ಭೋಪಾಲ್ ಜನವರಿ 16: ಮಧ್ಯಪ್ರದೇಶದ (Madhya Pradesh) ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ (Kuno National Park)ಮಂಗಳವಾರ ಮಧ್ಯಾಹ್ನ ಮತ್ತೊಂದು ಚಿರತೆ ಸಾವಿಗೀಡಾಗಿದೆ. 2022 ರಲ್ಲಿ ಭಾರತದಲ್ಲಿ ಕರೆ ತಂದ ನಂತರ ಸಾವಿಗೀಡಾಗಿರುವ 10 ನೇ ಚಿರತೆ ಇದು. ನಮೀಬಿಯಾದ ಚಿರತೆಗೆ (Namibian cheetah)ಶೌರ್ಯ ಎಂದು ಹೆಸರಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಸಾವಿಗೆ ಕಾರಣ ತಿಳಿಯಲಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಇಲ್ಲಿಯವರೆಗೆ, ರಾಷ್ಟ್ರೀಯ ಉದ್ಯಾನವನದಲ್ಲಿ ಏಳು ಚಿರತೆ ಮತ್ತು ಮೂರು ಮರಿ ಚಿರತೆ ಸಾವಿಗೀಡಾಗಿದ್ದು, ವಿವಿಧ ಸೋಂಕುಗಳಿಂದ ಇವು ಸಾವಿಗೀಡಾಗಿವೆ.
“ಇಂದು, ಜನವರಿ 16, 2024 ರಂದು ಮಧ್ಯಾಹ್ನ 3:17 ರ ಸುಮಾರಿಗೆ, ನಮೀಬಿಯಾದ ಚಿರತೆ ಶೌರ್ಯ ಸತ್ತಿದೆ. ಬೆಳಿಗ್ಗೆ 11 ಗಂಟೆಗೆ, ಟ್ರ್ಯಾಕಿಂಗ್ ತಂಡವು ಅದಕ್ಕೆ ಅಸ್ವಸ್ಥತೆ ಇರುವುದನ್ನು ಗಮನಿಸಿತು. ನಂತರ ಅದಕ್ಕೆ ಅರವಳಿಕೆ ಚುಚ್ಚುಮದ್ದು ನೀಡಲಾಯಿತು. ಅದು ದುರ್ಬಲವಾಗಿತ್ತು ಎಂದು ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಲಯನ್ ಪ್ರಾಜೆಕ್ಟ್ ನಿರ್ದೇಶಕರು ಹೇಳಿದ್ದಾ
ಇದರ ನಂತರ ಚಿರತೆ ಸ್ವಲ್ಪ ಚೇತರಿಸಿಕೊಂಡಿದ್ದು, ನಂತರ ಕ್ಷೀಣಿಸಿತು. ಆಮೇಲೆ ಅದು CPR ಗೆ ಪ್ರತಿಕ್ರಿಯಿಸಲು ವಿಫಲವಾಯಿತು. ಮರಣೋತ್ತರ ಪರೀಕ್ಷೆಯ ನಂತರ ಸಾವಿನ ಕಾರಣವನ್ನು ಕಂಡುಹಿಡಿಯಬಹುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕುನೋದಲ್ಲಿ ಕೊನೆಯ ಮತ್ತು ಒಂಬತ್ತನೇ ಚಿರತೆಯ ಸಾವು ಕಳೆದ ವರ್ಷ ಆಗಸ್ಟ್ 2 ರಂದು ವರದಿಯಾಗಿದೆ. ಕಳೆದ ಎರಡು ಸಾವುಗಳಿಗೆ ಮಳೆಗಾಲದಲ್ಲಿ ಕೀಟಗಳಿಂದ ಉಂಟಾದ ಸೋಂಕುಗಳು ಕಾರಣ ಎಂದು ಸರ್ಕಾರ ಸಂಸತ್ತಿನಲ್ಲಿ ಉಲ್ಲೇಖಿಸಿತ್ತು. 1952 ರಲ್ಲಿ ಭಾರತದಲ್ಲಿ ಚಿರತೆಗಳು ಅಳಿವಿನಂಚಿನಲ್ಲಿವೆ ಎಂದು ಘೋಷಿಸಲಾಯಿತು. 2022 ರಲ್ಲಿ ಮತ್ತೆ 20 ಚಿರತೆಗಳನ್ನು ವಿದೇಶದಿಂದ ಕುನೋ ಪಾರ್ಕ್‌ಗೆ ತರಲಾಯಿತು. ಚಿರತೆಗಳನ್ನು ನಮೀಬಿಯಾ (2022) ಮತ್ತು ದಕ್ಷಿಣ ಆಫ್ರಿಕಾ (2023)ದಿಂದ ಎರಡು ಬ್ಯಾಚ್‌ಗಳಲ್ಲಿ ತರಲಾಗಿತ್ತು.
