ಒಡಿಶಾ: ಒಡಿಶಾದಲ್ಲಿ (Odisha) ಇಬ್ಬರು ರಷ್ಯನ್ ಪ್ರಜೆಗಳು ಶವವಾಗಿ ಪತ್ತೆಯಾದ ಕೆಲವೇ ದಿನಗಳ ಬಳಿಕ ಇಂದು ಜಗತ್‌ಸಿಂಗ್‌ಪುರ ಜಿಲ್ಲೆಯ ಪಾರಾದಿಪ್ ಬಂದರಿನಲ್ಲಿ ಸರಕು ಹಡಗಿನಲ್ಲಿ ರಷ್ಯಾದ (Russian Man) ಇನ್ನೊಬ್ಬ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾರೆ. ಕೇವಲ 15 ದಿನಗಳೊಳಗೆ ಈ ಘಟನೆಗಳು ನಡೆದಿರುವುದರಿಂದ ಈ ಸಾವುಗಳು ಸಾಕಷ್ಟು ಸಂಚಲನ ಮೂಡಿಸಿವೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯುದ್ಧವನ್ನು ಟೀಕಿಸಿದ ಇತರ ಇಬ್ಬರು ರಷ್ಯಾದ ಪ್ರಜೆಗಳು 15 ದಿನಗಳ ಹಿಂದೆ ಒಡಿಶಾದ ರಾಯಗಢ ಹೋಟೆಲ್‌ನಲ್ಲಿ ನಿಗೂಢವಾಗಿ ಶವವಾಗಿ ಪತ್ತೆಯಾಗಿದ್ದರು ಎಂಬುದು ಗಮನಿಸಬೇಕಾದ ವಿಷಯ.
ಇದೀಗ ಮೃತರಾದ ವ್ಯಕ್ತಿಯನ್ನು ಸೆರ್ಗಿ ಮಿಲ್ಯಕೋವ್ (51) ಎಂದು ಪೊಲೀಸರು ಗುರುತಿಸಿದ್ದಾರೆ. ಹೃದಯಾಘಾತದಿಂದ ಆತ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಆತ ಸರಕು ಸಾಗಣೆ ಹಡಗಿನ ಸಿಬ್ಬಂದಿಗಳಲ್ಲಿ ಒಬ್ಬರಾಗಿದ್ದರು ಎಂದು ತಿಳಿದು ಬಂದಿದೆ. ಮರಣೋತ್ತರ ಪರೀಕ್ಷೆಯ ನಂತರವಷ್ಟೇ ಅವರ ಸಾವಿಗೆ ಕಾರಣ ತಿಳಿಯಲಿದೆ.
ಇದನ್ನೂ ಓದಿ: shocking ಹೊಸ ವರ್ಷಾಚರಣೆ ವೇಳೆ ಭೀಕರ ಅಪಘಾತ, ಯುವತಿಯನ್ನು ಎಳೆದೊಯ್ದಿ ಕಾರು: 4ಕಿ.ಮೀ ದೂರದಲ್ಲಿ ಶವ ಪತ್ತೆ
ನಮ್ಮ ಪ್ರಾಥಮಿಕ ತನಿಖೆಯ ಪ್ರಕಾರ, ಆ ವ್ಯಕ್ತಿ ಹಡಗಿನಲ್ಲಿ ಇದ್ದಕ್ಕಿದ್ದಂತೆ ಕುಸಿದುಬಿದ್ದರು. ಅವರು ಹೃದಯಾಘಾತದಿಂದ ಸಾವನ್ನಪ್ಪಿರುವ ಸಾಧ್ಯತೆ ಹೆಚ್ಚಾಗಿದೆ ಎಂದು ಜಗತ್‌ಸಿಂಗ್‌ಪುರದ ಎಸ್‌ಪಿ ಅಖಿಲೇಶ್ವರ್ ಸಿಂಗ್ ತಿಳಿಸಿದ್ದಾರೆ.
ರಷ್ಯಾದ ಶಾಸಕ ಮತ್ತು ಮಿಲಿಯನೇರ್ ಪಾವೆಲ್ ಆಂಟೋವ್ ಡಿಸೆಂಬರ್ 25ರಂದು ಒಡಿಸ್ಸಾದ ಹೋಟೆಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ಮಿಲಿಯನೇರ್ ತಮ್ಮ 65ನೇ ಹುಟ್ಟುಹಬ್ಬದ ಆಚರಣೆಗಾಗಿ ಒಡಿಶಾದ ರಾಯಗಢ ಪ್ರದೇಶದಲ್ಲಿ ವಿಹಾರಕ್ಕೆ ತೆರಳಿದ್ದರು. ಪೊಲೀಸರ ಪ್ರಕಾರ, ಆಂಟೋವ್ ತನ್ನ ಹೋಟೆಲ್ ಕಟ್ಟಡದ 3ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: Crime News: ಬಿಜೆಪಿ ಮಾಜಿ ಶಾಸಕರ ಮನೆ ಹಿಂದೆ ಮಹಿಳೆಯ ಕೊಳೆತ ಶವ ಪತ್ತೆ
ಇದೇ ಹೋಟೆಲ್‌ನಲ್ಲಿ ಒಂದು ವಾರದ ಅವಧಿಯಲ್ಲಿ ರಷ್ಯಾದ ಶಾಸಕರ ಎರಡನೇ ಸಾವು ಇದಾಗಿದೆ. ಆಂಟೊವ್ ಅವರ ಸಾವು ಅವರ ಪಕ್ಷದ ಸಹೋದ್ಯೋಗಿ ವ್ಲಾಡಿಮಿರ್ ಬುಡಾನೋವ್ (61) ಅವರ ನಿಗೂಢ ಸಾವು ಸಂಭವಿಸಿ 2 ದಿನಗಳ ನಂತರ ನಡೆದಿತ್ತು. ಅವರು ಒಡಿಶಾದ ಹೋಟೆಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು.