ರಜನಿಕಾಂತ್​ ಯೋಗಿ ಆದಿತ್ಯನಾಥ್​ರ ಕಾಲಿಗೆ ನಮಸ್ಕರಿಸಿದ್ದರಲ್ಲಿ ತಪ್ಪೇನಿದೆ ಎಂದ ಅಣ್ಣಾಮಲೈ

|

Updated on: Aug 23, 2023 | 7:53 AM

ಸೂಪರ್​ಸ್ಟಾರ್ ರಜನಿಕಾಂತ್ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath) ಅವರ ಕಾಲಿಗೆ ಬಿದ್ದಿದ್ದರಲ್ಲಿ ತಪ್ಪೇನಿದೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ. ಜೈಲರ್ ಸಿನಿಮಾ ಬಿಡುಗಡೆಯಾದ ಹೊಸ್ತಿಲಲ್ಲಿ ಸೂಪರ್​ಸ್ಟಾರ್ ರಜನಿಕಾಂತ್ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾದರು, ಈ ಸಮಯದಲ್ಲಿ ಯೋಗಿ ಕಾಲಿಗೆ ನಮಸ್ಕರಿಸಿದ್ದರು.

ರಜನಿಕಾಂತ್​ ಯೋಗಿ ಆದಿತ್ಯನಾಥ್​ರ ಕಾಲಿಗೆ ನಮಸ್ಕರಿಸಿದ್ದರಲ್ಲಿ ತಪ್ಪೇನಿದೆ ಎಂದ ಅಣ್ಣಾಮಲೈ
ರಜಿನಿಕಾಂತ್
Image Credit source: India Today
Follow us on

ಸೂಪರ್​ಸ್ಟಾರ್ ರಜನಿಕಾಂತ್ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath) ಅವರ ಕಾಲಿಗೆ ಬಿದ್ದಿದ್ದರಲ್ಲಿ ತಪ್ಪೇನಿದೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ. ಜೈಲರ್ ಸಿನಿಮಾ ಬಿಡುಗಡೆಯಾದ ಹೊಸ್ತಿಲಲ್ಲಿ ಸೂಪರ್​ಸ್ಟಾರ್ ರಜನಿಕಾಂತ್ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾದರು, ಈ ಸಮಯದಲ್ಲಿ ಯೋಗಿ ಕಾಲಿಗೆ ನಮಸ್ಕರಿಸಿದ್ದರು.

ಈ ಕುರಿತು ಅಣ್ಣಾಮಲೈ ಮಾತನಾಡಿ, ‘ಗೌರವಾರ್ಥವಾಗಿ ಯೋಗಿ ಅವರ ಕಾಲಿಗೆ ಬಿದ್ದಿದ್ದಾರೆ ಅದರಲ್ಲಿ ತಪ್ಪೇನಿಲ್ಲ, ಅವರು ಸನ್ಯಾಸಿ, ಜನರು ಅವರನ್ನು ಯೋಗಿ ಮಹಾರಾಜ್ ಎಂದೇ ಕರೆಯುತ್ತಾರೆ, ಯೋಗಿ ಅವರಿಗೆ ರಜನಿಕಾಂತ್ ತಮ್ಮ ಪ್ರೀತಿಯನ್ನು ತೋರಿಸಿದ್ದಾರೆ’ ಎಂದರು.
ಕೆಲವು ಕೆಲಸವಿಲ್ಲದ ರಾಜಕೀಯ ಪಕ್ಷಗಳು ಮತ್ತು ಅದರ ಮುಖಂಡರುಗಳು ಎಲ್ಲವನ್ನೂ ಟೀಕಿಸಲು ಪ್ರಾರಂಭಿಸಿದರೆ ಇದಕ್ಕೆ ಅಂತ್ಯವೆಂಬುದೇ ಇರುವುದಿಲ್ಲ.

ಡಿಎಂಕೆ ಸಚಿವ ಅನ್ಬಿಲ್ ಮಹೇಶ್ ಅವರಿಂದ 20 ರೂಪಾಯಿ ಪಡೆಯಲು ವ್ಯಕ್ತಿಯೊಬ್ಬರು ಅವರ ಕಾಲಿಗೆ ಬಿದ್ದ ಉದಾಹರಣೆ ಇದೆ ಎಂದು ಅವರು ಆರೋಪಿಸಿದರು. ತಮಿಳುನಾಡಿನ ಸಚಿವರು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಕಾಲಿಗೆ ಬೀಳುತ್ತಾರೆ.

ಮತ್ತಷ್ಟು ಓದಿ: ಯೋಗಿ ಆದಿತ್ಯನಾಥ್ ಕಾಲಿಗೆ ಬಿದ್ದ ರಜನಿಕಾಂತ್​; ಇಬ್ಬರ ನಡುವೆ ವಯಸ್ಸಿನ ಅಂತರ ಎಷ್ಟು?

ಅದೇ ರೀತಿ ಉದಯನಿಧಿ ಸ್ಟಾಲಿನ್ ಅವರಿಗಿಂತ ಹಿರಿಯ ಶಾಸಕರೊಬ್ಬರು ವಿಧಾನಸಭೆಯಲ್ಲಿ ಅವರಿಗೆ ನಮಸ್ಕರಿಸಿದ್ದರು. ರಜನಿಕಾಂತ್ ಅವರನ್ನು ಟೀಕಿಸುವ ಜನರು ಈ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾದ ನಂತರ ರಜನಿಕಾಂತ್ ಅವರು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರನ್ನು ಭೇಟಿಯಾದರು ಎಂದು ಅಣ್ಣಾಮಲೈ ತಿಳಿಸಿದರು . ರಜನಿಕಾಂತ್ ರಾಜಕೀಯ ಪಕ್ಷದ ನಾಯಕರೊಂದಿಗೆ ಆತ್ಮೀಯ ಸಂಬಂಧವನ್ನು ಹಂಚಿಕೊಂಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:53 am, Wed, 23 August 23