ಕಳೆದ ವರ್ಷ ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿ ಅವರು ನಮೀಬಿಯಾದಿಂದ ತಂದ ಚಿರತೆಗಳ ಗುಂಪನ್ನು ಕುನೊದಲ್ಲಿನ ಆವರಣಕ್ಕೆ ಬಿಡುಗಡೆ ಮಾಡಿದಾಗ ಈ ಉಪಕ್ರಮವು ಪ್ರಾರಂಭವಾಯಿತು. ಅಂದಿನಿಂದ ಉದ್ಯಾನದಲ್ಲಿ ನಾಲ್ಕು ಮರಿಗಳು ಜನಿಸಿದವು, ಆದರೆ ಅವುಗಳಲ್ಲಿ ಮೂರು ಮತ್ತು ಇತರ ಆರು ಚಿರತೆ ಐದು ತಿಂಗಳಲ್ಲಿ ಸಾವಿಗೀಡಾಗಿದೆ.
ಇದನ್ನೂ ಓದಿ: ಕೊಪ್ಪಳದ ಬಸ್ಸಾಪುರದ ಗುಡ್ಡದಲ್ಲಿ ಚಿರತೆ ಓಡಾಟ, ಗ್ರಾಮಸ್ಥರು ಎಚ್ಚರದಿಂದಿರಲು ಡಂಗುರ
ಇಂದು 10ನೇ ಚಿರತೆಯ ಸಾವು ವರದಿಯಾಗಿದೆ. ಹೀಗೆ ಒಂದರ ಹಿಂದೆ ಒಂದು ಚಿರತೆಗಳ ಸಾವು ವಿಷಯವು ಕಳೆದ ವರ್ಷ ಸುಪ್ರೀಂ ಕೋರ್ಟ್‌ಗೆ ತಲುಪಿತ್ತು, ಭಾರತದಲ್ಲಿ ಚಿರತೆಗಳನ್ನು ಮರು ಪರಿಚಯಿಸುವ ಕ್ರಮಗಳ ಬಗ್ಗೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಲು ಯಾವುದೇ ಕಾರಣವಿಲ್ಲ ಎಂದು ಅದು ಹೇಳಿದೆ. ಚಿರತೆ ಪ್ರಾಜೆಕ್ಟ್ ಮುಖ್ಯಸ್ಥ ಎಸ್ಪಿ ಯಾದವ್ ಅವರು ಗಾಂಧಿ ಸಾಗರ್ ವನ್ಯಜೀವಿ ಅಭಯಾರಣ್ಯದಲ್ಲಿ ಪರಿಚಯಿಸಲು ಮತ್ತೊಂದು ಬ್ಯಾಚ್ ಚಿರತೆಗಳನ್ನು ದಕ್ಷಿಣ ಆಫ್ರಿಕಾದಿಂದ ತರಲಾಗುವುದು ಎಂದು ಪಿಟಿಐಗೆ ತಿಳಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