ್ಟ್ರಗಳಿಗೂ ಇದು ಹಬ್ಬಿತ್ತು. ಅಮೆರಿಕ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ಚೀನಾಗೆ ಹಿಡಿಶಾಪ ಹಾಕಿದ್ದವು. ಆದರೆ, ವಿಚಿತ್ರ ಎಂಬಂತೆ ಈಗ ಚೀನಾದಲ್ಲೇ ಕೊರೊನಾ ವೈರಸ್ಗೆ ಔಷಧ ಸಿದ್ಧವಾಗುತ್ತಿದೆಯಂತೆ.
ನವದೆಹಲಿ: ಕೊರೊನಾ ವೈರಸ್ ಸೋಂಕು ಹರಡಿದ ಬೆನ್ನಲ್ಲೇ ನಾನಾ ರಾಷ್ಟ್ರಗಳು ಚೀನಾದ ವಿರುದ್ಧ ಹರಿಹಾಯುತ್ತಿವೆ. ಆದರೆ ಇದೀಗ ಬ್ರಿಟನ್, ಅಮೆರಿಕ ಸೇರಿದಂತೆ ವಿಶ್ವದ ಹಲವು ದೇಶಗಳಿಗೆ ಕೊರೊನಾ ಸೋಂಕಿನ ವಿರುದ್ಧ ಲಸಿಕೆ ನೀಡುತ್ತಿರುವ ಫೈಜರ್ ಕಂಪನಿ, ಅದೇ ಚೀನಾದಿಂದಲೇ ಲಸಿಕೆ ತಯಾರಿಸುತ್ತಿದೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಫೋಟೋ ಇಂಥ ಪ್ರಶ್ನೆಗಳಿಗೆ ಮುಖ್ಯ ಕಾರಣವಾಗಿದೆ.
ಟ್ವಿಟರ್ನಲ್ಲಿ ಫೈಜರ್ ಸಂಸ್ಥೆ ತಯಾರಿಸುತ್ತಿರುವ ಕೊರೊನಾ ವೈರಸ್ ಲಸಿಕೆಯ ಫೋಟೋ ಒಂದು ವೈರಲ್ ಆಗಿದೆ. ಇದರ ಬಲಭಾಗದ ಕೆಳಮೂಲೆಯಲ್ಲಿ ಮೇಡ್ ಇನ್ ಚೀನಾ ಎಂದು ಬರೆಯಲಾಗಿದೆ. ಈ ಬಗ್ಗೆ ಸಾಕಷ್ಟು ಆಕ್ರೋಶ ಹಾಗೂ ಅನುಮಾನಗಳು ಮೂಡಿವೆ. ಅಲ್ಲದೆ, ಚೀನಾದಲ್ಲೇ ಈ ಔಷಧ ಸಿದ್ಧಪಡಿಸುತ್ತಿರುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಕೂಡ ಕೇಳಿ ಬಂದಿದೆ. ಆದರೆ ಈ ಚಿತ್ರದ ಸತ್ಯಾಸತ್ಯತೆ ಇನ್ನೂ ದೃಢಪಡಬೇಕಿದೆ.
Everything is made in China pic.twitter.com/m5CsI4NozF
— Carl Zha (@CarlZha) December 21, 2020
— OCD doll (@tinashehive) December 21, 2020
ಭಾರತಕ್ಕೆಂದೇ ವಿಶೇಷ ಕೊರೊನಾ ಲಸಿಕೆ ಸಿದ್ಧಪಡಿಸಲು ಮುಂದಾಯ್ತು ಫೈಜರ್.. ಏನಿದರ ಮರ್ಮ?